ಹುಬ್ಬಳ್ಳಿ ಎಪಿಎಂಸಿಗೆ ಬಂತು ಟರ್ಕಿ ಈರುಳ್ಳಿ

ಹುಬ್ಬಳ್ಳಿ, ಡಿಸೆಂಬರ್ 15: ಈಜಿಪ್ಟ್ ನಂತರ ಈಗ ಹುಬ್ಬಳ್ಳಿ ಎಪಿಎಂಸಿಗೆ ಟರ್ಕಿಯಿಂದ ಈರುಳ್ಳಿ ಬಂದಿದೆ. ವರ್ತಕರು ಮುಗಿಬಿದ್ದು ಖರೀದಿಸಿದ್ದಾರೆ. ಮಾರುಕಟ್ಟೆಗೆ ಶನಿವಾರ ಒಂದು ಟನ್ ಟರ್ಕಿ ಈರುಳ್ಳಿ ಆಮದು ಆಗಿದೆ.

ಗುಣಮಟ್ಟ ಮತ್ತು ಗಾತ್ರದಲ್ಲಿ ಅತಿ ದೊಡ್ಡದಾಗಿದ್ದರಿಂದ ಶೀಘ್ರ ವಿಲೇವಾರಿಯಾಗಿದೆ. ಪ್ರತಿ ಕ್ವಿಂಟಾಲ್ ಗೆ 8 ಸಾವಿರ ರೂ, ನಷ್ಟು ಮಾರಟವಾಗಿದೆ. ನೋಡಲು ದಪ್ಪ ಹಾಗೂ ಹೆಚ್ಚು ಒಣಗಿದ್ದರಿಂದ ಆಧಿಕ ಬೇಡಿಕೆ ಇತ್ತು.

ಶುಕ್ರವಾರವೇ ಟರ್ಕಿಯಿಂದ ಈರುಳ್ಳಿ ಬಂದಿದ್ದು, ಶನಿವಾರ ಮಾರುಕಟ್ಟೆಯಲ್ಲಿ ಹರಾಜು ಆಗಿದೆ. ಸದ್ಯ ಅದಕ್ಕೆ 8 ಸಾವಿರ ರೂ, ವರೆಗೆ ದರವಿದೆ, ಬೇಡಿಕೆಯೂ ಹೆಚ್ಚಿದೆ ಎಂದು ಈರೂಳ್ಳಿ ವರ್ತಕರು ತಿಳಿಸಿದ್ದಾರೆ.

Turkey Onions Came To Hubballi APMC

ಉಳಿದಂತೆ ಸ್ಥಳೀಯ ಈರುಳ್ಳಿ ಆವಕ ಕಡಿಮೆಯಾಗಿದ್ದು, ಪ್ರತಿ ಕ್ವಿಂಟಾಲ್ ಗೆ 10 ಸಾವಿರ ರೂ, ವರೆಗೆ ಮಾರಾಟವಾಗಿದೆ. ಪುಣೆಯಿಂದನೂ ಈರುಳ್ಳಿ ಬರುತ್ತಿದ್ದು, ಅಂದಾಜು 500 ಕ್ವಿಂಟಾಲ್ ಬಂದಿದೆ. ಪ್ರತಿ ಕ್ವಿಂಟಾಲ್ ಗೂ 10 ಸಾವಿರ ರೂ, ವರೆಗೆ ಮಾರಾಟವಾಗಿದೆ.

ಧಾರವಾಡದಲ್ಲಿ ಶನಿವಾರ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕುಂದಗೋಳ ಶಾಸಕಿ ಕುಸಮಾವತಿ ಶಿವಳ್ಳಿ ಅವರ ನೇತೃತ್ವದಲ್ಲಿ ಈರುಳ್ಳಿ ಬೆಲೆಯೇರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+