Arecanut And Copra Price: 10 ಸಾವಿರ ದಾಟಿದ ಕೊಬ್ಬರಿ ದರ: ಅಡಿಕೆ ಧಾರಣೆ ತಿಳಿಯಿರಿ
7500 ರೂಪಾಯಿಗಳಿಗೆ ಕುಸಿತ ಕಂಡಿದ್ದ ಕೊಬ್ಬರಿ ದರ ಸದ್ಯ ಏರಿಕೆಯ ಹಾದಿಯಲ್ಲಿದ್ದು, ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಕಳೆದ ವಾರ ಪ್ರತಿ ಕ್ವಿಂಟಾಲ್ ಕೊಬ್ಬರಿ ದರ ಗರಿಷ್ಠ 9000 ರೂಪಾಯಿ ಮುಟ್ಟಿತ್ತು, ಈ ವಾರ ಇನ್ನೂ ಒಂದು ಸಾವಿರ ರೂಪಾಯಿ ಏರಿಕೆಯಾಗಿದ್ದು ಕ್ವಿಂಟಾಲ್ ಕೊಬ್ಬರಿ ದರ 10000 ರೂಪಾಯಿ ಮುಟ್ಟಿದೆ.
ಅರಸೀಕೆರೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಗರಿಷ್ಠ 10 ಸಾವಿರ ರೂಪಾಯಿ ತಲುಪಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಯಾದ ತಿಪಟೂರಿನಲ್ಲಿ ಕೂಡ ಕೊಬ್ಬರಿ ದರ ಕೊಂಚ ಏರಿಕೆ ಕಂಡಿದೆ. ಸೋಮವಾರ ಗರಿಷ್ಠ 9800 ರೂಪಾಯಿಗೆ ಮಾರಾಟವಾಗಿದ್ದರೆ, ಮಂಗಳವಾರ 9100 ರೂಪಾಯಿಗೆ ಹರಾಜಾಗಿದೆ.

ಗುಬ್ಬಿಯಲ್ಲಿ ಕೂಡ ಕೊಬ್ಬರಿ 9000 ರೂಪಾಯಿ ಗಡಿ ದಾಟಿದೆ. ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಇತ್ತೀಚಿನ ದಿನಗಳಲ್ಲಿ ಅಲ್ಪ ಪ್ರಮಾಣದಲ್ಲಿಯಾದರೂ ಬೆಲೆ ಏರಿಕೆ ಆಗುತ್ತಿರುವುದು ಸಮಾಧಾನ ತಂದಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
ಸ್ಥಿರತೆ ಕಾಯ್ದುಕೊಂಡ ಅಡಿಕೆ ಧಾರಣೆ
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಚನ್ನಗಿರಿ | ರಾಶಿ | ₹50,120 | ₹56,212 | ₹54,553 |
| 2 | ಸುಳ್ಯ | ಹೊಸ ವೆರೈಟಿ | ₹40,000 | ₹41,200 | ₹40,100 |
| 3 | ಬಂಟ್ವಾಳ | ಹೊಸ ವೆರೈಟಿ | ₹27,500 | ₹43,200 | ₹41,000 |
| 4 | ಬಂಟ್ವಾಳ | ಹಳೆಯ ವೆರೈಟಿ | ₹46,000 | ₹48,000 | ₹47,000 |
| 5 | ಪುತ್ತೂರು | ಕೋಕಾ | ₹11,000 | ₹25,000 | ₹18,000 |
| 6 | ಪುತ್ತೂರು | ಹೊಸ ವೆರೈಟಿ | ₹34,000 | ₹42,500 | ₹38,250 |
| 7 | ಶಿವಮೊಗ್ಗ | ರಾಶಿ | ₹35,055 | ₹56,212 | ₹54,312 |
| 8 | ಶಿವಮೊಗ್ಗ | ಸರಕು | ₹44,400 | ₹79,196 | ₹74,069 |
| 9 | ಸಾಗರ | ರಾಶಿ | ₹34,899 | ₹53,209 | ₹52,649 |
| 10 | ಸಾಗರ | ಕೆಂಪುಗೋಟು | ₹36,989 | ₹36,989 | ₹36,989 |
