YouTube ಯೂಟ್ಯೂಬ್‌ಗೂ ಬಂತು ಎಐ: ಇನ್ಮುಂದೆ ಹಲವು ವಿಡಿಯೋ ನೋಡಬೇಕಾಗಿಲ್ಲ!
YouTube: ಎಐಗೆ ಸಂಬಂಧಿಸಿದಂತೆ ದಿನಕ್ಕೊಂದು ಮಹತ್ವದ ಬದಲಾವಣೆಗಳು ಆಗುತ್ತಿದ್ದು. ಇದೀಗ ಸೋಷಿಯಲ್ ಮೀಡಿಯಾ ಬಳಸುವವರಿಗೆ ಮತ್ತೊಂದು ಪ್ರಮುಖ ಗುಡ್‌ನ್ಯೂಸ್ ನೀಡಲಾಗಿದೆ. ಹೌದು ಎಐ ತಂತ್ರಜ್ಞಾನದಿಂದ ಉದ್ಯೋಗ ಕಡಿತವಾಗಲಿದೆ ಸಮಸ್ಯೆ ಆಗಲಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆಯಾದರೂ ಅದರ ಹೊರತಾಗಿ ಎಐ ಹೊಸ ತಂತ್ರಜ್ಞಾನದಿಂದ ಹಲವು ಉಪಯೋಗಗಳು ಆಗುತ್ತಿವೆ. ಇದರ ಭಾಗವಾಗಿ ಯೂಟ್ಯೂಬ್‌ಗೂ ಎಐ ಎಂಟ್ರಿ ಕೊಟ್ಟಿದೆ. ಇದರ ಸಂಪೂರ್ಣ ಅಪ್ಡೇಟ್ಸ್ ಇಲ್ಲಿದೆ.
ಉಳಿದ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಯೂಟ್ಯೂಬ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ದೇಶದಲ್ಲಿ ಯೂಟ್ಯೂಬ್ ಬಳಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಲಾಗಿದೆ. ಯೂಟ್ಯೂಬ್ ಬಳಕೆದಾರರ ಸ್ನೇಹಿ ಆಗುತ್ತಿದ್ದು. ಯೂಟ್ಯೂಬ್ ಬಳಸುತ್ತಿರುವವರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಲಾಗಿದೆ. ಬಳಕೆದಾರರಿಗೆ ಮಾಹಿತಿ ಹಾಗೂ ಅವರು ಹುಡುಕುವ ವಿಷಯಗಳನ್ನು ವೇಗವಾಗಿ ಪಡೆದುಕೊಳ್ಳುವಂತೆ ಹಾಗೂ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಗುರಿ ಇರುವ AI ಕ್ಯಾರೋಸೆಲ್ ಸೇರಿದಂತೆ ಎರಡು ಹೊಸ ಕೃತಕ ಬುದ್ಧಿಮತ್ತೆ / ಎಐ ತಂತ್ರಜ್ಞಾನ ಫೀಚರ್ ಅನ್ನು YouTube ಹೊರತರುತ್ತಿದೆ. ಈ ಮೂಲಕ ಇನ್ಮುಂದೆ ಯೂಟ್ಯೂಬ್ ಬಳಕೆ ಇನ್ನಷ್ಟು ಸುಲಭ ಅಲ್ಲದೇ ಆಕರ್ಷಕವೂ ಆಗಿರಲಿದೆ. ಯೂಟ್ಯೂಬ್ ಬಳಕೆದಾರರಿಗೆ ಹಲವು ಹೊಸ ಅವಕಾಶಗಳನ್ನು ನೀಡಲಾಗಿದೆ.

