Arecanut Price: ಏರಿಕೆಯ ಹಾದಿಯಲ್ಲಿ ಅಡಿಕೆ ಧಾರಣೆ : ಕೊಬ್ಬರಿ ಬೆಲೆ ಎಷ್ಟಿದೆ?

ವರ್ಷಾಂತ್ಯದಲ್ಲಿ ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿ ಸಿಕ್ಕಿದೆ. ಸ್ಥಿರತೆ ಕಾಯ್ದುಕೊಂಡಿದ್ದ ಅಡಿಕೆ ಧಾರಣೆ ಕೆಲವು ದಿನಗಳಿಂದ ಅತ್ಯಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಬುಧವಾರ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆ ಹೆಚ್ಚಳವಾಗಿದೆ.

ಈ ವರ್ಷದಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ 55 ಸಾವಿರ ರೂ. ದಾಟಿ ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿತ್ತು. ನಂತರ ಅಡಿಕೆ ಧಾರಣೆ ಕುಸಿತ ಕಾಣುತ್ತಿತ್ತು, ಸದ್ಯ ರಾಶಿ ಅಡಿಕೆ ಬೆಲೆ ₹38,000 - ₹48,000 ನಡುವೆ ಇದೆ.

Karnataka Arecanut and Kobbari Prices as of December 20: Market Update

ಭದ್ರಾವತಿಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ಕ್ವಿಂಟಲ್‌ಗೆ ₹40,199 ಇದ್ದರೆ, ಗರಿಷ್ಠ ಧಾರಣೆ ₹48,179 ಆಗಿತ್ತು. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ ₹46,899 ಇದ್ದರೆ, ಗರಿಷ್ಠ ₹48,481 ದವರೆಗೆ ಮಾರಾಟವಾಗಿದೆ.

ಗೋಣಿಕೊಪ್ಪಲು ಮಾರುಕಟ್ಟೆಯಲ್ಲಿ ಸಿಪ್ಪೆ ಅಡಿಕೆ ಪ್ರತಿ ಕ್ವಿಂಟಾಲ್‌ಗೆ ₹5,000 ಗೆ ಮಾರಾಟವಾಗಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ ₹41,899 ಇದ್ದರೆ, ಗರಿಷ್ಠ ₹47,219 ಇತ್ತು. ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಲ್‌ಗೆ ₹36,499 ಕನಿಷ್ಠ ಬೆಲೆ ಇದ್ದರೆ ಗರಿಷ್ಠ ಬೆಲೆ ₹48,299 ಆಗಿತ್ತು.

ಕಾರ್ಕಳ ಮಾರುಕಟ್ಟೆಯಲ್ಲಿ ಹೊಸ ವೆರೈಟಿ ಅಡಿಕೆ ಕನಿಷ್ಠ ಬೆಲೆ ₹25,000 ಇದ್ದರೆ ಗರಿಷ್ಠ ₹36,500 ರೂಪಾಯಿ ಆಗಿತ್ತು.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಪುತ್ತೂರು ಕೋಕಾ ₹11,000 ₹25,000 ₹18,000
2 ಪುತ್ತೂರು ಹೊಸ ವೆರೈಟಿ ₹27,000 ₹36,500 ₹31,750
3 ಬಂಟ್ವಾಳ ಕೋಕಾ ₹15,000 ₹27,500 ₹23,500
4 ಬಂಟ್ವಾಳ ಹೊಸ ವೆರೈಟಿ ₹27,500 ₹36,000 ₹33,000
5 ಬಂಟ್ವಾಳ ಹಳೆಯ ವೆರೈಟಿ ₹42,000 ₹45,500 ₹43,000
6 ಭದ್ರಾವತಿ ರಾಶಿ ₹40,199 ₹48,179 ₹46,784
7 ಚನ್ನಗಿರಿ ರಾಶಿ ₹46,899 ₹48,481 ₹48,054
8 ಗೋಣಿಕೊಪ್ಪಲು ಅಡಿಕೆ-ಸಿಪ್ಪೆ ₹5,000 ₹5,000 ₹5,000
9 ಹೊನ್ನಾವರ ಹಳೆ ಚಾಲಿ ₹36,000 ₹39,000 ₹38,000
10 ಕಾರ್ಕಳ ಹೊಸ ವೆರೈಟಿ ₹25,000 ₹36,500 ₹30,000
11 ಸಾಗರ ಬಿಳೆ ಗೊಟು ₹24,051 ₹33,466 ₹24,051
12 ಸಾಗರ ಚಾಲಿ ₹36,699 ₹37,549 ₹36,699
13 ಸಾಗರ ಕೆಂಪು ಗೋಟು ₹34,899 ₹34,899 ₹34,899
14 ಸಾಗರ ರಾಶಿ ₹41,899 ₹47,219 ₹46,849
15 ಶಿವಮೊಗ್ಗ ರಾಶಿ ₹36,499 ₹48,299 ₹47,899
16 ಸಿದ್ದಾಪುರ ಚಾಲಿ ₹36,219 ₹38,899 ₹38,309
17 ಸಿದ್ದಾಪುರ ರಾಶಿ ₹43,869 ₹47,582 ₹47,259
18 ಶಿರಸಿ ರಾಶಿ ₹45,099 ₹47,609 ₹46,653
19 ತೀರ್ಥಹಳ್ಳಿ ರಾಶಿ ₹47,500 ₹47,800 ₹47,800
20 ಯಲ್ಲಾಪುರ ರಾಶಿ ₹45,101 ₹53,969 ₹51,239

ಕೊಬ್ಬರಿ ಧಾರಣೆ ಹೇಗಿದೆ

ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹7,000 ಆಗಿದ್ದರೆ ಗರಿಷ್ಠ ₹8,500 ಆಗಿತ್ತು. ಅರಸಿಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹7,500 ಆಗಿದ್ದರೆ ಗರಿಷ್ಠ ₹8,150 ಆಗಿತ್ತು.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹7,500 ₹8,150 ₹8,050
2 ತಿಪಟೂರು ಕೊಬ್ಬರಿ ₹7,000 ₹8,500 ₹8,000
3 ತುರುವೇಕೆರೆ ಕೊಬ್ಬರಿ ₹8,150 ₹8,150 ₹8,150
4 ಕೆ.ಆರ್.ಪೇಟೆ ಬೇರೆ ₹8,250 ₹8,250 ₹8,250
5 ಪುತ್ತೂರು ಬೇರೆ ₹5,500 ₹9,100 ₹7,300

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+