ಕೃಷಿ ಇಲಾಖೆ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆ; ಸಬ್ಸಿಡಿ ವಿವರ

ಬೆಂಗಳೂರು, ಜನವರಿ 16: ಕರ್ನಾಟಕದ ಕೃಷಿ ಇಲಾಖೆ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಹೈಟೆಕ್ ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆ ಸಬ್ಸಿಡಿ ನೀಡಲಿದೆ. ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.

ಕೊಪ್ಪಳ ಜಿಲ್ಲೆಗೆ ಸಾಮಾನ್ಯ ವರ್ಗ ಘಟಕದಡಿ ವೈಯಕ್ತಿಕ ಫಲಾನುಭವಿಗೆ 1 ಮತ್ತು ಸಂಘ ಸಂಸ್ಥೆಗಳಿಗೆ 1 ಒಟ್ಟು 2 ಕಂಬೈನ್ಡ್ ಹಾರ್ವೆಸ್ಟರ್ ಹಬ್ ಕ್ರಿಯಾ ಯೋಜನೆ ಅನುಮೋದನೆಗೊಂಡಿದೆ.

Set Up Of Hi Tech Harvest Hub Subsidy Details

ಯೋಜನೆಯಡಿ ಸಾಮಾನ್ಯ ವರ್ಗ ಘಟಕದಡಿ ವೈಯಕ್ತಿಕ ಫಲಾನುಭವಿಗೆ ಗರಿಷ್ಠ 40 ಲಕ್ಷ (ಶೇ.50 ಸಹಾಯಧನ) ಮತ್ತು ಸಂಘ ಸಂಸ್ಥೆಗಳಿಗೆ ಗರಿಷ್ಠ 50 ಲಕ್ಷ (ಶೇ.70 ಸಹಾಯಧನ) ಇರುತ್ತದೆ. ಆದ ಕಾರಣ ಆಸಕ್ತ ರೈತರು/ ಸಂಘ ಸಂಸ್ಥೆಗಳು/ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ)/ ಕೃಷಿ ಯಂತ್ರೋಪಕರಣಗಳ ಬ್ಯಾಂಕ್ (ಎಫ್‌ಎಂಬಿ) / ಕೃಷಿ ಯಂತ್ರಧಾರೆ ಕೇಂದ್ರಗಳು (ಸಿಎಚ್‌ಎಸ್‌ಸಿ)ಗಳು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಬಹುದು.

ಜನವರಿ 25 ಕೊನೆಯ ದಿನ; ಆಸಕ್ತ, ಅರ್ಹರು ಅಗತ್ಯ ದಾಖಲಾತಿಗಳೊಂದಿಗೆ ಜನವರಿ 25 ರೊಳಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಅರ್ಜಿಗಳನ್ನು ಸಲ್ಲಿಸಬೇಕು. ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಉಪಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಲಾಗುತ್ತದೆ. ನಂತರ ಈ ಕಛೇರಿಯಲ್ಲಿ ಉಪಕೃಷಿ ನಿರ್ದೇಶಕರ ಕಛೇರಿಯಿಂದ ಸ್ವೀಕೃತಗೊಂಡ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲಾ ಮಟ್ಟದ ಉಪಕರಣ ಸಮಿತಿಯಲ್ಲಿ ಮಂಡಿಸಲಾಗುವುದು.

ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಒಂದೇ ಹಬ್‌ಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿ ಅರ್ಹಗೊಂಡಲ್ಲಿ, ಲಾಟರಿ ಮುಖಾಂತರ ಫಲಾನುಭವಿಯನ್ನು ಆಯ್ಕೆ ಮಾಡಲಾಗುವುದು. ಈ ಕಛೇರಿಯಿಂದ ಆಯ್ಕೆಯಾದ ಫಲಾನುಭವಿಗೆ ಕೃಷಿ ಯಂತ್ರೋಪಕರಣಗಳನ್ನು ದಾಸ್ತಾನೀಕರಿಸಲು ಕಾರ್ಯಾದೇಶ ನೀಡಲಾಗುವುದು.

ಹಬ್‌ವಾರು ಸ್ವೀಕೃತವಾದ ಯಂತ್ರೋಪಕರಣಗಳನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಮತ್ತು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಪರಿಶೀಲಿಸಿ, ಸಹಾಯಧನವನ್ನು ನಿಯಾಮನುಸಾರ ಸಂಬಂಧಿಸಿದವರ ಸಾಲದ ಬ್ಯಾಂಕ್ ಖಾತೆಗೆ ಕ್ರೆಡಿಟ್ ಲಿಂಕ್ಡ್ ಬ್ಯಾಕ್ ಎಂಡೆಡ್ ಸಬ್ಸಿಡಿ ಮೂಲಕ ಜಮಾ ಮಾಡಲಾಗುವುದು.

ಫಲಾನುಭವಿ/ ಸಂಘ ಸಂಸ್ಥೆ ಅರ್ಜಿಯೊಂದಿಗೆ ಸಂಸ್ಥೆಯಾದಲ್ಲಿ ಸಹಕಾರ ಸಂಘಗಳ ನಿಬಂಧನೆಯಂತೆ ಸಂಸ್ಥೆ ನೋಂದಾಯಿಸಿರುವ ಬಗ್ಗೆ ಪ್ರಮಾಣ ಪತ್ರ. ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಎಫ್‌ಐಡಿ ಸಂಖ್ಯೆ, ರೂ.20 ಛಾಪಾ ಕಾಗದದ ಮೇಲೆ ಹಬ್ ಅನ್ನು ಪರಭಾರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ (ನೋಟರಿಯೊಂದಿಗೆ), ಇತ್ತೀಚಿನ 2 ವರ್ಷಗಳ (2021-22, 2022-23) ಲೆಕ್ಕ ಪರಿಶೋಧನಾ ಪತ್ರವನ್ನು ನೀಡಬೇಕು.

ಸಹಾಯ ಧನವು ಕ್ರೆಡಿಟ್ ಲಿಂಕ್ಡ್ ಬ್ಯಾಕ್ ಎಂಡೆಡ್ ಸಬ್ಸಿಡಿ ಆಗಿರುವುದರಿಂದ ಸಂಬಂಧಿಸಿರುವ ಬ್ಯಾಂಕಿನಿಂದ ತಾತ್ವಿಕ ಸಾಲ ಮಂಜೂರಾತಿ ಪತ್ರ (ಇನ್ ಪ್ರಿನ್ಸಿಪಲ್ ಲೋನ್ ಸ್ಯಾಂಕ್ಷನ್ ಲೆಟರ್) ಗಳನ್ನು ಲಗತ್ತಿಸಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಛೇರಿ ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+