'ಬುಲೆಟ್ ಟ್ರೇನ್'ಗೆ ಹಣದ ನೆರವು ನಿಲ್ಲಿಸಿದ ಜಪಾನ್, ಅಯ್ಯೋ ಇದೇನು?

ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ ಯೋಜನೆ 'ಬುಲೆಟ್ ಟ್ರೇನ್'ಗೆ ದೊಡ್ಡ ತಡೆ ಎದುರಾಗಿದೆ. ಜಪಾನ್ ಇಂಟರ್ ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿಯು ಈ ರೈಲ್ವೆ ಜಾಲ ನಿರ್ಮಾಣಕ್ಕೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಿದೆ. ರೈತರ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಇಂಥ ನಿರ್ಧಾರ ಮಾಡಲಾಗಿದೆ.

1 ಲಕ್ಷ ಕೋಟಿ ರುಪಾಯಿ ವೆಚ್ಚದ ಈ ಯೋಜನೆಗಾಗಿ ಸ್ವಾಧೀನ ಮಾಡಿಕೊಂಡ ಭೂಮಿಗಾಗಿ ರೈತರಿಗೆ ಪರಿಹಾರ ನೀಡಲು ಸರಕಾರ ಆದ್ಯತೆ ಕೊಡಬೇಕು ಎಂದು ಜಪಾನ್ ನ ಏಜೆನ್ಸಿ ಹೇಳಿದೆ. ಗುಜರಾತ್ ಹಾಗೂ ಮಹಾರಾಷ್ಟ್ರ ಮಧ್ಯೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಕೇಂದ್ರ ಸರಕಾರದಿಂದ ಈಗಾಗಲೇ ರೈತರ ಸಮಸ್ಯೆ ನಿವಾರಣೆಗಾಗಿಯೇ ವಿಶೇಷ ಸಮಿತಿ ರಚಿಸಲಾಗಿದೆ.

ಆದರೆ, ಈ ಸಮಸ್ಯೆ ಬಗೆಹರಿಸಲು ಹಣಕಾಸಿನ ಕೊರತೆ ಇದೆ. ಆ ಕಾರಣಕ್ಕೆ 2022ಕ್ಕೆ ಪೂರ್ಣಗೊಳ್ಳಬೇಕಾದ ಈ ಯೋಜನೆ ಮತ್ತಷ್ಟು ಸಮಯ ಮುಂದೆ ಹೋಗಲಿದೆ. ಹದಿನೈದು ವರ್ಷದ ಹಿಂದೆ ಆರಂಭವಾದ ಜಪಾನ್ ನ ಸರಕಾರಿ ಏಜೆನ್ಸಿ 'ಜಿಕಾ', ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅಲ್ಲಿನ ಸರಕಾರಕ್ಕೆ ನೆರವು ನೀಡುತ್ತದೆ.

ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಭೂ ಸ್ವಾಧೀನ ಸಮಸ್ಯೆ

ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಭೂ ಸ್ವಾಧೀನ ಸಮಸ್ಯೆ

ಅಂತರರಾಷ್ಟ್ರೀಯ ಸಹಕಾರ, ಜಾಗತಿಕ ಆರ್ಥಿಕ ವ್ಯವಸ್ಥೆಗೆ ಬೆಂಬಲ ನೀಡುವುದು, ಅಭಿವೃದ್ಧಿ ಆಗುತ್ತಿರುವ ಪ್ರದೇಶಗಳ ಆರ್ಥಿಕ ಸ್ಥಿರತೆಗಾಗಿ ಶ್ರಮಿಸುವುದು ಈ ಏಜೆನ್ಸಿಯ ಉದ್ದೇಶವಾಗಿದೆ. ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಈ ಯೋಜನೆಗಾಗಿ ಭೂ ಸ್ವಾಧೀನ ಮಾಡಿಕೊಳ್ಳುವಲ್ಲಿ ಸಮಸ್ಯೆ ಉಂಟಾಗಿದೆ.

ಹೆಚ್ಚಿನ ಪರಿಹಾರ, ಮೂಲಸೌಕರ್ಯಕ್ಕೆ ರೈತರ ಆಗ್ರಹ

ಹೆಚ್ಚಿನ ಪರಿಹಾರ, ಮೂಲಸೌಕರ್ಯಕ್ಕೆ ರೈತರ ಆಗ್ರಹ

ರೈತರು ಹೆಚ್ಚಿನ ಪರಿಹಾರ ಹಾಗೂ ಹಳ್ಳಿಗಾಡು ಪ್ರದೇಶದಲ್ಲಿ ಕೆಲವು ಮೂಲ ಸೌಕರ್ಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. 508 ಕಿಲೋಮೀಟರ್ ಈ ರೈಲು ಕಾರಿಡಾರ್ ಪೈಕಿ 110 ಕಿಲೋಮೀಟರ್ ಮಹಾರಾಷ್ಟ್ರದ ಪಲ್ಘರ್ ಮೂಲಕ ಹಾದುಹೋಗುತ್ತದೆ. ಇಲ್ಲಿ ರೈತರಿಂದ ಭಾರೀ ಸವಾಲು ಎದುರಾಗಿದೆ. ಗುಜರಾತ್ ನಲ್ಲೂ 850 ಹೆಕ್ಟೇರ್ ಪ್ರದೇಶ ಭೂ ಸ್ವಾಧೀನ ಮಾಡಿಕೊಳ್ಳಬೇಕಿದೆ. ಎಂಟು ಜಿಲ್ಲೆಗಳ 5 ಸಾವಿರ ಕುಟುಂಬಗಳು ಈ ವ್ಯಾಪ್ತಿಯಲ್ಲಿವೆ.

ಗುಜರಾತ್ ಹೈ ಕೋರ್ಟ್ ಮೆಟ್ಟಿಲೇರಿದ ರೈತರು

ಗುಜರಾತ್ ಹೈ ಕೋರ್ಟ್ ಮೆಟ್ಟಿಲೇರಿದ ರೈತರು

ಗುಜರಾತ್ ನ ಕೆಲ ರೈತರು ಈ ಯೋಜನೆ ಬಗ್ಗೆ ಕೆಲವು ಆಕ್ಷೇಪ ವ್ಯಕ್ತಪಡಿಸಿ, ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಜಪಾನ್ ನ 'ಜಿಕಾ' ಹಣಕಾಸಿನ ನೆರವು ನಿಲ್ಲಿಸುವ ಘೋಷಣೆ ಮಾಡಿದೆ. ಜತೆಗೆ ಈ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಗುಜರಾತ್ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ರೈತರ ಸಮಸ್ಯೆ ನಿವಾರಿಸುವ ತನಕ ಸರಕಾರಕ್ಕೆ ಹಣಕಾಸಿನ ನೆರವು ನೀಡಬಾರದು ಎಂದು ಕೋರಿ ರೈತರು 'ಜಿಕಾ'ಗೆ ಪತ್ರ ಬರೆದಿದ್ದಾರೆ.

ಈ ತನಕ 125 ಕೋಟಿ ಮಾತ್ರ ಬಿಡುಗಡೆ

ಈ ತನಕ 125 ಕೋಟಿ ಮಾತ್ರ ಬಿಡುಗಡೆ

ಇಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವುದಕ್ಕೆ ಜಪಾನ್ ನಿಂದ ಒಬ್ಬರನ್ನು ರಾಯಭಾರಿಯಾಗಿ ಕಳುಹಿಸಿ ಎಂದು ಕೇಳಿಕೊಳ್ಳಲಾಗಿದೆ. ಈ ಯೋಜನೆಗಾಗಿ ಈ ವರೆಗೆ ಜಿಕಾದಿಂದ 125 ಕೋಟಿ ಬಿಡುಗಡೆ ಮಾಡಲಾಗಿದೆ. 1 ಲಕ್ಷ ಕೋಟಿ ರುಪಾಯಿಯ ಈ ಯೋಜನೆಗೆ ಜಿಕಾ 80 ಸಾವಿರ ಕೋಟಿ ನೆರವು ನೀಡುವ ಭರವಸೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+