AI Minister: ವಿಶ್ವದ ಮೊದಲ ಎಐ ಮಿನಿಸ್ಟರ್ ನೇಮಿಸಿದ ಅಲ್ಬೇನಿಯಾ ದೇಶ: ಏನೆಲ್ಲ ಕೆಲಸ ಮಾಡುತ್ತೆ?
ಈಗೆಲ್ಲ ರಾಜಕಾರಣಿಗಳು ಅಂದ್ರೆ ಭ್ರಷ್ಟಾಚಾರ, ಲಂಚಕ್ಕೆ ಹೆಸರುವಾಸಿ. ಆದರೆ ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವುಳ್ಳ ಮಂತ್ರಿಯನ್ನು ಅಲ್ಬೇನಿಯಾ ದೇಶ ನೇಮಿಸಿದೆ. ಈ ಎಐ ಮಿನಿಸ್ಟರ್‌ಗೆ ಡೈಯೆಲ್ಲಾ (Diella) ಎಂದು ಹೆಸರಿಡಲಾಗಿದೆ. ಮತ್ತು ಭ್ರಷ್ಟಾಚಾರವನ್ನು ನಿಭಾಯಿಸುವ ಕಾರ್ಯವನ್ನು ಅವರಿಗೆ ವಹಿಸಲಾಗಿದೆ ಎಂದು ಅಲ್ಬೇನಿಯನ್ ಪ್ರಧಾನಿ ಎಡಿ ರಾಮಾ ಹೇಳಿದ್ದಾರೆ.
ಈ ಮೂಲಕ ಅಲ್ಬೇನಿಯಾ ಎಐ ಮಂತ್ರಿಯನ್ನು ನೇಮಿಸಿದ ವಿಶ್ವದ ಮೊದಲ ದೇಶವಾಗಿದೆ. ಪಿಕ್ಸೆಲ್‌ಗಳು ಮತ್ತು ಕೋಡ್‌ನಿಂದ ಮಾಡಲ್ಪಟ್ಟ ಸರ್ಕಾರದ ವರ್ಚುವಲ್ ಸದಸ್ಯೆಯಾಗಿ ಡೈಯೆಲ್ಲಾ ನೇಮಕಗೊಂಡಿದ್ದಾರೆ. ಮೇ ತಿಂಗಳಿನಲ್ಲಿ ನಡೆದ ದೊಡ್ಡ ಚುನಾವಣಾ ಗೆಲುವಿನ ನಂತರ ನಡೆದ ತಮ್ಮ ಸಮಾಜವಾದಿ ಪಕ್ಷದ ಸಭೆಯಲ್ಲಿ ತಮ್ಮ ಹೊಸ ಸಚಿವ ಸಂಪುಟವನ್ನು ಮಂಡಿಸಿದ್ದರು. ಈ ವೇಳೆ ಎಐ ಮಿನಿಸ್ಟರ್ ಡಿಯೆಲ್ಲಾ ಸಾರ್ವಜನಿಕ ಟೆಂಡರ್‌ಗಳನ್ನು ನೋಡಿಕೊಳ್ಳಲಿದ್ದಾರೆ. ಅದರ ಕೃತಕ ಬುದ್ಧಿಮತ್ತೆಯು ತಮ್ಮ ಸರ್ಕಾರವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

2.8 ಮಿಲಿಯನ್ ಸಂಖ್ಯೆ ಹೊಂದಿರುವ ಅಲ್ಬೇನಿಯಾದಲ್ಲಿ ಸಾರ್ವಜನಿಕ ಟೆಂಡರ್‌ಗಳನ್ನು ನೀಡುವುದು ಬಹಳ ಹಿಂದಿನಿಂದಲೂ ಭ್ರಷ್ಟಾಚಾರ ಹಗರಣಗಳಿಗೆ ಮೂಲವಾಗಿದೆ. ಅಲ್ಲದೆ ಪ್ರಪಂಚದಾದ್ಯಂತ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಿಂದ ತಮ್ಮ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ಪ್ರಯತ್ನಿಸುವ ಗ್ಯಾಂಗ್‌ಗಳ ಕೇಂದ್ರವೂ ಆಗಿದೆ. ಈ ಹಿನ್ನೆಲೆ ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ ಈ ಮಹತ್ವದ ಹೆಜ್ಜೆ ಇಟ್ಟಿದೆ.
