ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.20ರ ವೇಳೆಗೆ ಭಾರತದಲ್ಲಿ 341.13 ಲಕ್ಷ ಹೆಕ್ಟೇರ್‌ ಗೋಧಿ ಬಿತ್ತನೆ

|
Google Oneindia Kannada News

ಬೆಂಗಳೂರು, ಜನವರಿ 22: ಈ ವರ್ಷದ ರಾಬಿ ಋತುವಿನಲ್ಲಿ ಪ್ರಮುಖ ಬೆಳೆಯಾದ ಗೋಧಿ ಬಿತ್ತನೆ ಮತ್ತೆ ತುಸು ಏರಿಕೆ ಕಂಡಿದೆ. ಜನವರಿ 20 ರವರೆಗೂ ಒಂದಷ್ಟು ಕಡೆಗಳಲ್ಲಿ ಬಿತ್ತನೆ ಕಂಡು ಬಂದಿದೆ. ಇದರಿಂದ ಬಿತ್ತನೆ ಪ್ರಮಾಣದಲ್ಲಿ ಏರಿಕೆ ಆಗಿದೆ.

ಈ ಕುರಿತು ಕೇಂದ್ರ ಕೃಷಿ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 2022-23ರ ಪ್ರಸಕ್ತ ರಾಬಿ ಬೆಳೆಯ ಋತುವಿನಲ್ಲಿ (ಜುಲೈ-ಜೂನ್) ಇದುವರೆಗಿನ ಗೋಧಿ ಬಿತ್ತನೆ 341.13 ಲಕ್ಷ ಹೆಕ್ಟೇರ್‌ಗಿಂತಲೂ ಹೆಚ್ಚಾಗಿದೆ.

ಪ್ರಸಕ್ತ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ಗೋಧಿ ಬಿತ್ತನೆ ಅಕ್ಟೋಬರ್‌ನಿಂದ ಆರಂಭವಾಯಿತು. ರಾಬಿ ಬೆಳೆಗಳಾದ ಜೋಳ ಹೆಸರು ಬೇಳೆ ಮತ್ತು ಸಾಸಿವೆ ಇತರ ಪ್ರಮುಖ ರಾಬಿ ಬೆಳೆಗಳು ಏಪ್ರಿಲ್‌ನಲ್ಲಿ ಕೊಯ್ಲಾಗುವ ಸಾಧ್ಯತೆ ಇದೆ.

Wheat sowing increased above 341.13 lakh hectare till January 20 in India

2023ರ ಜನವರಿ 20 ರವರೆಗೆ ಗೋಧಿ ವ್ಯಾಪ್ತಿಯ ಪ್ರದೇಶ 341.13 ಲಕ್ಷ ಹೆಕ್ಟೇರ್‌ಗೆ ಏರಿಕೆ ಆಗಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ ಗೋಧಿ ಬಿತ್ತನೆ 339.87 ಲಕ್ಷ ಹೆಕ್ಟೇರ್ ಕಂಡಿತ್ತು. ಇನ್ನೂ ದೇಶದ ಇತರೆ ಗೋಧಿ ಬಿತ್ತನೆ ರಾಜ್ಯಗಳ ಬಿತ್ತನೆ ಪ್ರಮಾಣ ನೋಡುವುದಾದರೆ ರಾಜಸ್ಥಾನದಲ್ಲಿ 2.52 ಲಕ್ಷ ಹೆಕ್ಟೇರ್, ಬಿಹಾರ ರಾಜ್ಯದಲ್ಲಿ ಇದುವರೆಗೆ 1.49 ಲಕ್ಷ ಹೆಕ್ಟೇರ್, ಮಹಾರಾಷ್ಟ್ರ 0.92 ಲಕ್ಷ ಹೆಕ್ಟೇರ್, ಛತ್ತೀಸ್‌ಗಢ 0.54 ಲಕ್ಷ ಹೆಕ್ಟೇರ್, ಗುಜರಾತ್ 0.48 ಲಕ್ಷ ಹೆಕ್ಟೇರ್ ಹಾಗೂ ಉತ್ತರ ಪ್ರದೇಶ 0.22 ಲಕ್ಷ ಹೆಕ್ಟೇರ್ ಬಿತ್ತನೆ ಆಗಿದೆ.

