ಚಿತ್ರಸುದ್ದಿ: ಪದವಿ ಪಡೆದರೂ ಪೆಚ್ಚು ಮೋರೆ ಪೋಸ್

ಬೆಂಗಳೂರು, ಜು.1: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

ಅಫ್ಘಾನಿಸ್ತಾನದ ಮದರಸಾಗಳಲ್ಲಿ ಪದವಿ ಪಡೆದುಕೊಂಡ ವಿದ್ಯಾರ್ಥಿನಿಯರು ತಮ್ಮ ಪದವಿ ಪತ್ರ ಕೈಯಲ್ಲಿ ಹಿಡಿದು ಗಪ್ ಚುಪ್ ಗಾಗಿ ಪೋಸ್ ಕೊಟ್ಟ ಚಿತ್ರ, ಬಾಲಿವುಡ್ ಬೆಡಗಿ ಬಿಪಾಶಾ ಬಸು ಮತ್ತೆ ಬೆಕ್ಕಿನ ನಡಿಗೆ ಇಟ್ಟು ಮಿಂಚುತ್ತಿರುವುದು, ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಬೃಹತ್ ಸಮಾವೇಶ, ಎಫ್ 1 ಜರ್ಮನಿ ಗ್ರಾಂಡ್ ಪ್ರೀ ಗೆದ್ದ ನಿಕೋ ರೊಸ್ ಬರ್ಗ್, ಮಲೇಷಿಯಾದ ಸಂತ್ರಸ್ತರಿಗಾಗಿ ಬೋಧ್ ಗಯಾದಲ್ಲಿ ಪ್ರಾರ್ಥನೆ, ಗುವಾಹಟಿಯಲ್ಲಿ ರೈತರ ಚಟುವಟಿಕೆಗಳು, ಹರಿದ್ವಾರದ ಮೇಳ ಮುಂತಾದ ಚಿತ್ರಗಳು ಇಲ್ಲಿವೆ...

ಅಫ್ಘಾನಿಸ್ತಾನದ ಪದವಿಧರೆಯರು

ಅಫ್ಘಾನಿಸ್ತಾನದ ಪದವಿಧರೆಯರು

ಕಂದಹಾರ್ : ಅಫ್ಘಾನಿಸ್ತಾನದ ಕಾಬೂಲಿನ ದಕ್ಷಿಣ ಭಾಗದ ಪಿರ್ ಮಸೌದಿಯಾ ಮದರಸಾದಿಂದ ಪದವಿ ಪಡೆದುಕೊಂಡ ವಿದ್ಯಾರ್ಥಿನಿಯರು ತಮ್ಮ ಪ್ರಮಾಣ ಪತ್ರವನ್ನು ತೋರಿಸುತ್ತಿದ್ದಾರೆ. ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸೋಮವಾರ(ಜು.21) ಎರಡೂವರೆ ವರ್ಷಗಳ ಪದವಿ ಪಡೆದುಕೊಂಡರು.

ಫ್ಯಾಷನ್ ಶೋನಲ್ಲಿ ಬಿಪಾಶಾ ಬಸು

ಫ್ಯಾಷನ್ ಶೋನಲ್ಲಿ ಬಿಪಾಶಾ ಬಸು

ನವದೆಹಲಿಯಲ್ಲಿ ನಡೆದಿರುವ ಫ್ಯಾಷನ್ ಶೋನಲ್ಲಿ ಬಾಲಿವುಡ್ ಬೆಡಗಿ ಬಿಪಾಶಾ ಬಸು

ಮೊರಾದಾಬಾದ್ ನಲ್ಲಿ ಮಳೆ ಪ್ರಾರ್ಥನೆ

ಮೊರಾದಾಬಾದ್ ನಲ್ಲಿ ಮಳೆ ಪ್ರಾರ್ಥನೆ

ಮೊರಾದಾಬಾದ್: ರಾಮಗಂಗಾ ನದಿಯ ಮಧ್ಯೆ ಇರುವ ಅಶ್ವಥ ವೃಕ್ಷಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಭಾರಿ ಮಳೆಯಿಂದ ಈ ಭಾಗದ ಜನ ಜೀವನ ತತ್ತರಗೊಂಡಿದೆ.

ಕೋಲ್ಕತ್ತಾದಲ್ಲಿ ಟಿಎಂಸಿ ಮೆರವಣಿಗೆ

ಕೋಲ್ಕತ್ತಾದಲ್ಲಿ ಟಿಎಂಸಿ ಮೆರವಣಿಗೆ

ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಮೆರವಣಿಗೆ ಮೂಲಕ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. PTI Photo by Swapan Mahapatra

ಸೌಹಾರ್ದ ಫುಟ್ಬಾಲ್ ಆಟಗಾರರು

ಸೌಹಾರ್ದ ಫುಟ್ಬಾಲ್ ಆಟಗಾರರು

ಮುಂಬೈನಲ್ಲಿ ಭಾನುವಾರ ಸೌಹಾರ್ದ ಫುಟ್ಬಾಲ್ ಪಂದ್ಯವಾಡಿದ ಅಮೀರ್ ಖಾನ್ ಹಾಗೂ ಅಭಿಷೇಕ್ ಬಚ್ಚನ್. PTI Photo by Shashank Parade

ಬೋಧ್ ಗಯಾದಲ್ಲಿ ವಿಶೇಷ ಪ್ರಾರ್ಥನೆ

ಬೋಧ್ ಗಯಾದಲ್ಲಿ ವಿಶೇಷ ಪ್ರಾರ್ಥನೆ

ಮಲೇಷಿಯಾ ವಿಮಾನ ದುರಂತ ಸಂತ್ರಸ್ತರ ಕುಟುಂಬದವರಿಗಾಗಿ ಬೋಧ್ ಗಯಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

ಕಾಜಿರಂಗ ಬಳಿ ರೈತರ ಚಟುವಟಿಕೆ

ಕಾಜಿರಂಗ ಬಳಿ ರೈತರ ಚಟುವಟಿಕೆ

ಬುರಪಹಾರ್: ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಸಮೀಪದಲ್ಲಿ ರೈತ ಕುಟುಂಬ ಭತ್ತ ನಾಟಿ ಕಾರ್ಯದಲ್ಲಿ ಮಗ್ನವಾಗಿದೆ.

ಹರಿದ್ವಾರದಲ್ಲಿ ಗಂಗೆ ಪೂಜೆ

ಹರಿದ್ವಾರದಲ್ಲಿ ಗಂಗೆ ಪೂಜೆ

ಕವದ್ ಮೇಳದ ಅಂಗವಾಗಿ ಹರಿದ್ವಾರದಲ್ಲಿ ಭಾನುವಾರ ನಡೆದ ವಿಶೇಷ ಪೂಜೆ

ಜರ್ಮನಿಯ ನಿಕೋಗೆ ಪ್ರಶಸ್ತಿ

ಜರ್ಮನಿಯ ನಿಕೋಗೆ ಪ್ರಶಸ್ತಿ

ಮರ್ಸೀಡೀಸ್ ಚಾಲಕ ನಿಕೋ ರೊಸ್ ಬರ್ಗ್ ಅವರು ಜರ್ಮನಿ ಎಫ್ 1 ಗ್ರಾಂಡ್ ಪ್ರೀ ಗೆದ್ದ ಸಂಭ್ರಮಾಚರಣೆಯಲ್ಲಿ AP/PTI

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+