ಯೂಟ್ಯೂಬ್ ಸೇರಿದಂತೆ ವಿವಿಧ ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರಂಗಳಲ್ಲಿ ಶಾರ್ಟ್ ಸೇರಿದಂತೆ ಹಲವು ಹೊಸ ಫೀಚರ್‌ಗಳು ಇತ್ತೀಚಿನ ವರ್ಷಗಳಲ್ಲಿ ಪರಿಚಯಿಸಲಾಗಿದೆ. ಯೂಟ್ಯೂಬ್ ವಿಡಿಯೋ ಲಿಂಕ್‌ಗಳನ್ನು ಹುಡುಕುವುದು ಇನ್ಮುಂದಿನ ದಿನಗಳಲ್ಲಿ ಇನ್ನಷ್ಟು ಸುಲಭವಾಗುವ ಸಾಧ್ಯತೆ ಇದೆ. ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ ಈ ವಿಚಾರವನ್ನು ಹಂಚಿಕೊಳ್ಳುವಾಗಿದ್ದು. ಮಹತ್ವದ ಅಪ್ಡೇಟ್ಸ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಈ ಹೊಸ ಫೀಚರ್‌ಗಳು ಮೊದಲು ಅಮೆರಿಕದಲ್ಲಿ ಆಯ್ದ ಬಳಕೆದಾರರೊಂದಿಗೆ ಪ್ರಯೋಗಿಕವಾಗಿ ಬಳಕೆಯಾಗುತ್ತಿದೆ.
ಯೂಟ್ಯೂಬ್‌ನಲ್ಲಿ AI ತಂತ್ರಜ್ಞಾನ ಅಳವಡಿಕೆಗೆ ಸಂಬಂಧಿಸಿದಂತೆ ಹೊಸ ತಂತ್ರಾಂಶಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ವೀಕ್ಷಕರು ನೋಡುವುದು ಮತ್ತು ಕಲಿಕೆಯ ಅನುಭವವನ್ನು ಸುಧಾರಿಸಲು ಹೊಸ ಎಐ ತಂತ್ರಜ್ಞಾನ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಇದು ಪ್ರಾರಂಭಿಕವಾಗಿ ಪ್ರಯೋಗದ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಪರಿಚಯಿಸುವ ಸಾಧ್ಯತೆ ಇದೆ.
AI ಕ್ಯಾರೋಸೆಲ್ ಸ್ಮಾರ್ಟ್ ಹುಡುಕಾಟ: AI ಚಾಲಿತ ಹುಡುಕಾಟ ಫಲಿತಾಂಶಗಳ ಕ್ಯಾರೋಸೆಲ್ ಪರಿಚಯಿಸುವುದು ಪ್ರಮುಖ ಬದಲಾವಣೆ ಆಗಿದೆ. ಬಳಕೆದಾರರು ಶಾಪಿಂಗ್, ಪ್ರಯಾಣ ಹಾಗೂ ಸ್ಥಳೀಯ ಪ್ರಸಿದ್ಧ ವಿಷಯಗಳನ್ನು ಹುಡುಕುವಾಗ YouTube ಇನ್ಮುಂದೆ ಫಲಿತಾಂಶಗಳ ಮೇಲ್ಭಾಗದಲ್ಲಿ ಸ್ಕ್ರೋಲ್ ಮಾಡಬಹುದಾದ ಕ್ಯಾರೋಸೆಲ್ ಆಯ್ಕೆಯನ್ನು ತೋರಿಸಬಹುದು. ಈಗಾಗಲೇ ಗೂಗಲ್‌ನಲ್ಲಿ ಈ ಎಐ ಆಯ್ಕೆ ಸಾರಾಂಶ ಸಿಗುತ್ತಿದೆ. ಬಹು ವೀಡಿಯೊಗಳನ್ನು ಕ್ಲಿಕ್ ಮಾಡದೆಯೇ ಬಳಕೆದಾರರು ಅವರಿಗೆ ಬೇಕಾಗುವ ಮಾಹಿತಿಗಳನ್ನು ಒಂದೇ ವಿಡಿಯೋದಲ್ಲಿ ಸಿಗುವಂತೆ ಮಾಡುವುದು ಈ ಫೀಚರ್‌ನ ಉದ್ದೇಶವಾಗಿದೆ ಎಂದು ಹೇಳಲಾಗಿದೆ. ಮೊದಲ ಹಂತದಲ್ಲಿ ಹಾಗೂ ಪ್ರಾಯೋಗಿಕವಾಗಿ US ನಲ್ಲಿ ಆಯ್ದ YouTube ಪ್ರೀಮಿಯಂ ಸದಸ್ಯರಿಗೆ ಈ ಸೇವೆ ಸಿಗಲಿದೆ ಎನ್ನಲಾಗಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ!












Click it and Unblock the Notifications