ಅಂಕಿ-ಅಂಶ: ಒಟ್ಟು ಎಷ್ಟು ರೈತರ ಎಷ್ಟು ಮೊತ್ತದ ಸಾಲಮನ್ನಾ ಆಗಲಿದೆ
Recommended Video

ಬೆಂಗಳೂರು, ಜುಲೈ 06: ಕುಮಾರಸ್ವಾಮಿ ಅವರು ನಿನ್ನೆ ಬಹು ನಿರೀಕ್ಷಿತ ರೈತರ ಸಾಲಮನ್ನಾ ಮಾಡಿದ್ದಾರೆ. 34000 ಕೋಟಿಗಿಂತಲೂ ಹೆಚ್ಚಿನ ಮೊತ್ತವನ್ನು ಇದಕ್ಕಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಾಗಾದರೆ ರಾಜ್ಯದ ಎಷ್ಟು ರೈತರ, ಎಷ್ಟು ಸಾಲಗಳು ಮನ್ನಾ ಆಗಲಿವೆ ಎಂಬಿತ್ಯಾದಿ ಕುತೂಹಲಕಾರಿ ಅಂಕಿ ಅಂಶಗಳು ಇಲ್ಲಿವೆ ಕಣ್ಣಾಡಿಸಿ...

* ಕರ್ನಾಟಕದಲ್ಲಿರುವ ಖಾಸಗಿ ವಲಯ ಬ್ಯಾಂಕು, ಸಹಕಾರಿ ಬ್ಯಾಂಕು, ಗ್ರಾಮೀಣ ಬ್ಯಾಂಕು ಇನ್ನಿತರೆ ಬ್ಯಾಂಕುಗಳಲ್ಲಿ ಇರುವ ಒಟ್ಟು ಬೆಳೆ ಸಾಲದ ಮೊತ್ತ ರೂ.53,328 ಕೋಟಿ.
* ಒಟ್ಟು 17.32 ಲಕ್ಷ ರೈತರು ಸುಸ್ತಿ ಸಾಲದಾರರಿದ್ದಾರೆ. ಇವರ ಒಟ್ಟು ಸಾಲದ ಮೊತ್ತ 30,266 ಕೋಟಿ.
* ಈಗಾಗಲೇ ಸಾಲಮರುಪಾವತಿ ಮಾಡಿರುವ ರೈತರಿಗೆ ಪ್ರೋತ್ಸಾಹ ಧನವಾಗಿ 6893 ಕೋಟಿ ನೀಡುತ್ತಿದೆ ಸರ್ಕಾರ. ಇದರ ಲಾಭವನ್ನು 27.67 ಲಕ್ಷ ರೈತರು ಪಡೆಯಲಿದ್ದಾರೆ.
* 3.81 ಲಕ್ಷ ಖಾತೆಗಳ ವರ್ಷದ ಅವಧಿ ಮೀರಿದ ಬೆಳೆ ಸಾಲಗಳು(ಎನ್‌ಪಿಎ) ಇದ್ದು ಇವುಗಳ 6543 ಕೋಟಿ ಮನ್ನಾ ಆಗಲಿದೆ.
* 4.90 ಲಕ್ಷ ವರ್ಗೀಕೃತಗೊಳಿಸಿರುವ ಬೆಳೆಸಾಲಗಳಿದ್ದು ಇವುಗಳ 7207 ಕೋಟಿ ಸಾಲಮನ್ನಾ ಆಗಲಿದೆ.
* 8.61 ಲಕ್ಷ ಸುಸ್ತಿ ಬೆಳೆ ಸಾಲ ಇದ್ದು ಇವುಗಳ 16,516 ಕೋಟಿ ಮನ್ನಾ ಆಗಲಿದೆ.
* ಪ್ರಸ್ತುತ ಚಾಲ್ತಿಯಲ್ಲಿರುವ ಸಾಲಗಳು ಅಥವಾ ತೀರಿಸಿದ ಸಾಲಗಳು 27.57 ಲಕ್ಷ. ಇವಕ್ಕೆ ನೀಡುತ್ತಿರುವ ಪ್ರೋತ್ಸಾಹ ಧನ 6893 ಕೋಟಿ.
* ರಾಜ್ಯದ ಒಟ್ಟು 44.89 ಲಕ್ಷ ರೈತರ ಸಾಲದ ಖಾತೆಗಳ 37,159 ಕೋಟಿ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಲಿದೆ.











Click it and Unblock the Notifications