ರಾಷ್ಟ್ರೀಯ ಭೂದೃಶ್ಯ ಹಬ್ಬ ನೋಡಲು ಲಾಲ್ ಬಾಗ್‌ಗೆ ಬನ್ನಿ

ಬೆಂಗಳೂರು, ನವೆಂಬರ್ 11 : ಉದ್ಯಾನ ನಗರಿ ಬೆಂಗಳೂರಿನ ಲಾಲ್‌ ಬಾಗ್‌ 'ರಾಷ್ಟ್ರೀಯ ಭೂದೃಶ್ಯ ಹಬ್ಬ'ಕ್ಕೆ ಸಿದ್ಧವಾಗಿದೆ. ಬುಧವಾರದಿಂದ ನವೆಂಬರ್ 15ರ ತನಕ ಗಾಜಿನ ಮನೆಯಲ್ಲಿ ಭೂ ದೃಶ್ಯ ಹಬ್ಬ ನಡೆಯಲಿದೆ.

ನವೆಂಬರ್ 11ರ ಬುಧವಾರ ಬೆಳಗ್ಗೆ 11 ಗಂಟೆಗೆ 'ರಾಷ್ಟ್ರೀಯ ಭೂದೃಶ್ಯ ಹಬ್ಬ' (ಲ್ಯಾಂಡ್‌ಸ್ಕೇಪ್‌ ಫೆಸ್ಟ್‌)
ಉದ್ಘಾಟನೆಗೊಳ್ಳಲಿದೆ. ಒಟ್ಟು 7,000 ಚದರ ಅಡಿ ಪ್ರದೇಶದಲ್ಲಿ 45,000 ಬಗೆಯ ಹೂ ಹಾಗೂ ಎಲೆ ಜಾತಿಯ ಗಿಡಗಳಿಂದ ಭೂದೃಶ್ಯದ ಹೊಸ ಮಾದರಿಯ 'ವರ್ಟಿಕಲ್‌ ಗಾರ್ಡನ್‌' ನಿರ್ಮಿಸಲಾಗಿದೆ. [ಹೂವಿನ ತೋಟದಲ್ಲಿ ಕಳೆದು ಹೋದ ಹೂವಿನಂಥ ಹುಡುಗಿ]

lal bagh

ಅಂತರರಾಷ್ಟ್ರೀಯ ಖ್ಯಾತಿಯ ಲ್ಯಾಂಡ್‌ಸ್ಕೇಪ್‌ ವಿನ್ಯಾಸಕಾರ ಕೃಷ್ಣ ಚವ್ಹಾಣ್‌ ಅವರ ಮಾರ್ಗದರ್ಶನದಲ್ಲಿ ವರ್ಟಿಕಲ್‌ ಗಾರ್ಡನ್‌ ಸಿದ್ಧಪಡಿಸಲಾಗಿದೆ. ಪ್ರದರ್ಶನದಲ್ಲಿ ಇಟ್ಟಿರುವ ಆಯ್ದ ಗಿಡಗಳನ್ನು ಪುಣೆಯ ವಿವಿಧ ಸಸ್ಯಾಗಾರಗಳಲ್ಲಿ ಕಳೆದ ಒಂದು ತಿಂಗಳಿಂದ 75 ಪರಿಣತರು ಸಿದ್ಧಗೊಳಿಸಿದ್ದಾರೆ. [ಬೆಂಗಳೂರು ಲಾಲ್ ಬಾಗ್ ಕೆಂಪುಕೋಟೆ ವಿಶೇಷತೆಗಳೇನು?]

ಗಾಜಿನ ಮನೆಯ ಒಳಾಂಗಣದಲ್ಲಿ ಅಲಂಕಾರಿಕ ತೋಟಗಾರಿಕೆಗೆ ಸಂಬಂಧಿಸಿದ ಬೊನ್ಸಾಯ್‌ ಗಿಡ, ಟೋಪಿಯರಿ ಆಕೃತಿ, ಜಲಸಸ್ಯ, ಲಕ್ಕಿ ಬ್ಯಾಂಬೂ, ಟೆರರೇರಿಯಂ, ಕೀಟಭಕ್ಷಕ ಗಿಡಗಳನ್ನು ನೋಡಬಹುದಾಗಿದೆ. ನವೆಂಬರ್ 11ರಿಂದ 5 ದಿನಗಳ ಕಾಲ ಈ ಭೂ ದೃಶ್ಯ ಹಬ್ಬ ನಡೆಯಲಿದೆ.

ಪ್ರವೇಶ ದರ : ರಾಷ್ಟ್ರೀಯ ಭೂದೃಶ್ಯ ಹಬ್ಬದ ಪ್ರವೇಶ ಶುಲ್ಕ ಎಲ್ಲಾ ದಿನ ಒಂದೇ ರೀತಿ ಇರುತ್ತದೆ. ವಸ್ಕರಿಗೆ 40 ಮತ್ತು ಮಕ್ಕಳಿಗೆ 10 ರೂ. ದರವಿದೆ. ಬೆಳಗ್ಗೆ 9 ರಿಂದ ಸಂಜೆ 50.30ರ ತನಕ ಲಾಲ್ ಬಾಗ್ ಪ್ರವೇಶ ದ್ವಾರದಲ್ಲಿ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ.

400 ಪೊಲೀಸರ ನಿಯೋಜನೆ : 5 ದಿನದ ಭೂ ದೃಶ್ಯ ಹಬ್ಬಕ್ಕೆ ಸುಮಾರು 3ರಿಂದ 4 ಲಕ್ಷ ಜನ ಬರುವ ನಿರೀಕ್ಷೆ ಇದೆ. ಲಾಲ್ ಬಾಗ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರಿ ಪೊಲೀಸರು ಸೇರಿದಂತೆ ಒಟ್ಟು 400 ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ವಾಹನ ಪಾರ್ಕಿಂಗ್ : ಲಾಲ್ ಬಾಗ್‌ಗೆ ಡಬಲ್ ರಸ್ತೆಯಿಂದ ಬರುವವರು ಬಂಡೆಯ ಎಡ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದು. ಶಾಂತಿನಗರ ಟಿಟಿಎಂಸಿ ಮತ್ತು ಮಯೂರ ರೆಸ್ಟೋರೆಂಟ್ ಬಳಿ ಇರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣದಲ್ಲಿ ವಾಹನಗಳನ್ನು ನಿಲ್ಲಿಸಬಹುದಾಗಿದೆ.

ಕಬ್ಬನ್ ಪಾರ್ಕ್‌ನಲ್ಲೂ ಪ್ರದರ್ಶನ : ಕಬ್ಬನ್‌ ಪಾರ್ಕ್‌ನಲ್ಲಿಯೂ ನವೆಂಬರ್ 14 ಮತ್ತು 15ರಂದು ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ತೋಟಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಪ್ರದರ್ಶನ ಬೆಳಗ್ಗೆ 8ರಿಂದ ಸಂಜೆ 7ರ ವರೆಗೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+