| 11 | ಯಲ್ಲಾಪುರ | ರಾಶಿ | ₹46,100 | ₹54,169 | ₹51,200 |
| 12 | ಸಿದ್ದಾಪುರ | ರಾಶಿ | ₹51,369 | ₹52,819 | ₹52,399 |
| 13 | ಕಾರ್ಕಳ | ಹಳೆಯ ವೆರೈಟಿ | ₹40,000 | ₹48,000 | ₹47,000 |
| 14 | ಸಿರಾ | ಬೇರೆ | ₹9,000 | ₹55,000 | ₹50,322 |
| 15 | ತುಮಕೂರು | ರಾಶಿ | ₹52,800 | ₹54,500 | ₹53,200 |
| 16 | ಕುಮಟಾ | ಹಳೆ ಚಾಲಿ | ₹38,699 | ₹41,229 | ₹40,529 |
| 17 | ಶಿರಸಿ | ರಾಶಿ | ₹44,399 | ₹52,199 | ₹49,582 |
ರಾಶಿ ಕೆಂಪಡಕೆ ದರ ಕ್ವಿಂಟಾಲ್‌ಗೆ 57 ಸಾವಿರ ದಾಟಿದ ನಂತರ ಕುಸಿತ ಕಂಡಿದ್ದ ಅಡಿಕೆ ಧಾರಣೆ ಸದ್ಯ 55 ಸಾವಿರ ರೂಪಾಯಿ ಆಸುಪಾಸಿನಲ್ಲಿ ಸ್ಥಿರವಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ 53-55 ಸಾವಿರದವರೆಗೆ ಮಾರಾಟವಾಗುತ್ತಿದೆ.
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹8,200 | ₹10,008 | ₹8,750 |
| 2 | ಕೆ.ಆರ್.ಪೇಟೆ | ಬೇರೆ | ₹7,719 | ₹7,719 | ₹7,719 |
| 3 | ತಿಪಟೂರು | ಕೊಬ್ಬರಿ | ₹7,500 | ₹9,101 | ₹8,800 |
| 4 | ಗುಬ್ಬಿ | ಬಾಲ್ | ₹9,000 | ₹9,000 | ₹9,000 |
| 5 | ಕೆ.ಆರ್.ಪೇಟೆ | ಬೇರೆ | ₹7,750 | ₹7,750 | ₹7,750 |
| 6 | ಪುತ್ತೂರು | ಬೇರೆ | ₹4,500 | ₹7,300 | ₹5,900 |
| 7 | ಸಿರಾ | ಸಣ್ಣ | ₹7,800 | ₹7,800 | ₹7,800 |
ಪ್ರಮುಖ ಅಡಿಕೆ ಮಾರುಕಟ್ಟೆಯಾಗಿರುವ ಶಿವಮೊಗ್ಗದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 35,055 ಇದ್ದರೆ, ಗರಿಷ್ಠ 56,212 ರೂಗಳವರೆಗೆ ಮಾರಾಟವಾಗಿದೆ. ತುಮಕೂರಿನಲ್ಲಿ ರಾಶಿ ಅಡಿಕೆ ದರ ಕನಿಷ್ಠ 52,800 ಇದ್ದರೆ, ಗರಿಷ್ಠ54,500 ರೂಪಾಯಿಗೆ ಮಾರಾಟವಾಗಿದೆ. ಸಾಗರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಕನಿಷ್ಠ ₹34,899 ರೂಪಾಯಿ ಇದ್ದರೆ ಗರಿಷ್ಠ ₹53,209 ರೂಪಾಯಿಗೆ ಹರಾಜಾಗಿದೆ.ಜುಲೈ 26ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)












Click it and Unblock the Notifications