ನ್ಯಾನೋ ಯೂರಿಯಾ; ಒಂದು ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮಾನ

ಧಾರವಾಡ, ಆಗಸ್ಟ್ 21: ರೈತರು ರಸಗೊಬ್ಬರಕ್ಕಾಗಿ ಹೆಚ್ಚು ಅಲೆದಾಟ ನಡೆಸದೇ ನ್ಯಾನೋ ಯೂರಿಯಾ ದ್ರಾವಣವನ್ನು ಬಳಸಬೇಕು. ನ್ಯಾನೋ ಯೂರಿಯಾ ಒಂದು ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮಾನಾಗಿದೆ ಎಂದು ಕೃಷಿ ಇಲಾಖೆ ರೈತರಿಗೆ ಮಾಹಿತಿ ನೀಡಿದೆ.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣ ಕುಮಾರ್ ನ್ಯಾನೋ ಯೂರಿಯಾ ಬಳಕೆ ಕುರಿತು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ. ನ್ಯಾನೋ ಯೂರಿಯಾ ದ್ರಾವಣವನ್ನು ಬಳಸುವುದರಿಂದ ಉತ್ತಮ ಇಳುವರಿಯನ್ನು ಸಹ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.

Use Of Nano Urea Tips For Farmers

ನ್ಯಾನೋ ಯೂರಿಯಾ ದ್ರಾವಣವು ಪ್ರತಿಶತ 4ರಷ್ಟು ನ್ಯಾನೋ ಸಾರಜನಕ ಕಣಗಳನ್ನು ಹೊಂದಿರುತ್ತದೆ. ಒಂದು ಬಾಟಲ್ (500 ಮಿ. ಲೀ) ನ್ಯಾನೋ ಯೂರಿಯಾ ಒಂದು ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮಾನಾಗಿದೆ. ರೈತರು ತಮ್ಮ ಬೆಳೆಗಳಿಗೆ ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ.

ಬೆಳಗಳಿಗೆ ಉತ್ತಮವಾಗಿದೆ; ಬೆಳೆಯ ಬೆಳವಣಿಗೆಯಲ್ಲಿ ಸಾರಜನಕವು ಪ್ರಮುಖ ಪಾತ್ರ ವಹಿಸುತ್ತದೆ. ಸಾರಜನಕ ಬೇಡಿಕೆಯನ್ನು ಪೂರೈಸಲು ರೈತರು 2 ರಿಂದ 3 ಹಂತದಲ್ಲಿ ಯೂರಿಯಾ ಗೊಬ್ಬರವನ್ನು ತಳ ಗೊಬ್ಬರ ಹಾಗೂ ಮೇಲೂ ಗೊಬ್ಬರವಾಗಿ ನೀಡುತ್ತಾರೆ. ಇದರಲ್ಲಿ ಶೇ.30-50 ರಷ್ಟು ಯೂರಿಯಾ ಮಾತ್ರ ಬೆಳೆಗಳಿಗೆ ದೊರೆಯುತ್ತದೆ.

ಸಾರಜನಕವು ಅಮೋನಿಯಾ ಹಾಗೂ ನೈಟ್ರಸ್‍ಆಕ್ಸೈಡ್ ರೂಪದಲ್ಲಿ ಮಣ್ಣು, ಗಾಳಿ ಮತ್ತು ನೀರನ್ನು ಮಲೀನಗೊಳಿಸುತ್ತದೆ. ಆದರೆ ನ್ಯಾನೋ ಯೂರಿಯಾದಿಂದ ಪರಿಸರ ಮಾಲಿನ್ಯವಾಗುವುದಿಲ್ಲ. ಮತ್ತು ಬೆಳೆಗಳಿಗೂ ಉತ್ತಮವಾಗಿದೆ ಎಂದು ಡಾ. ಕಿರಣ ಕುಮಾರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ರೈತರ ಅನುಕೂಲಕ್ಕಾಗಿ ಧಾರಡವಾಡ ಜಿಲ್ಲೆಯಲ್ಲಿ 12,156 ಲೀಟರ್‌ನಷ್ಟು ನ್ಯಾನೋ ಯೂರಿಯಾವನ್ನು ಎಲ್ಲ ತಾಲ್ಲೂಕುಗಳಿಗೆ ಇಪ್ಕೊ ಸಂಸ್ಥೆಯಿಂದ ಪೂರೈಸಲಾಗಿದ್ದು, ರೈತರು ಸುರಕ್ಷತಾ ನಿಯಮಗಳನ್ನು ಪಾಲಿಸಿ ಸಿಂಪಡಿಸುವ ಮೂಲಕ ನ್ಯಾನೋ ಯೂರಿಯಾ ರಸಗೊಬ್ಬರದ ಸದುಪಯೋಗ ಪಡಿಸಿಕೊಳ್ಳಲು ಅವರು ಸಲಹೆ ನೀಡಿದ್ದಾರೆ.

ನ್ಯಾನೊ ಯೂರಿಯಾ ಉಪಯೋಗಗಳು : ನ್ಯಾನೋ ಕಣಗಳು ಅತೀ ಸೂಕ್ಷ್ಮವಾಗಿದ್ದು ಇವುಗಳನ್ನು ಸಸ್ಯವು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ. ಇದು ಪ್ರತಿಶತ 80 ರಷ್ಟು ಬೆಳೆಗೆ ದೊರೆಯುತ್ತದೆ ಮತ್ತು ನಿಧಾನವಾಗಿ ಸಸ್ಯಗಳಲ್ಲಿ ಬಿಡುಗಡೆ ಹೊಂದುತ್ತದೆ.

