Arecanut & Copra Price: ಕುಸಿದ ಅಡಿಕೆ ಬೆಲೆ, ಕೊಬ್ಬರಿ ಬೆಲೆ ಏರಿಕೆ; ವಿವಿಧ ಮಾರುಕಟ್ಟೆಗಳಲ್ಲಿ ಬೆಲೆ ಎಷ್ಟಿದೆ?

ಕೊಳೆ ರೋಗ, ಭಾರಿ ಮಳೆಯ ನಡುವೆಯೂ ಅಡಿಕೆ ಬೆಳೆಯುತ್ತಿರುವ ರೈತರಿಗೆ ಸದ್ಯ ಅಡಿಕೆ ಧಾರಣೆ ಕುಸಿಯುತ್ತಿರುವುದು ಬೇಸರ ತಂದಿದೆ. ಗಡಿಯಲ್ಲಿ ಅಕ್ರಮ ಅಡಿಕೆ ಭಾರತಕ್ಕೆ ಬರುವುದಕ್ಕೆ ನಿರ್ಬಂಧ ವಿಧಿಸಿದ ಬಳಿಕ, ಅಡಿಕೆ ಬೆಲೆ ಏರಿಕೆಯಾಗುತ್ತದೆ ಎಂದೇ ಭಾವಿಸಲಾಗಿತ್ತು, ಆದರೆ ಹೊಸ ಅಡಿಕೆ ಮಾರುಕಟ್ಟೆಗೆ ಬರಲು ಆರಂಭವಾದ ಬೆನ್ನಲ್ಲೇ ಅಡಿಕೆ ಧಾರಣೆ ಕುಸಿತ ಕಾಣುತ್ತಿದ್ದು, ಅಡಿಕೆ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.

55,000 ರೂಪಾಯಿ ಮೀರಿದ್ದ ರಾಶಿ ಅಡಿಕೆ ಬೆಲೆ ಬಳಿಕ ಕುಸಿತ ಕಾಣುತ್ತಲೇ ಬಂದಿದೆ. ಸದ್ಯ 45,000 ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಕೆಲವು ಮಾರುಕಟ್ಟೆಗಳಲ್ಲಿ ಮಾತ್ರ ರಾಶಿ ಅಡಿಕೆ ಬೆಲೆ ಗರಿಷ್ಠ 48,000 ರೂಪಾಯಿಗೆ ಮಾರಾಟವಾಗಿದೆ. ಉಳಿದಂತೆ 44-46 ಸಾವಿರ ರೂಪಾಯಿ ನಡುವೆಯೇ ವ್ಯವಹಾರ ಮಾಡಿದೆ.

Latest Arecanut and Copra price in Karnataka on August 26th

ಸೋಮವಾರ ಸಾಗರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 30,199 ರೂಪಾಯಿ ಇದ್ದರೆ ಗರಿಷ್ಠ 48,451 ರೂಪಾಯಿಗೆ ಮಾರಾಟವಾಗಿದೆ. ಕೆಂಪುಗೋಟು ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ ₹20,899 ಇದ್ದರೆ ಗರಿಷ್ಠ ₹32,199 ಆಗಿತ್ತು.

ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ 27,000 ರೂಪಾಯಿ ಇದ್ದರೆ ಗರಿಷ್ಠ 48,699 ರೂಪಾಯಿ ಆಗಿತ್ತು. ಸರಕು ಅಡಿಕೆ ಧಾರಣೆ ಕನಿಷ್ಠ 56,009 ರೂಪಾಯು ಇದ್ದರೆ ಗರಿಷ್ಠ ಬೆಲೆ 74,400 ರೂಪಾಯಿ ಆಗಿತ್ತು. ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ 46,139 ರೂಪಾಯಿ ಇದ್ದು ಗರಿಷ್ಠ ಬೆಲೆ 46,569 ರೂಪಾಯಿ ಆಗಿತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಬಂಟ್ವಾಳ ಕೋಕಾ ₹18,000 ₹28,500 ₹23,500
2 ಬಂಟ್ವಾಳ ಹೊಸ ವೆರೈಟಿ ₹28,500 ₹39,500 ₹39,000
3 ಚನ್ನಗಿರಿ ರಾಶಿ ₹39,200 ₹48,479 ₹43,098
4 ಚಿತ್ರದುರ್ಗ ಅಪಿ ₹46,619 ₹47,059 ₹46,879
5 ಚಿತ್ರದುರ್ಗ ಬೆಟ್ಟೆ ₹33,629 ₹34,099 ₹33,849
6 ಚಿತ್ರದುರ್ಗ ರಾಶಿ ₹46,139 ₹46,569 ₹46,389
7 ಪುತ್ತೂರು ಹೊಸ ವೆರೈಟಿ ₹28,000 ₹39,500 ₹33,000
8 ಸಾಗರ ಬಿಳೆ ಗೊಟು ₹10,199 ₹25,214 ₹22,699
9 ಸಾಗರ ಚಾಲಿ ₹24,854 ₹32,819 ₹31,799
10 ಸಾಗರ ಕೋಕಾ ₹9,099 ₹23,989 ₹22,989
11 ಸಾಗರ ರಾಶಿ ₹30,199 ₹48,451 ₹47,499
12 ಶಿವಮೊಗ್ಗ ಬೆಟ್ಟೆ ₹40,009 ₹54,399 ₹53,300
13 ಶಿವಮೊಗ್ಗ ರಾಶಿ ₹27,000 ₹48,699 ₹47,319
14 ಶಿವಮೊಗ್ಗ ಸರಕು ₹56,009 ₹74,400 ₹62,699
15 ಸಿದ್ದಾಪುರ ಚಾಲಿ ₹32,119 ₹35,600 ₹34,499
16 ಸಿದ್ದಾಪುರ ರಾಶಿ ₹43,099 ₹46,899 ₹45,299
17 ಸಿದ್ದಾಪುರ ಕೋಕಾ ₹23,899 ₹27,899 ₹23,899
18 ಶಿರಸಿ ಬೆಟ್ಟೆ ₹28,220 ₹38,698 ₹32,726
19 ಶಿರಸಿ ಬಿಳೆ ಗೊಟು ₹20,019 ₹29,309 ₹27,245
20 ಶಿರಸಿ ರಾಶಿ ₹41,098 ₹47,099 ₹43,905

ಏರುತ್ತಿದೆ ಕೊಬ್ಬರಿ ಬೆಲೆ!

ಒಂದು ಕಡೆ ಅಡಿಕೆ ಬೆಲೆ ಕಡಿಮೆಯಾಗುತ್ತಿದ್ದರೆ ಮತ್ತೊಂದೆಡೆ ತೆಂಗು ಬೆಳೆಗಾರರಿಗೆ ಬಹಳ ಕಾಯುವಿಕೆ ನಂತರ ಬೆಲೆ ಏರಿಕೆಯ ಸಿಹಿ ಸಿಕ್ಕಿದೆ. 10,000 ರೂಪಾಯಿ ಕೂಡ ದಾಟದ ಕೊಬ್ಬರಿ ಧಾರಣೆ, ಕಳೆದ ಕೆಲವು ದಿನಗಳಿಂದ 12,000 ರೂಪಾಯಿ ದಾಟಿದ್ದು, ತೆಂಗು ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸೋಮವಾರ ತಿಪಟೂರು ಮಾರುಕಟ್ಟೆಯಲ್ಲಿ ಕನಿಷ್ಠ 11,500 ರೂಪಾಯಿ ಗರಿಷ್ಠ 12,000 ರೂಪಾಯಿ ಆಗಿತ್ತು. ಅರಸಿಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 8,000 ರೂಪಾಯಿ ಮತ್ತು ಗರಿಷ್ಠ 12,000 ರೂಪಾಯಿ ಆಗಿತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹8,000 ₹12,000 ₹8,000
2 ಅರಸೀಕೆರೆ ಬೇರೆ ₹4,500 ₹8,625 ₹8,625
3 ತಿಪಟೂರು ಕೊಬ್ಬರಿ ₹11,500 ₹12,000 ₹11,700
4 ನಾಗಮಂಗಲ ಮಧ್ಯಮ ₹7,800 ₹8,000 ₹7,800
5 ನಾಗಮಂಗಲ ಸಣ್ಣ ₹8,600 ₹8,600 ₹8,600
6 ಕೆ.ಆರ್.ಪೇಟೆ ಕೊಬ್ಬರಿ ₹9,780 ₹9,780 ₹9,780

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+