ಎಐ ಮಿನಿಸ್ಟರ್ ಕೆಲಸ ಹೇಗೆ?
ಡೀಯೆಲ್ಲಾ ಭೌತಿಕವಾಗಿ ಇಲ್ಲದ ಮೊದಲ ಕ್ಯಾಬಿನೆಟ್ ಸದಸ್ಯೆ. ಆದರೆ ವಾಸ್ತವಿಕವಾಗಿ ಎಐನಿಂದ ರಚಿಸಲ್ಪಟ್ಟವರು ಎಂದು ರಾಮಾ ಅವರನ್ನು ಪರಿಚಯಿಸಿದ್ದಾರೆ. ಅವರು ಅಲ್ಬೇನಿಯಾವನ್ನು ಸಾರ್ವಜನಿಕ ಟೆಂಡರ್‌ಗಳು ಶೇ 100ರಷ್ಟು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿ ಮಾಡಲು ಸಹಾಯ ಮಾಡುತ್ತಾರೆ. ಚುನಾವಣೆಯಲ್ಲಿ ನಾಲ್ಕನೇ ಅವಧಿಗೆ ಅಧಿಕಾರ ವಹಿಸಿಕೊಂಡಿರುವ ಅವರು, ಸಾರ್ವಜನಿಕ ಟೆಂಡರ್‌ಗಳ ಎಲ್ಲ ನಿರ್ಧಾರಗಳನ್ನು ಡಿಯೆಲ್ಲಾ ಅವರಿಗೆ ವಹಿಸಲಾಗುವುದು. ಟೆಂಡರ್ ಕಾರ್ಯವಿಧಾನಕ್ಕೆ ಸಲ್ಲಿಸಲಾದ ಪ್ರತಿಯೊಂದು ಸಾರ್ವಜನಿಕ ನಿಧಿಯನ್ನು ಸಂಪೂರ್ಣವಾಗಿ ಪಾರದರ್ಶಕವನ್ನಾಗಿ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ಯುರೋಪಿಯನ್ ಒಕ್ಕೂಟಕ್ಕೆ ಸೇರುವ ಅಲ್ಬೇನಿಯಾದ ಪ್ರಯತ್ನದಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟ ಪ್ರಮುಖ ಮಾನದಂಡವಾಗಿದೆ. 2030 ರ ವೇಳೆಗೆ ಅಲ್ಬೇನಿಯಾವನ್ನು ರಾಜಕೀಯ ಬಣಕ್ಕೆ ಕರೆದೊಯ್ಯುವುದು ರಾಮಾ ಅವರ ಆಶಯ ಎಂದು ಹೇಳಿಕೊಂಡಿದ್ದಾರೆ. ಡೈಯೆಲ್ಲಾ ಅವರನ್ನು ಜನವರಿಯಲ್ಲಿ ಇ-ಅಲ್ಬೇನಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಎಐ ಚಾಲಿತ ವರ್ಚುವಲ್ ಸಹಾಯಕರಾಗಿ ಮೊದಲು ಪ್ರಾರಂಭಿಸಲಾಯಿತು.
ಇದು ನಾಗರಿಕರು ಮತ್ತು ವ್ಯವಹಾರಗಳು ರಾಜ್ಯ ದಾಖಲೆಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಡೈಯೆಲ್ಲಾ ಸಾಂಪ್ರದಾಯಿಕ ಅಲ್ಬೇನಿಯನ್ ಉಡುಪನ್ನು ಧರಿಸಿ, ಅವರು ಧ್ವನಿ ಆಜ್ಞೆಗಳ ಮೂಲಕ ಸಹಾಯವನ್ನು ಒದಗಿಸುತ್ತಾರೆ. ಎಲೆಕ್ಟ್ರಾನಿಕ್ ಸ್ಟ್ಯಾಂಪ್‌ಗಳೊಂದಿಗೆ ದಾಖಲೆಗಳನ್ನು ನೀಡುತ್ತಾರೆ. ಅಂಕಿಅಂಶಗಳ ಪ್ರಕಾರ ಇಲ್ಲಿಯವರೆಗೆ ಡಿಯೆಲ್ಲಾ 36,600 ಡಿಜಿಟಲ್ ದಾಖಲೆಗಳನ್ನು ನೀಡಲು ಸಹಾಯ ಮಾಡಿದ್ದಾರೆ. ಸುಮಾರು 1,000 ಸೇವೆಗಳನ್ನು ಒದಗಿಸಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications