ಎಚ್ಚರಿಕೆ; ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಬೇಡ

ಕೊಪ್ಪಳ, ಮೇ 25; ಮಾವಿನ ಹಣ್ಣಿನ ಸೀಜನ್ ಶುರುವಾಗಿದೆ. ರಸ್ತೆ ಬದಿಯಲ್ಲಿ ಸೇರಿದಂತೆ ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವಿನ ಹಣ್ಣು ಕಾಣಿಸುತ್ತದೆ. ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡಲಾಗುತ್ತಿದೆ. ಇದನ್ನು ಕಂಡು ಹಿಡಿಯುವುದು ಸಹ ದೊಡ್ಡ ಸವಾಲು.

ಕೊಪ್ಪಳದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತ ಅಧಿಕಾರಿ ಡಾ. ಟಿ. ಲಿಂಗರಾಜು ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡದಂತೆ ರೈತರು, ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

Food Safety and Standards Authority of India

ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡಬಾರದು. ಕೃತಕವಾಗಿ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ ಅನ್ನು ಬಳಸುವುದು ಎಫ್.ಎಸ್.ಎಸ್.ಎ ಕಾಯ್ದೆ ಅನ್ವಯ ದಂಡನೀಯ ಅಪರಾಧವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕ್ಯಾಲ್ಸಿಯಂ ಕಾರ್ಬೈಡ್‌ನಿಂದಾಗಿ ಉಸಿರಾಟದ ತೊಂದರೆಗಳು, ಚರ್ಮ ಕಾಯಿಲೆಗಳು ಮತ್ತು ಕ್ಯಾನ್ಸರ್ ಆಗುವ ಸಾಧ್ಯತೆ ಇರುತ್ತದೆ. ಎಫ್.ಎಸ್.ಎಸ್.ಎ ಕಾಯ್ದೆ ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು (prohibition and restrictions on sale) ರೆಗ್ಯೂಲೇಷನ್ ಸಂಖ್ಯೆ 2, 3, 5 ಪ್ರಕಾರ ಕಾರ್ಬೈಡ್ ಗ್ಯಾಸ್ ಕೃತಕವಾಗಿ ಹಣ್ಣು ಮಾಡಲು ನಿಷೇಧಿಸಿದೆ ಎಂದು ತಿಳಿಸಿದ್ದಾರೆ.

Food Safety and Standards Authority of India

2 ಲಕ್ಷದ ತನಕ ದಂಡ; ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡಿದರೆ ಆಹಾರ ಸುರಕ್ಷತಾ ಕಾಯ್ದೆ ಕಲಂ 58ರ ಪ್ರಕಾರ ರೂ. 2 ಲಕ್ಷದವರೆಗೂ ದಂಡ ವಿಧಿಸಬಹುದಾಗಿದೆ. ಗ್ರಾಹಕರು ಮಾವಿನ ಹಣ್ಣುಗಳನ್ನು ಖರೀದಿಸುವ ಸಂದರ್ಭದಲ್ಲಿಯೂ ಈ ಕುರಿತು ಗಮನ ಹರಿಸಬೇಕು ಎಂದು ಕರೆ ನೀಡಲಾಗಿದೆ.

ಮಾವು ಕೊಳ್ಳುವ ವೇಳೆ ಕ್ಯಾಲ್ಸಿಯಂ ಕಾರ್ಬೈಡ್ ಪೊಟ್ಟಣಗಳನ್ನು ಇಟ್ಟು ಕೃತಕವಾಗಿ ಹಣ್ಣುಗಳು ಮಾಗಿಸುವುದು ಕಂಡುಬಂದಲ್ಲಿ ಅಂಕಿತ ಅಧಿಕಾರಿಗಳು, ಎಫ್.ಎಸ್.ಎಸ್.ಎ ಕಚೇರಿ, ಹಳೆ ಜಿಲ್ಲಾ ಆಸ್ಪತ್ರೆ ಆವರಣ, ಅಶೋಕ ವೃತ್ತದ ಹತ್ತಿರ, ಕೊಪ್ಪಳ ಇವರ ಗಮನಕ್ಕೆ ತರುವಂತೆ ಮನವಿ ಮಾಡಲಾಗಿದೆ .

