ಡಿ.25ರಿಂದ ಲಾಲ್‌ ಬಾಗ್‌ ಪ್ಲಾಸ್ಟಿಕ್‌ ಮುಕ್ತ

ಬೆಂಗಳೂರು, ಡಿ. 26 : ಪ್ಲಾಸ್ಟಿಕ್‌ ಮುಕ್ತ ಲಾಲ್‌ ಬಾಗ್‌' ಯೋಜನೆಯನ್ನು ತೋಟಗಾರಿಕೆ ಇಲಾಖೆ ಜಾರಿಗೊಳಿಸಿದೆ. ಬುಧವಾರ ಡಿ.25ರಿಂದ ಲಾಲ್‌ ಬಾಗ್‌ನಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಸದಂತೆ ಜನರಿಗೆ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಲಾಗಿದೆ.

ಬೆಂಗಳೂರಿನ ಹೆಮ್ಮೆಯ ಲಾಲ್‌ ಬಾಗ್‌ ಅನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ತೋಟಗಾರಿಕೆ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ಅಗತ್ಯವಿರುವ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿದೆ. ಮೊದಲ ಹಂತವಾಗಿ ಪ್ಲಾಸ್ಟಿಕ್‌ ಮುಕ್ತವಾಗಿಸಲು ಯೋಜನೆ ರೂಪಿಸಿದೆ.

Lalbagh

ಲಿಟ್ಟರ್‌ ಫ್ರೀ ಲಾಲ್‌ ಬಾಗ್‌ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಇದಕ್ಕೆ ಕೈ ಜೋಡಿಸಿದ್ದು, ಲಾಲ್‌ ಬಾಗ್‌ ಆವರಣದಲ್ಲಿ ಪ್ಲಾಸ್ಟಿಕ್‌ ಬಳಸದಂತೆ ಜನರಿಗೆ ಅರಿವು ಮೂಡಿಸಲಿದೆ. ಡಿ.25ರ ಬುಧವಾರದಿಂದ ಪ್ರಾಯೋಗಿಕವಾಗಿ ಡಬ್ಬಲ್‌ ರೋಡ್‌ ಗೇಟ್‌ ಹಾಗೂ ಮುಖ್ಯ ದ್ವಾರದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆರಂಭಿಸಿದೆ. [ಲಾಲ್ ಬಾಗನ್ನು ದಯವಿಟ್ಟು ಕಾಪಾಡಿ]

ಪ್ಲಾಸ್ಟಿಕ್‌ ಮುಕ್ತ ಲಾಲ್‌ ಭಾಗ್ ಯೋಜನೆ ಅನ್ವಯ ಪ್ಲಾಸ್ಟಿಕ್‌ ಕವರ್‌ಗಳನ್ನು ನಿಗದಿತ ಸ್ಥಳದಲ್ಲಿ ಹಾಕುವುದು, ವಾಟರ್‌ ಬಾಟಲ್‌ಗ‌ಳನ್ನು ಗುರುತಿಸಿದ ಸ್ಥಳದಲ್ಲಿಯೇ ಬಿಸಾಡುವುದು, ಟೆಟ್ರಾಪ್ಯಾಕ್‌ಗಳ ಬಳಕೆಗೆ ನಿಷೇಧ ಹೇರುವುದು, ಜ್ಯೂಸ್‌ ಸ್ಟ್ರಾ(ಪೈಪ್‌)ಗಳು ಸೇರಿದಂತೆ ಯಾವುದೇ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಅರಿವು ಮೂಡಿಸುವುದು ಮುಂತಾದವು ಸೇರಿವೆ.

ಹಿಂದೆ 2003 ರಲ್ಲೇ ಈ ಯೋಜನೆ ಜಾರಿಗೊಳಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಯೋಜನೆ ಯಶಸ್ವಿಯಾಗಿರಲ್ಲ. ಸದ್ಯ ಎನ್‌ಜಿಒಗಳ ಜೊತೆಗೂಡಿ ಯೋಜನೆಯನ್ನು ಯಶಸ್ವಿಗೊಳಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಮುಂದಿನ ಹಂತದಲ್ಲಿ ಲಾಲ್‌ ಬಾಗ್‌ನಲ್ಲಿ ಒಣ ಮತ್ತು ಹಸಿ ಕಸ ಬೇರ್ಪಡಿಸುವ ಘಟಕ ಆರಂಭಿಸಲು ನಿರ್ಧರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+