Karnataka Dam Water Level: ಹಲವು ಜಲಾಶಯಗಳು ಭರ್ತಿ, ಜುಲೈ 14ರಂದು ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ಸಂಪೂರ್ಣ ವಿವರ
ಬೆಂಗಳೂರು, ಜುಲೈ. 14: ಈ ವರ್ಷದ ಮುಂಗಾರು ಮಳೆ ಅಬ್ಬರವಿದೆ. ರಾಜ್ಯದಲ್ಲಿ ವರುಣ ತನ್ನ ಆರ್ಭಟ ಮುಂದುವರೆಸುತ್ತಲೆ ಇದ್ದಾನೆ. ಕರಾವಳಿ ಜಿಲ್ಲೆಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿಯೇ ಹವಾಮಾನ ಇಲಾಖೆ ಇನ್ನು ಒಂದು ವಾರ ನಿರಂತರ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ.
ಕರಾವಳಿ ಭಾಗದ ಎಲ್ಲಾ ಜಿಲ್ಲೆಗಳಿಗೆ ಭಾನುವಾರ ಆರೆಂಜ್ ಅಲರ್ಟ್ ಹಾಗೂ ಜುಲೈ 15 ಮತ್ತು 16ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡು ಭಾಗದ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಕೆಲ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಮಳೆ ಬೀಳಲಿದೆ. ಮಳೆ ಅಬ್ಬರ ಜೋರಾಗಿರುವ ಜೊತೆಗೆ ರಾಜ್ಯದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು ಹಲವು ಡ್ಯಾಂಗಳು ತುಂಬಿವೆ. ಜುಲೈ 14 ರಂದು ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಜುಲೈ 14ರಂದು ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ
1. ಕೆಆರ್ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ -38.04 ಮೀಟರ್
ಇಂದಿನ ನೀರಿನ ಮಟ್ಟ- 26.64 ಟಿಎಂಸಿ
ಒಳಹರಿವು - 3538 ಕ್ಯೂಸೆಕ್
ಹೊರಹರಿವು - 2257 ಕ್ಯೂಸೆಕ್
2. ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ- 519.60 ಮೀಟರ್
ಇಂದಿನ ನೀರಿನ ಮಟ್ಟ - 88.63 ಟಿಎಂಸಿ
ಒಳಹರಿವು - 19919 ಕ್ಯೂಸೆಕ್
ಹೊರಹರಿವು - 3980 ಕ್ಯೂಸೆಕ್
3. ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 871.38 ಮೀಟರ್
ಇಂದಿನ ನೀರಿನ ಮಟ್ಟ - 6.45 ಟಿಎಂಸಿ
ಒಳಹರಿವು - 3038 ಕ್ಯೂಸೆಕ್
ಹೊರಹರಿವು - 200 ಕ್ಯೂಸೆಕ್

4. ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 497.71 ಮೀಟರ್
ಇಂದಿನ ನೀರಿನ ಮಟ್ಟ- 30.69 ಟಿಎಂಸಿ
ಒಳಹರಿವು - 18,060 ಕ್ಯೂಸೆಕ್
ಹೊರಹರಿವು - 360 ಕ್ಯೂಸೆಕ್
5. ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 633.80 ಮೀಟರ್
ಇಂದಿನ ನೀರಿನ ಮಟ್ಟ - 12.49 ಟಿಎಂಸಿ
ಒಳಹರಿವು - 2520 ಕ್ಯೂಸೆಕ್
ಹೊರಹರಿವು - 194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 554.44 ಮೀಟರ್
ಇಂದಿನ ನೀರಿನ ಮಟ್ಟ - 44.67 ಟಿಎಂಸಿ
ಒಳಹರಿವು - 21,311 ಕ್ಯೂಸೆಕ್
ಹೊರಹರಿವು - 3545 ಕ್ಯೂಸೆಕ್
7. ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 696.13 ಮೀಟರ್
ಇಂದಿನ ನೀರಿನ ಮಟ್ಟ -18.81 ಟಿಎಂಸಿ
ಒಳಹರಿವು - 6424 ಕ್ಯೂಸೆಕ್
ಹೊರಹರಿವು - 5000 ಕ್ಯೂಸೆಕ್
8. ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 657.73 ಮೀಟರ್
ಇಂದಿನ ನೀರಿನ ಮಟ್ಟ - 25.13 ಟಿಎಂಸಿ
ಒಳಹರಿವು - 4870 ಕ್ಯೂಸೆಕ್
ಹೊರಹರಿವು - 159 ಕ್ಯೂಸೆಕ್
9. ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 662.91 ಮೀಟರ್
ಇಂದಿನ ನೀರಿನ ಮಟ್ಟ - 24.77 ಟಿಎಂಸಿ
ಒಳಹರಿವು - 7342 ಕ್ಯೂಸೆಕ್
ಹೊರಹರಿವು - 126 ಕ್ಯೂಸೆಕ್
10. ವಾಣಿವಿಲಾಸ ಸಾಗರ ಜಲಾಶಯ
ಗರಿಷ್ಠ ನೀರಿನ ಮಟ್ಟ - 652.24 ಮೀಟರ್
ಇಂದಿನ ನೀರಿನ ಮಟ್ಟ - 18.02 ಟಿಎಂಸಿ
ಒಳಹರಿವು - 0 ಕ್ಯೂಸೆಕ್
ಹೊರಹರಿವು - 147 ಕ್ಯೂಸೆಕ್












Click it and Unblock the Notifications