Arecanut Price: ಏರಿಕೆಯಾಗುತ್ತಿದೆ ಅಡಿಕೆ, ಕೊಬ್ಬರಿ ಧಾರಣೆ : ಇತ್ತೀಚಿನ ಮಾರುಕಟ್ಟೆ ಬೆಲೆ
ತೀವ್ರ ಕುಸಿತ ಕಂಡಿದ್ದ ಕೊಬ್ಬರಿ ಬೆಲೆ ಸದ್ಯ ಏರಿಕೆಯ ಹಾದಿಯಲ್ಲಿದ್ದು ತೆಂಗು ಬೆಳೆಗಾರರಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ತಿಪಟೂರು ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಕೊಬ್ಬರಿ ಕ್ವಿಂಟಾಲ್‌ಗೆ ಗರಿಷ್ಠ 10000 ರೂಪಾಯಿಗಳಿಗೆ ಮಾರಾಟವಾಗಿದೆ. ಇನ್ನು 57 ಸಾವಿರ ದಾಟಿದ ಬಳಿಕ ಅಲ್ಪ ಕುಸಿತ ಕಂಡಿದ್ದ ಅಡಿಕೆ ಕೂಡ ಏರಿಕೆಯಾಗುತ್ತಿದ್ದು ಮತ್ತೆ 57 ಸಾವಿರದ ಸಮೀಪ ಬಂದಿದೆ.
ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಯಾದ ತಿಪಟೂರಿನಲ್ಲಿ ಕೂಡ ಕೊಬ್ಬರಿ ದರ ಏರಿಕೆ ಕಂಡಿದೆ. ಕ್ವಿಂಟಾಲ್ ಕೊಬ್ಬರಿ ಗರಿಷ್ಠ 10000 ರೂಪಾಯಿಗೆ ಮಾರಾಟವಾಗಿದ್ದರೆ, ಸರಾಸರಿ ದರ 9500 ರೂಪಾಯಿ ಆಗಿತ್ತು. ಜುಲೈ 26ರಂದು ಗರಿಷ್ಠ ದರ 10206 ರೂಪಾಯಿವರೆಗೆ ಮಾರಾಟವಾಗಿತ್ತು. ಅರಸೀಕೆರೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಗರಿಷ್ಠ 10008 ರೂಪಾಯಿ ತಲುಪಿದೆ.

ತುರುವೇಕೆರೆಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ ಗರಿಷ್ಠ 10,200 ವರೆಗೆ ಮಾರಾಟವಾಗಿದೆ. ತುಮಕೂರು ಮಾರುಕಟ್ಟೆಯಲ್ಲಿ ಕೂಡ ಕೊಬ್ಬರಿ ಗರಿಷ್ಠ 9950 ರೂಪಾಯಿವರೆಗೆ ಮಾರಾಟವಾಗಿದೆ. ಕ್ವಿಂಟಾಲ್ ಕೊಬ್ಬರಿ ದರ 7500 ರೂಪಾಯಿಗಳಿಗೆ ಕುಸಿಯುವ ಮೂಲಕ ಬೆಳೆಗಾರರಲ್ಲಿ ಆತಂಕ ಮೂಡಿಸಿತ್ತು, ಸದ್ಯ ದರ ಏರಿಕೆಯಿಂದ ನಿಟ್ಟುಸಿರು ಬಿಡುವಂತಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
ಮತ್ತೆ ಏರಿಕೆಯ ಹಾದಿಯಲ್ಲಿ ಅಡಿಕೆ ದರ
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಹೊನ್ನಳ್ಳಿ | ರಾಶಿ | ₹54,299 | ₹54,299 | ₹54,299 |
| 2 | ಬಂಟ್ವಾಳ | ಕೋಕಾ | ₹12,500 | ₹25,000 | ₹22,500 |
| 3 | ಬಂಟ್ವಾಳ | ಹೊಸ ವೆರೈಟಿ | ₹27,500 | ₹43,200 | ₹41,000 |
| 4 | ಬಂಟ್ವಾಳ | ಹಳೆಯ ವೆರೈಟಿ | ₹46,000 | ₹48,000 | ₹47,000 |
| 5 | ಚನ್ನಗಿರಿ | ರಾಶಿ | ₹53,799 | ₹56,712 | ₹54,782 |
| 6 | ಪುತ್ತೂರು | ಹೊಸ ವೆರೈಟಿ | ₹34,000 | ₹42,500 | ₹38,250 |
