ಕೃಷಿ ವಿವಿ ಅಧ್ಯಾಪಕರಿಗೆ ಯುಜಿಸಿ ಶ್ರೇಣಿ ವೇತನ
ಬೆಂಗಳೂರು,
ಫೆ.21: ಕೃಷಿ ಮತ್ತು ತೋಟಗಾರಿಕಾ ವಿವಿಗಳ ಅಧ್ಯಾಪಕರು ಮತ್ತು ತತ್ಸಮಾನ ಹುದ್ದೆಯ ನೌಕರರಿಗೂ ಯುಜಿಸಿ ವೇತನ ಶ್ರೇಣಿ ಅನ್ವಯವಾಗಲಿದೆ ಎಂದು ಗೃಹಸಚಿವ ವಿಎಸ್ ಅಚಾರ್ಯ ಸುದ್ದಿಗಾರರಿಗೆ ತಿಳಿಸಿದರು. id="toptextpromo"> ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ರಾಷ್ಟ್ರೀಯ ಕೃಷಿ ಸಂಶೋಧನಾ ಪರಿಷತ್ತಿನ ಆರ್ಥಿಕ ನೆರವಿನಲ್ಲಿ 2006 ರಿಂದ 10 ರ ಮಾರ್ಚ್ ತನಕ ಇರುವ ಬಾಕಿ ಕೃಷಿ ವಿವಿ ಮತ್ತು ಒಂದು ತೋಟಗಾರಿಕೆ ವಿವಿಯ ಅಧ್ಯಾಪಕರು ಮತ್ತು ತತ್ಸಮಾನ ನೌಕರರಿಗೆ ಈ ಸೌಲಭ್ಯ ದೊರಕಲಿದೆ ಎಂದು ಆಚಾರ್ಯ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಬೇರೆ
ವಿವಿಗಳ ಅಧ್ಯಾಪಕರಿಗೆ ನೀಡಿರುವ ರೀತಿಯಲ್ಲೇ ಇವರಿಗೂ ನೀಡಲಾಗುತ್ತದೆ. ಬಾಕಿ ಪಾವತಿಗೆ 296.25 ಕೋಟಿ ರೂ ಅಗತ್ಯವಿದೆ. ಇದರಲ್ಲಿ ಕೇಂದ್ರ ಸರ್ಕಾರದ ಸಂಶೋಧನಾ ಪರಿಷತ್ತಿನ 1159.52ಕೋಟಿ ರೂ ಹಾಗೂ ರಾಜ್ಯ ಸರ್ಕಾರ 35.74ಕೋಟಿ ರೂಗಳನ್ನು ಭರಿಸಬೇಕಾಗುತ್ತದೆ ಎಂದು ಸುದ್ದಿಗಾರರಿಗೆ ವಿಎಸ್ ಅಚಾರ್ಯ ತಿಳಿಸಿದರು.











Click it and Unblock the Notifications