ಕೋಳಿ, ಜಾನುವಾರು ಆಹಾರ ಘಟಕ; ರೈತರಿಗೆ ಮಹತ್ವದ ಸೂಚನೆ

ಬೆಂಗಳೂರು, ಜನವರಿ 08: ಕೋಳಿ, ಜಾನುವಾರು ಆಹಾರ ತಯಾರಿಕಾ ಘಟಕವನ್ನು ಸ್ಥಾಪನೆ ಮಾಡಲು ಇಚ್ಛಿಸುವ ರೈತರಿಗೆ ಸುದ್ದಿಯೊಂದಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಇದಕ್ಕೆ ಅನುಮತಿ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ.

ಕುಕ್ಕುಟ (ಕೋಳಿ) ಮತ್ತು ಜಾನುವಾರು (ಪಶು) ಆಹಾರ ತಯಾರಿಕಾ ಘಟಕಗಳು ಮತ್ತು ಮಾರಾಟ ಮಾಡುವ ಅಂಗಡಿ ಮತ್ತು ಸಂಘ ಸಂಸ್ಥೆಗಳು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಸರಿಯಾದ ಗುಣಮಟ್ಟದ ಕೋಳಿ, ಜಾನುವಾರು ಆಹಾರ ಉತ್ಪಾದಿಸಲು ಮತ್ತು ಮಾರಾಟ ಮಾಡಲು ಲೈಸೆನ್ಸ್ ಪಡೆಯುವುದು ಕಡ್ಡಾಯ.

Poultry Food Unit Direction For Farmers

ಈಗಾಗಲೇ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಮತ್ತು ಸ್ಥಳೀಯವಾಗಿ ಕೈಗಾರಿಕಾ ಇಲಾಖೆಯಿಂದ ಪರವಾನಗಿ ಪಡೆದಿದ್ದರೂ ಕೂಡ ಕರ್ನಾಟಕ ಕುಕ್ಕುಟ, ಜಾನುವಾರು ಆಹಾರ (ತಯಾರಿಕೆ ಮತ್ತು ಮಾರಾಟ ನಿಯಂತ್ರಣ) ಆಜ್ಞೆ 1987ರ ಪ್ರಕಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪರವಾನಗಿ ಪಡೆಯಬೇಕಿದೆ.

ಈ ರೀತಿ ಪಡೆದ ಪರವಾನಗಿಯು ಪ್ರತಿ ವರ್ಷ ಡಿಸೆಂಬರ್ 31ಕ್ಕೆ ಮುಕ್ತಾಯವಾಗುವುದರಿಂದ ನವೀಕರಣವನ್ನು ಜನವರಿ 1 ರಿಂದ ಪಡೆಯಬೇಕಾಗಿರುತ್ತದೆ. ಘಟಕವನ್ನು ಹೊಂದಿರುವ, ಸ್ಥಾಪನೆ ಮಾಡುವ ಯೋಜನೆ ರೂಪಿಸುತ್ತಿರುವವರು ಈ ಕುರಿತು ಗಮನಹರಿಸಬೇಕು ಎಂದು ಮನವಿ ಮಾಡಲಾಗಿದೆ.

ದಾಖಲಾತಿ ಅಪ್‌ಲೋಡ್ ಮಾಡಿ; ಪ್ರಸ್ತುತ ವರ್ಷ 2024ನೇ ಸಾಲಿಗೆ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು ನೂತನ ಪರವಾನಗಿ ಪಡೆಯಲು ಮತ್ತು ನವೀಕರಿಸಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ದಾಖಲೆ ಅಪ್‌ಲೋಡ್ ಮಾಡಬಹುದು.

ಕುಕ್ಕುಟ, ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು sevasinndhusevices.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಸೂಕ್ತ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿ ಪರವಾನಗಿ ಪಡೆಯಲು ಸೂಚನೆ ನೀಡಲಾಗಿದೆ.

ಪರವಾನಗಿ ಪಡೆಯದ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು (ಉತ್ಪಾದನೆ ಮತ್ತು ಮಾರಾಟ ನಿಯಂತ್ರಣ) ಆಜ್ಞೆ 1987 ರ ಕಂಡಿಕೆ 8, 9(1) ಹಾಗೂ 11(1)(ಅ) ಪ್ರಕಾರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶುಪಾಲನಾ ಇಲಾಖೆಯ ಸಂಸ್ಥೆಗಳನ್ನು ಸಂಪರ್ಕಿಸಬಹುದು.

ಕರ್ನಾಟಕ ಸಹಕಾರಿ ಕುಕ್ಕುಟ ಮಹಾಮಂಡಳವು ಅಲ್ಪಾವಧಿ ಕಾಲದ ಕೋಳಿ ಸಾಕಾಣಿಕೆ ತರಬೇತಿಯನ್ನು ಆಸಕ್ತರಿಗೆ ನೀಡುತ್ತಿದೆ. ತರಬೇತಿ ಪಡೆಯಲು ಆಯಾ ಜಿಲ್ಲೆಯ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು ಪಶುವೈದ್ಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+