ರೈತರಿಗೆ ಸಹಕಾರ ನೀಡಲು ಪಶುಭಾಗ್ಯ ಯೋಜನೆ
ಜಿಲ್ಲೆಗಳಲ್ಲಿ ಪಶುಭಾಗ್ಯ ಯೋಜನೆಯಡಿ ಅತಿ ಹಿಂದುಳಿದ ಮತ್ತು ಹಿಂದುಳಿದ ತಾಲೂಕುಗಳಿಗೆ 478 ಘಟಕ ಸ್ಥಾಪಿಸಲು 1.66 ಕೋಟಿ ರೂ.ಗಳ ಅನುದಾನ ನಿಗದಿಯಾಗಿದೆ. ಅದೇ ರೀತಿ 166 ಹಸು /ಎಮ್ಮೆ ಹಾಲು ಉತ್ಪಾದನಾ ಘಟಕಗಳಿಗಾಗಿ 56.70 ಲಕ್ಷ ರೂ., 292 ಕುರಿ/ಮೇಕೆ ಸಾಕಾಣಿಕೆ ಘಟಕಗಳಿಗಾಗಿ 10.12 ಲಕ್ಷ ರೂ. ನಿಗದಿಪಡಿಸಲಾಗಿದೆ.
164 ಹಂದಿ ಸಾಕಾಣಿಕೆ ಘಟಕಗಳಿಗಾಗಿ 43.97 ಲಕ್ಷ ರೂ., 40 ಕೋಳಿ ಸಾಕಾಣಿಕೆ ಘಟಕಗಳಿಗಾಗಿ 19.45ಲಕ್ಷ ರೂ. ಹಾಗೂ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು 100 ಘಟಕಗಳಿಗಾಗಿ 5.07 ಲಕ್ಷ ರೂ. ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. [ಕೆಎಂಎಫ್ ನಂತೆ ಬ್ರಾಂಡೆಡ್ ಮಟನ್ ಸ್ಟಾಲ್ ಸ್ಥಾಪನೆ : ಸಿದ್ದರಾಮಯ್ಯ]

ವಿವಿಧ ಘಟಕಗಳ ವೆಚ್ಚಗಳು : ಪಶುಭಾಗ್ಯ ಯೋಜನೆಯಡಿ ವಿವಿಧ ಘಟಕಗಳನ್ನು ಸ್ಥಾಪಿಸಲು ಪಶು ಸಾಕಾಣೆದಾರರಿಗೆ ಸಾಲ ಸಹಾಯಧನ ನೀಡಲಾಗುತ್ತದೆ. 2 ಹಸು / ಎಮ್ಮೆ ಹೈನುಗಾರಿಕೆ ಘಟಕಕ್ಕಾಗಿ 1.20 ಲಕ್ಷ ರೂ., 10+1 ಕುರಿ/ ಮೇಕೆ ಘಟಕಕ್ಕಾಗಿ 67,440 ರೂ. ಸಹಾಯಧನ ನೀಡಲಾಗುತ್ತದೆ.
15+1 ಕುರಿ / ಮೇಕೆ ಘಟಕಕ್ಕಾಗಿ 97,300, 3+1 ಹಂದಿ ಘಟಕಕ್ಕಾಗಿ 94 ಸಾವಿರ ರೂ.,500 ಮಾಂಸದ ಕೋಳಿ ಘಟಕಕ್ಕಾಗಿ 85 ಸಾವಿರ, 500 ಮೊಟ್ಟೆ ಕೋಳಿ ಘಟಕಕ್ಕಾಗಿ 1,09,500 ರೂ. ಹಾಗೂ 250 ಗಿರಿರಾಜ / ದೇಶಿ ಕೋಳಿ ಘಟಕಕ್ಕಾಗಿ 58 ಸಾವಿರ ರೂ.ಗಳ ಸಾಲ ಸಹಾಯಧನ ಒದಗಿಸಲಾಗುವುದು.
ರೈತರು ಏನು ಮಾಡಬೇಕು? : ಈ ಯೋಜನೆಯ ಲಾಭ ಪಡೆಯಲು ರೈತರು ಆಯಾ ತಾಲ್ಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಿಂದ ನಿಗದಿತ ಅರ್ಜಿ ನಮೂನೆ ಪಡೆದು 3 ಭಾವಚಿತ್ರ, ವಾಸಸ್ಥಳ ಪ್ರಮಾಣಪತ್ರ, ಪಹಣಿ, ವಂಶವೃಕ್ಷ, ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣಪತ್ರ ಮುಂತಾದ ದಾಖಲೆಗಳ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ರೈತರು ಯೋಜನೆ ಬಗ್ಗೆ ಹೆಚ್ಚಿ ವಿವರಗಳಿಗಾಗಿ ತಾಲ್ಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ. ಸದ್ಯ, ಅಕ್ಟೋಬರ್ 15, 2015ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.












Click it and Unblock the Notifications