ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಂಕಷ್ಟ: ತರಕಾರಿ, ಹಣ್ಣಿನ ವ್ಯಾಪಾರದಲ್ಲಿ ಇಳಿಕೆ; ರೈತರು, ವ್ಯಾಪಾರಿಗಳಿಗೆ ನಷ್ಟ

|
Google Oneindia Kannada News

ಮೈಸೂರು, ಮೇ 19: ದೇಶದೆಲ್ಲೆಡೆ ಆತಂಕ ಸೃಷ್ಟಿಸಿರುವ ಮಹಾಮಾರಿ ಕೊರೊನಾ ಹೊಡೆತಕ್ಕೆ ಪ್ರತಿಯೊಬ್ಬರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ದುಡಿಯುವ ವರ್ಗದ ಜನರ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಕೊರೊನಾ ಸೋಂಕು, ಲಾಕ್‌ಡೌನ್ ನಿಂದ ರೈತಾಪಿ ವರ್ಗವೂ ಕಂಗಾಲಾಗಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಪ್ರಸ್ತುತ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೆ, ರೈತರು ಬೆಳೆದಿರುವ ತರಕಾರಿ, ಹಣ್ಣುಗಳ ಬೆಲೆ ಮಾತ್ರ ಇಳಿಮುಖ ಹಾದಿಯಲ್ಲಿದೆ. ಇದರ ಪರಿಣಾಮ ರೈತರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದೆಡೆ ಕೊರೊನಾ ಲಾಕ್‌ಡೌನ್ಕಾರಣಕ್ಕೆ ರೈತರು ಬೆಳೆದಿರುವ ತರಕಾರಿ, ಹಣ್ಣುಗಳನ್ನು ಹೊರ ರಾಜ್ಯಕ್ಕೆ ಸಾಗಿಸಲು ತೊಂದರೆಯಾಗಿದ್ದು, ಇದು ಸಹ ರೈತರ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಚಿತ್ರದುರ್ಗ: ಲಾಕ್‌ಡೌನ್ ಪರಿಣಾಮದಿಂದ ಹೂ ಬೆಳೆಗಾರರಿಗೆ ಭಾರೀ ನಷ್ಟ ಚಿತ್ರದುರ್ಗ: ಲಾಕ್‌ಡೌನ್ ಪರಿಣಾಮದಿಂದ ಹೂ ಬೆಳೆಗಾರರಿಗೆ ಭಾರೀ ನಷ್ಟ

ನೆಲಕಚ್ಚಿದ ಹಣ್ಣು, ತರಕಾರಿ ಬೆಲೆ

ನೆಲಕಚ್ಚಿದ ಹಣ್ಣು, ತರಕಾರಿ ಬೆಲೆ

ಕೊರೊನಾ ಸಂಕಷ್ಟ ಎದುರಾದ ಬೆನ್ನಲ್ಲೇ ಗ್ರಾಹಕರಿಗೆ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣುಗಳ ಬೆಲೆಗಳು ಏರಿಕೆ ಕಂಡಿದ್ದರೆ, ರೈತರಿಂದ ಖರೀದಿಸುವವರು ಮಾತ್ರ ರೈತರಿಂದ ಕಡಿಮೆ ಬೆಲೆಗೆ ತರಕಾರಿ, ಹಣ್ಣುಗಳನ್ನು ಖರೀದಿಸುತ್ತಿರುವುದು ಅನ್ನದಾತರ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ನಗರದ ಬಹುತೇಕ ಕಡೆಗಳಲ್ಲಿ ಖುದ್ದು ರೈತರೇ ನೇರವಾಗಿ ಗ್ರಾಹಕರಿಗೆ ಹಣ್ಣು, ತರಕಾರಿಗಳ ಮಾರಾಟಕ್ಕೆ ಇಳಿಯುವಂತಾಗಿದೆ.

 ಖರೀದಿಗೆ ಗ್ರಾಹಕರ ಹಿಂದೇಟು

ಖರೀದಿಗೆ ಗ್ರಾಹಕರ ಹಿಂದೇಟು

ಇನ್ನೂ ಇಷ್ಟು ದಿನಗಳ ಕಾಲ ನಗರ ಪ್ರದೇಶದಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಂಡಿದ್ದ ಕೊರೊನಾ ಸೋಂಕು ಪ್ರಕರಣಗಳು ಇದೀಗ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದೆ. ಇದರಿಂದಾಗಿ ಹಳ್ಳಿಗಳಲ್ಲೂ ಕೊರೊನಾ ಆತಂಕ ಕಂಡು ಬಂದಿರುವ ಕಾರಣದಿಂದ ಹಣ್ಣು, ತರಕಾರಿಗಳ ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಪ್ರಮುಖವಾಗಿ ಹಣ್ಣುಗಳ ಖರೀದಿಗೆ ಜನರು ಹೆಚ್ಚಿನ ಒಲವು ತೋರದಿರುವುದು, ಹಣ್ಣಿನ ವ್ಯಾಪಾರಿಗಳು ಕಂಗಾಲಾಗಿಸಿದೆ.