ಅದೇ ರೀತಿ ಕಡಿಮೆ ಗೋಧಿ ಬೆಳೆಯುವ ರಾಜ್ಯಗಳಲ್ಲಿ ಇದುವರೆಗೆ ಮಧ್ಯಪ್ರದೇಶ ರಾಜ್ಯದಲ್ಲಿ 4.15 ಲಕ್ಷ ಹೆಕ್ಟೇರ್, ಜಾರ್ಖಂಡ್ 0.34 ಲಕ್ಷ ಹೆಕ್ಟೇರ್, ಪಂಜಾಬ್ 0.18 ಲಕ್ಷ ಹೆಕ್ಟೇರ್, ಹಿಮಾಚಲ ಪ್ರದೇಶ 0.10 ಲಕ್ಷ ಹೆಕ್ಟೇರ್, ಹರಿಯಾಣ 0.10 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಗೋಧಿ, ಭತ್ತ, ಎಣ್ಣೆಕಾಳು ಬೀಜ ಬಿತ್ತನೆಯಲ್ಲಿ ಸ್ವಲ್ಪ ಏರಿಕೆ

ಲಭ್ಯ ಅಂಕಿ ಅಂಶಗಳು ಪ್ರಕಾರ ದೇಶದಲ್ಲಿ ಭತ್ತದ ಬೀತ್ತನೆಯಲ್ಲೂ ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಭತ್ತ 23.64 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಈ ಬಾರಿ 31.54 ಲಕ್ಷ ಹೆಕ್ಟೇರ್‌ಗೆ ಏರಿಕೆ ಆಗಿದೆ. ಇನ್ನೂ ದ್ವಿದಳ ಧಾನ್ಯಗಳ ವಿಸ್ತೀರ್ಣವು 163.7 ಲಕ್ಷ ಹೆಕ್ಟೇರ್‌ಗೆ ಪ್ರದೇಶದಿಂದ ಈ ವರ್ಷ 164.12 ಲಕ್ಷ ಹೆಕ್ಟೇರ್‌ಗೆ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ.

Wheat sowing increased above 341.13 lakh hectare till January 20 in India

ಇಷ್ಟೇ ಅಲ್ಲದೇ ಎಣ್ಣೆಬೀಜಗಳನ್ನು ಈ ವರ್ಷ ರೈತರು ಹೆಚ್ಚು ಬಿತ್ತನೆ ಮಾಡಿದೆ. ಇದುವರೆಗೆ ದೇಶದಲ್ಲಿ 108.11 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ವಿವಿಧ ಬಗೆಯಎಣ್ಣೆ ಬೀಜಗಳ ಬಿತ್ತನೆ ಆಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 100.44 ಲಕ್ಷ ಹೆಕ್ಟೇರ್‌ ಆಗಿತ್ತು. ಇನ್ನೂ ರೇಪ್ಸೀಡ್-ಸಾಸಿವೆ ಬೀಜಗಳ ಬಿತ್ತನೆ ಹಿಂದಿನ 90.18 ಲಕ್ಷ ಹೆಕ್ಟೇರ್‌ನಿಂದ ಈ ವರ್ಷ 97.1 ಲಕ್ಷ ಹೆಕ್ಟೇರ್‌ಗೆ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

ಒಂದು ವರ್ಷದ ಹಿಂದೆ 676.97 ಲಕ್ಷ ಹೆಕ್ಟೇರ್‌ನಿಂದ ಪ್ರಸಕ್ತ ರಬಿ ಹಂಗಾಮಿನ ಜನವರಿ 20 ರವರೆಗೆ ಎಲ್ಲಾ ರೀತಿಯ ರಬಿ ಬೆಳೆಗಳಿಗೆ ಬಿತ್ತನೆಯಾದ ಒಟ್ಟು ಪ್ರದೇಶವು 696.35 ಲಕ್ಷ ಹೆಕ್ಟೇರ್‌ಗೆ ಹೆಚ್ಚಾಗಿದೆ.

English summary
Wheat sowing increased above 34 1.13 lakh hectare till January 20 in India, says Ministry of Agriculture data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X