ರೈತರಿಗೆ ಸಿಹಿಸುದ್ದಿ; ಉಚಿತವಾಗಿ ಮೇವಿನ ಬಿತ್ತನೆ ಬೀಜದ ಕಿಟ್‍ ಹಂಚಿಕೆ

ಶಿವಮೊಗ್ಗ, ಮೇ 21: ಪಶುಸಂಗೋಪನೆ ಮಾಡುವ ರೈತರಿಗೆ ಸಿಹಿಸುದ್ದಿ. ಹಸಿರು ಮೇವನ್ನು ಬೆಳೆಸಿ, ಬಳಸಲು ಹೈನು ಉತ್ಪಾದಕರನ್ನು ಪ್ರೋತ್ಸಾಹಿಸಲು ರೈತರಿಗೆ ಉಚಿತವಾಗಿ ಹಸಿರು ಮೇವಿನ ಬಿತ್ತನೆ ಬೀಜಗಳ ಮಿನಿ ಕಿಟ್‍ಗಳನ್ನು ಹಂಚಿಕೆ ಮಾಡಲಾಗುತ್ತದೆ.

ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್. ಜಿ. ಶೇಖರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಹೈನು ರಾಸುಗಳ ಆರೋಗ್ಯ ಸುಧಾರಣೆ, ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆ ಹಾಗೂ ಕಡಿಮೆ ವೆಚ್ಚದಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಮೂಲಕ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಹಾಲು ಉತ್ಪಾದಕರು ಹಸಿರು ಮೇವನ್ನು ಬೆಳೆಸಿ, ಬಳಸಲು ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

SHIMUL To Distribute Fodder Kit For Farmers Free

ಕೇಂದ್ರ ಸರ್ಕಾರದ ಎನ್.ಎಲ್.ಎಂ (National Livestock Mission)ಯೋಜನೆಯ ಅನುದಾನದಡಿ ಎನ್.ಡಿ.ಡಿ.ಬಿ ಹಾಗೂ ಕರ್ನಾಟಕ ಸಹಕಾರ ಹಾಲು ಮಹಾಮಂಡಳ ವತಿಯಿಂದ ಶಿಮುಲ್‍ಗೆ ರೂ. 1.20 ಕೋಟಿ ಮೊತ್ತದ ಹಸಿರು ಮೇವಿನ ಬಿತ್ತನೆ ಬೀಜಗಳ ಮಿನಿ ಕಿಟ್‍ಗಳನ್ನು ಹಂಚಿಕೆ ಮಾಡಲಾಗಿದೆ.

ಉಚಿತವಾಗಿ ರೈತರಿಗೆ ಪೂರೈಕೆ: ಕಳೆದ ಸಾಲಿನಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದ ಹಿನ್ನೆಲೆಯಲ್ಲಿ ಮೇವಿನ ಲಭ್ಯತೆ ಕಡಿಮೆಯಾಗಿದ್ದು, ದುಬಾರಿ ಬೆಲೆ ತೆತ್ತು ಮೇವನ್ನು ಖರೀದಿಸಿ ನಷ್ಟ ಅನುಭವಿಸಿದ ರೈತರಿಗೆ ನೆರವಾಗುವ ಉದ್ದೇಶದಿಂದ ಮುಂಗಾರು ಹಂಗಾಮು ಪ್ರಾರಂಭವಾಗುವ ಕಿಟ್ ವಿತರಣೆ ಮಾಡಲಾಗುತ್ತದೆ.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ವಿವಿಧ ಮೇವಿನ ತಳಿಗಳ 3/5 ಕೆ.ಜಿ. ಕಿರು ಪೊಟ್ಟಣಗಳನ್ನು (ಮಿನಿ ಕಿಟ್) ರೈತರಿಗೆ ಉಚಿತವಾಗಿ ಪೂರೈಸಲು ನಿರ್ಧರಿಸಲಾಗಿದೆ.

ಪ್ರತಿಯೊಬ್ಬ ಹಾಲು ಉತ್ಪಾದಕರಿಗೂ ಮೇವಿನ ಬೀಜದ ಕಿರು ಪೊಟ್ಟಣಗಳನ್ನು ವಿತರಿಸಿ ಹೆಚ್ಚು ಹಸಿರು ಮೇವು ಉತ್ಪಾದಿಸುವ ಮೂಲಕ ಉತ್ಪಾದನಾ ವೆಚ್ಚವನ್ನು ತಗ್ಗಿಸಿ ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವಾಗಿ ಮಾರ್ಪಡಿಸಲು ಯೋಜಿಸಲಾಗಿದೆ.

ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಶೇಖರಣೆ ಆಧಾರದ ಮೇಲೆ ಮಳೆ ಆಶ್ರಿತ ರೈತರು, ನೀರಾವರಿ ಹೊಂದಿರುವ ರೈತರನ್ನು ಗುರುತಿಸಿ ಯೋಜನೆಯ ನಿಯಮದಂತೆ ಮೇವಿನ ಬೀಜದ ಮಿನಿ ಕಿಟ್‍ಗಳನ್ನು ಹಂಚಿಕೆ ಮಾಡುವಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಈಗಾಗಲೇ ಮಾರ್ಗಸೂಚಿ ಮೂಲಕ ತಿಳಿಸಲಾಗಿದೆ.

ಪ್ರಸ್ತುತ 2024-25ನೇ ಸಾಲಿಗೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ 120 ಮೆಟ್ರಿಕ್ ಟನ್ ಬಹು ಕಟಾವು ಜೋಳ CSH-24MF=20MT, CSH-43MF=90MT, ಮೆಕ್ಕೆಜೋಳ J177-10MT ಮೇವಿನ ಬಿತ್ತನೆ ಬೀಜ ಹಂಚಿಕೆಯಾಗಿರುತ್ತದೆ.

ಕೇಂದ್ರ ಸರ್ಕಾರದ ಎನ್.ಎಲ್.ಎಂ ಯೋಜನೆಯಡಿ ಒಕ್ಕೂಟಕ್ಕೆ ಹಂಚಿಕೆ ಮಾಡಲಾಗಿರುವ ಹಸಿರು ಮೇವಿನ ಬಿತ್ತನೆ ಬೀಜದ ಮಿನಿಕಿಟ್‍ಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಾಲು ಉತ್ಪಾದಕರಿಗೆ ಯೋಜನೆಯ ನಿಬಂಧನೆ ಅನುಸಾರ (ಸಾಮಾನ್ಯ 70%, ಪರಿಶಿಷ್ಟ ಜಾತಿ 20%, ಪರಿಶಿಷ್ಟ ಪಂಗಡ 10%) ಹಾಲು ಶೇಖರಣೆಯ ಆಧಾರದ ಮೇಲೆ ವಿತರಿಸಲು ಯೋಜಿಸಲಾಗಿದೆ.

ಹಾಲು ಉತ್ಪಾದಕರು ಯೋಜನೆಯಡಿ ಲಭ್ಯವಿರುವ ಮೇವಿನ ಬಿತ್ತನೆ ಬೀಜಗಳ ಮಿನಿ ಕಿಟ್‍ಗಳನ್ನು ಉಚಿತವಾಗಿ ಪಡೆದು ಹಸಿರು ಮೇವು ಉತ್ಪಾದನೆ ಮಾಡಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ರೈತರಿಗೆ ಕರೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+