ಎರಡು ತಿಂಗಳಿನಲ್ಲಿ ದುಪ್ಪಟ್ಟಾದ ಬೆಳ್ಳುಳ್ಳಿ ದರ

ಮುಂಬೈ ಜು 4: ಈ ವರ್ಷ ದೇಶದಲ್ಲಿ ಬೆಳ್ಳುಳ್ಳಿ ಉತ್ಪಾದನೆ ಅತೀ ಹೆಚ್ಚಾಗಿದ್ದರೂ ಮುಂಬೈ ಉಪನಗರಗಳಲ್ಲಿ ದರ ಕಳೆದ ಎರಡು ತಿಂಗಳುಗಳಿಂದ ದುಪ್ಪಟ್ಟಾಗಿದೆ. ಮುಂಬೈನ ವಶಿ ಏಪಿಎಮ್‌ಸಿ ಮಾರುಕಟ್ಟೆಯಲ್ಲಿ ದರ ಹೆಚ್ಚು ಏರಿಳಿತ ದಾಖಲಿಸುತ್ತಿದೆ.

ವ್ಯಾಪಾರಿಗಳ ಪ್ರಕಾರ ಮಧ್ಯವರ್ತಿಗಳು ದರ ಏರಿಕೆಯ ನಿರೀಕ್ಷೆಯಿಂದ ಹೆಚ್ಚು ದಾಸ್ತಾನು ಮಾಡುತ್ತಿದ್ದಾರೆ. ಕಳೆದ ವರ್ಷ ಚೀನಾದ ಔಷಧೀಯ ಬಳಕೆಗೆ ಅತೀ ಹೆಚ್ಚು ರಫ್ತಾದ ಹಿನ್ನೆಲೆಯಲ್ಲಿ ದರ ಕೆಜಿಗೆ 300 ರೂಪಾಯಿಗಳಿಗೆ ಏರಿಕೆಯಾಗಿತ್ತು.

ಥಾಣೆಯ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಕಿಲೋಗೆ ಕಳೆದ 15 ದಿನಗಳಲ್ಲಿ 100 ರಿಂದ 120 ರೂಪಾಯಿಗಳಿಗೇರಿದೆ. ಈ ದರ 15 ದಿನಗಳ ಮೊದಲು 50-55 ರೂಪಾಯಿಗಳಾಗಿತ್ತು. ಈ ವರ್ಷ ಬೆಳ್ಳುಳ್ಳಿ ದಾಖಲೆಯ ಉತ್ಪಾದನೆಯಾಗಿದ್ದು ಮದ್ಯವರ್ತಿಗಳು ಹಾಗೂ ದಾಸ್ತಾನುಗಾರರ ಕೈವಾಡದಿಂದಾಗಿ ದರ ಏರಿಳಿತ ದಾಖಲಿಸುತ್ತಿದೆ ಎನ್ನಲಾಗಿದೆ.

ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಹಾಗೂ ಅಭಿವೃದ್ದಿ ಫೌಂಡೇಷನ್(NHRDF) ದೇಶದ ಬೆಳ್ಳುಳ್ಳಿ ಉತ್ಪಾದನೆ ಈ ವರ್ಷ 10,13,000 ಟನ್ ಗಳೆಂದು ಅಂದಾಜಿಸಿದ್ದು ಇದು ಕಳೆದ ವರ್ಷ 9,25,000 ಟನ್ ಗಳಾಗಿತ್ತು. ಈ ವರ್ಷ ಬೆಳ್ಳುಳ್ಳಿ ರಫ್ತು ಬೇಡಿಕೆ ಉತ್ತಮವಾಗಿದ್ದರೂ ಚೀನಾದ ವ್ಯಾಪಾರಿಗಳ ಸ್ಪರ್ಧೆಯಿಂದಾಗಿ ಬೇಡಿಕೆ ಮುಂದಿನ ತಿಂಗಳುಗಳಲ್ಲಿ ಕುಸಿಯಲಿದೆ ಕಳೆದ ವರ್ಷ ಚೀನಾದ ಬೆಳ್ಳುಳ್ಳಿಗೆ ದರ ಪ್ರತೀ ಟನ್ ಗೆ 2000 ಡಾಲರ್ ಇದ್ದುದ್ದು ಸೋಮವಾರ ಟನ್ ಗೆ 600 ಡಾಲರ್ ಗಳಿಗೆ ಮಾರಾಟವಾಗುತ್ತಿದೆ.

;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+