 ಮಾವಿನ ಹಣ್ಣಿಗೆ ನಿರೀಕ್ಷಿತ ಬೇಡಿಕೆ ಇಲ್ಲ

ಮಾವಿನ ಹಣ್ಣಿಗೆ ನಿರೀಕ್ಷಿತ ಬೇಡಿಕೆ ಇಲ್ಲ

ಇದರ ಪರಿಣಾಮ ಮಾರುಕಟ್ಟೆಗಳಲ್ಲಿ ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ, ಸೇಬು, ಮಾವು ಸೇರಿದಂತೆ ಹಣ್ಣುಗಳನ್ನು ಕೇಳುವವರೇ ಇಲ್ಲದಂತಾಗಿದೆ. ಪ್ರಮುಖವಾಗಿ ಹಣ್ಣುಗಳ ರಾಜಾ ಎಂದೇ ಕರೆಯಲ್ಪಡುವ ಮಾವಿನ ಹಣ್ಣಿಗೆ ಈ ಬಾರಿ ನಿರೀಕ್ಷಿತ ಬೇಡಿಕೆ ಇಲ್ಲ. ಇದರ ಪರಿಣಾಮ ಮಾವು ಬೆಳೆಗಾರರಿಗೆ ಸಂಕಷ್ಟ ಎದುರಾಗಿದ್ದು, ಗ್ರಾಹಕರಿಲ್ಲದೆ ವ್ಯಾಪಾರಸ್ಥರಿಗೆ ಕಷ್ಟವಾಗಿದೆ. ಕೊರೊನಾ ಲಾಕ್‌ಡೌನ್ಕಾರಣದಿಂದ ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದ್ದು, ಬಂಡವಾಳ ಹಾಕಿರುವ ವ್ಯಾಪಾರಿಗಳು ಸಹ ನಷ್ಟ ಅನುಭವಿಸುವಂತಾಗಿದೆ.

ಕಸದ ತೊಟ್ಟಿಗೆ ಸುರಿಯಬೇಕಾದ ಪರಿಸ್ಥಿತಿ

ಕಸದ ತೊಟ್ಟಿಗೆ ಸುರಿಯಬೇಕಾದ ಪರಿಸ್ಥಿತಿ


ಅಲ್ಲದೇ, ಲಾಕ್‌ಡೌನ್ಹಿನ್ನೆಲೆಯಲ್ಲಿ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ನೀಡಿರುವ ಸಮಯಾವಕಾಶದಿಂದಲೂ ಹಣ್ಣಿನ ವ್ಯಾಪಾರ ಇಳಿಕೆಯಾಗಿದೆ ಎಂಬುದು ವ್ಯಾಪಾರಿಗಳ ಅಳಲು. ವ್ಯಾಪಾರ ವಹಿವಾಟು ನಡೆಸಲು ಸರ್ಕಾರ ನಿಗದಿ ಮಾಡಿರುವ ಸಮಯದಲ್ಲಿ ಬಹುತೇಕ ಜನರು ದಿನಸಿ, ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಖರೀದಿ ಮಾಡುವುದರಲ್ಲೇ ಕಳೆಯುವುದರಿಂದ ಹಣ್ಣುಗಳ ಖರೀದಿಗೆ ಮುಂದಾಗುತ್ತಿಲ್ಲ. ಇದರಿಂದ ರೈತರು, ಹಣ್ಣಿನ ವ್ಯಾಪಾರಿಗಳಿಗೆ ಬಹಳ ನಷ್ಟವಾಗಿದೆ. ವ್ಯಾಪಾರವಿಲ್ಲದೇ ಹಣ್ಣಗಳೆಲ್ಲಾ ಹಾಳಾಗುತ್ತಿದ್ದು, ಕಸದ ತೊಟ್ಟಿಗೆ ಸುರಿಯಬೇಕಾದ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ವ್ಯಾಪಾರಿಗಳು.

English summary
Due to coronavirus and lockdown effect, Vegetable And Fruit farmers are not getting the right prices for their crops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X