ಕೊಪ್ಪಳದಲ್ಲಿ ಮಾವು ಮೇಳ ಆರಂಭ; ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ತೋಟಗಾರಿಕೆ ಇಲಾಖೆಯಿಂದ ಮಾವು ಮೇಳ ಆರಂಭಿಸಲಾಗಿದೆ. ಮೇ 23ರಿಂದ ಮೇ 31ರವರೆಗೆ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ 'ಕೊಪ್ಪಳ ಮಾವು ಮೇಳ-2023' ನಡೆಯಲಿದೆ.

ರೈತರಿಂದಲೇ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೊಪ್ಪಳ ಮಾವು ಮೇಳ-2023 ಆಯೋಜನೆ ಮಾಡಲಾಗಿದೆ. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೊಪ್ಪಳದಲ್ಲಿ ಮಾವು ಹೆಚ್ಚಾಗಿ ಬೆಳೆಯಲಾಗುತ್ತದೆ. ಅದರಲ್ಲೂ ಕೊಪ್ಪಳದ ಕೇಸರ್ ಮಾವು ಬಹಳ ಪ್ರಸಿದ್ಧಿ ಪಡೆದಿದೆ. ಮಾವು ಮೇಳದಲ್ಲಿ ಬ್ಯಾಂಡ್‌ ಬಾಕ್ಸ್‌ನಲ್ಲಿನ ಕೊಪ್ಪಳ ಕೇಸರ್ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬಾಕ್ಸ್‌ನಲ್ಲಿನ ಹಣ್ಣುಗಳನ್ನು ಜನರಿಗೆ ಸುಲಭವಾಗಿ ಸಿಗುವಂತೆ ಅನುಕೂಲ ಮಾಡಿಕೊಡಲಾಗಿದೆ. ಕೊಪ್ಪಳದ ಕೇಸರ್ ಮಾವಿನ ಹಣ್ಣುಗಳಲ್ಲಿ ಲಭ್ಯವಿರುವ ಪೋಷಕಾಂಶಗಳು, ಖನಿಜಗಳು ಮತ್ತು ಅವುಗಳ ಆರೋಗ್ಯದ ಬಗ್ಗೆ ತಿಳಿಸುವ ಬ್ಯಾನರ್‌ಗಳನ್ನು ಸಹ ಪ್ರದರ್ಶಿಸಿ ಜನರಿಗೆ ಮಾಹಿತಿ ನೀಡಲಾಗುತ್ತಿದೆ.

ಈ ಬಾರಿಯ ಮಾವು ಮೇಳದ ಪ್ರಮುಖ ಆಕರ್ಷಣೆ ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣಾದ 'ಮೀಯಾ ಜಾಕಿ' ಎಂಬ ಜಪಾನ್ ತಳಿಯ ಹಣ್ಣು. 40 ಸಾವಿರ ರೂ. ನೀಡಿ ಒಂದು ಹಣ್ಣನ್ನು ತಂದು ಪ್ರದರ್ಶನಕ್ಕೆ ಇಡಲಾಗಿದೆ.

ಇದರ ಜೊತೆಗೆ ಮೇಳದಲ್ಲಿ ಕೇಸರ್, ಬೆನೆಶಾನ್, ದಶಹರಿ, ರಸಮರಿ, ಸ್ವರ್ಣರೇಖಾ, ಇಮಾಮ ಪಸಂಧ ಆಪೋಸು, ಮಲ್ಲಿಕಾ, ತೋತಾಪೂರಿ, ಪುನಾಸ್ ಸೇರಿದಂತೆ 100ಕ್ಕೂ ಅಧಿಕ ವಿವಿಧ ತಳಿಯ ಮಾವಿನ ಹಣ್ಣುಗಳು ಪುನಾಸ್ ಮತ್ತು ಮಂಡಪ್ಪ ಉಪ್ಪಿನಕಾಯಿ ತಳಿಯ ಮಾವುಗಳು ಸಹ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+