ಪಿಎಂ ಕಿಸಾನ್ ಯೋಜನೆ: ಕರ್ನಾಟಕದ 50.36 ಲಕ್ಷ ರೈತರಿಗೆ 1007.26 ಕೋಟಿ ರೂ. ವರ್ಗಾವಣೆ

ಬೆಂಗಳೂರು, ಅಕ್ಟೋಬರ್ 17: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ'ಯಡಿ 12ನೇ ಕಂತಿನ ನೆರವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕ ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರೂ. ವರ್ಗಾವಣೆ ಮಾಡಲಾಗುತ್ತಿದೆ.

ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ'ಯ ಕರ್ನಾಟಕದ ಪಾಲಿನ ಕುರಿತು ಅವರು ವಿವರಿಸಿದರು.

ಕೇಂದ್ರ ಸರ್ಕಾರ ಈವರೆಗೆ 53.83 ಲಕ್ಷ ರೈತ ಕುಟುಂಬಗಳು ಕನಿಷ್ಠ ಒಂದು ಕಂತು ಪಡೆಯುವ ಮೂಲಕ ಯೋಜನೆಯ ಲಾಭವನ್ನು ಪಡೆದಿದ್ದಾರೆ. 2019ರ ಮಾರ್ಚ್ ತಿಂಗಳಿನಿಂದ 2022ರ ಜುಲೈವರೆಗೆ 53.83 ಲಕ್ಷ ರೈತ ಕುಟುಂಬಗಳು ಭಾರತ ಸರ್ಕಾರದಿಂದ ಒಟ್ಟು ರೂ.9968.57 ಕೋಟಿ ಆರ್ಥಿಕ ಸಹಾಯಧನ ಸ್ವೀಕರಿಸಿದ್ದಾರೆ.

PM Kisan Yojana Rs.1007.26 crore transfer for 50.36 lakh farmers of Karnataka

ರಾಜ್ಯ ಸರ್ಕಾರದಿಂದ ಈ ವರ್ಷ 956.71 ಕೋಟಿ

ಭಾರತ ಸರ್ಕಾರ ಅನುಮೋದಿಸಲ್ಪಟ್ಟ ಕರ್ನಾಟಕ ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಯೋಜನೆಯಡಿ 2019 ರಿಂದ ಈವರೆಗೆ ರೂ.4821.37 ಕೋಟಿಗಳ ಆರ್ಥಿಕ ಸಹಾಯಧನವನ್ನು ನೀಡಲಾಗಿರುತ್ತದೆ. 2022-23 ನೇ ಸಾಲಿನಲ್ಲಿ 956.71 ಕೋಟಿಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ನಿರಂತರ ಮೇಲ್ವಿಚಾರಣೆಯ ಭಾಗವಾಗಿ ಯೋಜನೆಯ ಫಲಾನುಭವಿಗಳಾಗಿರುವ ರೈತ ಕುಟುಂಬಗಳ ಅರ್ಹತೆಯನ್ನು ಸರ್ಕಾರವು ನಿರಂತರವಾಗಿ ಪರಿಶೀಲಿಸುತ್ತಿರುತ್ತದೆ. ಯೋಜನೆಯಡಿ ವರ್ಷದಲ್ಲಿ ನಾಲ್ಕು ತಿಂಗಳಿಗೆ ಒಮ್ಮೆಯಂತೆ ಮೂರು ಬಾರಿ ಕೇಂದ್ರ ಸರ್ಕಾರ 6000 ರೂ. ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಎರಡು ಬಾರಿಯಂತೆ 4,000 ರೂ. ಸೇರಿ ಒಟ್ಟು 10ಸಾವಿರ ಹಣ ವಾರ್ಷಿಕವಾಗಿ ರೈತರಿಗೆ ನೀಡಾಗುತ್ತಿದೆ. ಕಳೆದ 11ನೇ ಕಂತಿನ 2000ರೂ. ಇದೇ ವರ್ಷ ಮೇ 30ರಂದು ಜಮೆ ಆಗಿತ್ತು. ಸದ್ಯ 12ನೇ ಕಂತಿನ ಹಣ ರೈತರ ಖಾತೆಗೆ ಸೋಮವಾರ ಬಿಡುಗಡೆಯಾಗಿದೆ.

ಆಧಾರ್ ಆಧಾರಿತ ಉತ್ತಮ ವಹೀವಾಟು

ಈ ಯೋಜನೆಯಡಿ ಎಲ್ಲಾ ಕಂತುಗಳನ್ನು ಸಾಧ್ಯವಾದಷ್ಟು ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಮಾಡಬೇಕೆಂದು ಭಾರತ ಸರ್ಕಾರ ಬಯಸುತ್ತದೆ. ಎಲ್ಲಾ ರಾಜ್ಯಗಳ ಪೈಕಿ, ಕರ್ನಾಟಕ ರಾಜ್ಯವು ಅತಿ ಹೆಚ್ಚು ಶೇಕಡಾವಾರು (96%) ಆಧಾರ್ ಆಧಾರಿತ ವಹಿವಾಟುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದೆ. ಈ ಹಿನ್ನೆಲೆಯಲ್ಲಿ 2020-21 ಸಾಲಿನಲ್ಲಿ ಭಾರತ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ದೊರೆತಿದೆ ಎಂದು ಹೇಳಿದರು.

PM Kisan Yojana Rs.1007.26 crore transfer for 50.36 lakh farmers of Karnataka

ವರ್ಷ ಪಾವತಿ ಮೊತ್ತ(ಕೋಟಿಯಲ್ಲಿ)

--- ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರ

2018-19 3.96 0.00

2019-20 2769.50 905.75

2020-21 3113.86 983.80

2021-22 2829.27 1975.12

2022-23 1251.98 956.71

ಒಟ್ಟು 9968.57 4821.37

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+