| 7 | ಶಿವಮೊಗ್ಗ | ರಾಶಿ | ₹41,399 | ₹56,612 | ₹54,659 |
| 8 | ಶಿವಮೊಗ್ಗ | ಸರಕು | ₹58,009 | ₹81,100 | ₹72,996 |
| 9 | ಸಾಗರ | ರಾಶಿ | ₹41,699 | ₹54,339 | ₹53,599 |
| 10 | ಸಾಗರ | ಕೆಂಪುಗೋಟು | ₹28,989 | ₹41,899 | ₹40,699 |
| 11 | ಯಲ್ಲಾಪುರ | ಅಪಿ | ₹55,395 | ₹58,975 | ₹56,399 |
| 12 | ಯಲ್ಲಾಪುರ | ಚಾಲಿ | ₹37,412 | ₹43,201 | ₹41,069 |
| 13 | ಕಾರ್ಕಳ | ಹಳೆಯ ವೆರೈಟಿ | ₹40,000 | ₹48,000 | ₹47,000 |
| 14 | ಮಡಿಕೇರಿ | ಕಚ್ಚಾ | ₹41,455 | ₹41,455 | ₹41,455 |
| 15 | ಕುಮಟಾ | ಚಿಪ್ಪು | ₹31,899 | ₹34,899 | ₹33,749 |
| 16 | ಕುಮಟಾ | ಹಳೆ ಚಾಲಿ | ₹38,699 | ₹41,229 | ₹40,529 |
| 17 | ಕುಮಟಾ | ಫ್ಯಾಕ್ಟರಿ | ₹14,609 | ₹22,849 | ₹21,769 |
57 ಸಾವಿರ ರೂಪಾಯಿ ತಲುಪಿದ ನಂತರ ಕುಸಿತ ಕಂಡಿದ್ದ ಅಡಿಕೆ ದರ ಮತ್ತೆ ಏರಿಕೆಯಾಗುತ್ತಿದೆ. ಸದ್ಯ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಕೆಂಪಡಕೆ ದರ 55-56 ಸಾವಿರದವರೆಗೆ ಮಾರಾಟವಾಗುತ್ತಿದೆ. ಪ್ರಮುಖ ಅಡಿಕೆ ಮಾರುಕಟ್ಟೆಯಾಗಿರುವ ಶಿವಮೊಗ್ಗದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 41,399 ಇದ್ದರೆ, ಗರಿಷ್ಠ 56,612 ರೂಗಳವರೆಗೆ ಮಾರಾಟವಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ದರ ಕನಿಷ್ಠ46,403 ರೂಪಾಯಿ ಇದ್ದರೆ, ಗರಿಷ್ಠ54,790 ರೂಪಾಯಿಗೆ ಮಾರಾಟವಾಗಿದೆ.
ಜುಲೈ 28ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ತಿಪಟೂರು | ಕೊಬ್ಬರಿ | ₹8,000 | ₹10,000 | ₹9,500 |
| 2 | ತುಮಕೂರು | ಕೊಬ್ಬರಿ | ₹8,400 | ₹9,950 | ₹9,250 |
| 3 | ತುರುವೇಕೆರೆ | ಕೊಬ್ಬರಿ | ₹9,900 | ₹10,200 | ₹10,000 |
| 4 | ಪುತ್ತೂರು | ಬೇರೆ | ₹4,500 | ₹7,300 | ₹5,900 |
| 5 | ಕೆ.ಆರ್.ಪೇಟೆ | ಬೇರೆ | ₹7,719 | ₹7,719 | ₹7,719 |
| 6 | ಗುಬ್ಬಿ | ಬಾಲ್ | ₹9,000 | ₹9,000 | ₹9,000 |
| 7 | ಚನ್ನರಾಯಪಟ್ಟಣ | ಮಧ್ಯಮ | ₹7,200 | ₹7,200 | ₹7,200 |












Click it and Unblock the Notifications