ನ್ಯಾನೋ ಯೂರಿಯಾ ಬಳಸುವುದರಿಂದ ಶೇ.50 ರಷ್ಟು ಸಾಂಪ್ರದಾಯಿಕ ಯೂರಿಯಾ ಕಡಿಮೆ ಮಾಡಲು ಸಾಧ್ಯವಿದೆ. ಆಹಾರ ಮತ್ತು ಪರಿಸರಕ್ಕೆ ಸುರಕ್ಷಿತವಾಗಿದೆ. ರೈತರಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವಾಗುತ್ತದೆ. ಮತ್ತು ನ್ಯಾನೋ ಯೂರಿಯಾವನ್ನು ಸುಲಭವಾಗಿ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡಬಹುದಾಗಿದೆ. ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ವಿಷಕಾರಿಯಲ್ಲ. ನ್ಯಾನೋ ಯೂರಿಯಾ ಬಳಕೆಯು ಶೇ.8 ರಷ್ಟು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಪ್ರತಿ ಅರ್ಧ ಲೀಟರ್‌ಗೆ 225 ರೂಪಾಯಿ ದರವಿದೆ.

ಒಂದು ಲೀಟರ್ ನೀರಿನಲ್ಲಿ 2 ರಿಂದ 4 ಮಿ. ಲೀ ನ್ಯಾನೋ ಯೂರಿಯಾ ದ್ರಾವಣವನ್ನು ಬೆರೆಸಿ ಬೆಳೆಗಳ ಬೆಳವಣಿಗೆ ಹಂತದಲ್ಲಿ ಎಲೆಗಳ ಮೇಲೆ ಸಿಂಪಡಿಸಿ. ಒಂದನೇ ಸಿಂಪಡನೆ ಬೀಜ ಮೊಳಕೆಯೊಡೆದ 30 ದಿನಗಳ ನಂತರ. ಎರಡನೇ ಸಿಂಪಡನೆ 2-3 ವಾರಗಳ ನಂತರ ಅಥವಾ ಹೂ ಬಿಡುವ ಮೊದಲು ಒಂದು ವಾರ ನ್ಯಾನೋ ಯೂರಿಯಾ ರಸಗೊಬ್ಬರವನ್ನು ಮೇಲೂ ಗೊಬ್ಬರವಾಗಿ ಸಿಂಪಡನೆ ಮಾಡಬೇಕು. ಬೆಳೆಯ ಅಗತ್ಯಕ್ಕೆ ಅನುಗುನವಾಗಿ ಸಿಂಪರಣೆಗಳ ಸಂಖ್ಯೆಯನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು.

ನ್ಯಾನೋ ಯೂರಿಯಾ ಬಳಕೆಗೆ ಮುನ್ನ ಬಾಟಲ್‍ ಅನ್ನು ಚೆನ್ನಾಗಿ ಅಲುಗಾಡಿಸಿ. ಸಿಂಪರಣೆಗೆ ಪ್ಲ್ಯಾಟ್‍ಕೋನ್ ನಾಜಲ್ ಅಥವಾ ಕಟ್ ನಾಜಲ್ ಬಳಕೆ ಮಾಡಿ, ಬೆಳಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಬೆಳೆಗಳಿಗೆ ಸಿಂಪಡಿಸಬೇಕು ಮತ್ತು ಮಂಜು ಅಥವಾ ಅಧಿಕ ಗಾಳಿ ಇರುವಾಗ ಇದನ್ನು ಸಿಂಪರಣೆ ಮಾಡಬಾರದು.

ಸಿಂಪರಣೆ ಮಾಡಿದ 12 ಗಂಟೆಗಳಲ್ಲಿ ಮಳೆಯಾದಲ್ಲಿ ಮರು ಸಿಂಪರಣೆ ಮಾಡಬೇಕು. ನ್ಯಾನೋ ಯೂರಿಯಾವನ್ನು ಬಯೋ ಸ್ಟಿಮ್ಯುಲಂಟ್, ಪ್ರತಿಶತ 100 ರಷ್ಟು ನೀರಿನಲ್ಲಿ ಕರಗುವ ರಸಗೊಬ್ಬರ ಹಾಗೂ ಕೀಟ ನಾಶಕಗಳ ಜೊತೆ ಮಿಶ್ರಣ ಮಾಡಿ ಸಿಂಪಡಿಸಬಹುದಾಗಿದೆ. ನ್ಯಾನೋ ಯೂರಿಯಾ ದ್ರಾವಣವನ್ನು ಉತ್ಪಾದನೆಯಾದ ಎರಡು ವರ್ಷಗಳ ಒಳಗೆ ಬಳಸುವುದು ಉತ್ತಮವಾಗಿದೆ.

ನ್ಯಾನೋ ಯೂರಿಯಾವು ಬಳಕೆದಾರನಿಗೆ ಸುರಕ್ಷಿತವಾಗಿದೆ ಆದರೂ ಸಹಿತ ಬಳಕೆ ಸಮಯದಲ್ಲಿ ಕೈ ಮತ್ತು ಮುಖ ಗವಸಗಳನ್ನು ಧರಿಸಲು ಸೂಚಿಸಿದೆ. ಒಣ ಪ್ರದೇಶದಲ್ಲಿ ಶೇಖರಣೆ ಮಾಡಬೇಕು ಹಾಗೂ ಹೆಚ್ಚು ಉಷ್ಣಾಂಶವಿರುವ ಪ್ರದೇಶದಿಂದ ದೂರವಿಡಬೇಕು. ಮಕ್ಕಳು ಮತ್ತು ಸಾಕು ಪ್ರಾಣಿಗಳಿಂದ ಇದನ್ನು ದೂರವಿಡಬೇಕೆಂದು ಸಲಹೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+