• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರ ಸಾಲ ಮನ್ನಾ ಬಿಜೆಪಿ ಸರ್ಕಾರದ ಮೊದಲ ಆದ್ಯತೆ: ಈಶ್ವರಪ್ಪ

|

ಮೈಸೂರು, ಜುಲೈ 24 : ರೈತರ ಸಾಲ ಮನ್ನಾ ಮಾಡುವುದೇ ಬಿಜೆಪಿ ಸರ್ಕಾರದ ಮೊದಲ ಆದ್ಯತೆ. ಬಿ.ಎಸ್​​​ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪದ ನಾಯಕ ಎಂದು ಶಾಸಕ ಕೆ ಎಸ್ ಈಶ್ವರಪ್ಪ ಹೇಳಿದರು.

ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ ಮತ್ತು ಜೆಡಿಎಸ್​​ ಮೈತ್ರಿ ಸರ್ಕಾರ ರಾಜ್ಯದಲ್ಲಿ ದುಶ್ಮನ್​​ ಸರ್ಕಾರದಂತಿತ್ತು. ಇನ್ನೊಂದು ತಿಂಗಳಲ್ಲಿ ಬಿಜೆಪಿ ಸರ್ಕಾರ ಒಂದು ಹಂತಕ್ಕೆ ಬಂದು ತಲುಪಲಿದೆ. ರೈತರ ಸಾಲವನ್ನು ಮನ್ನಾ ಮಾಡುವುದು ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ತಿಳಿಸಿದರು.

KuRSi ಸರ್ಕಾರದ ಲೆಕ್ಕಾಚಾರ ಬಿಚ್ಚಿಟ್ಟ ಕೆ.ಎಸ್.ಈಶ್ವರಪ್ಪ ಟ್ವೀಟ್!
ಕಾಂಗ್ರೆಸ್​​ ಮತ್ತು ಜೆಡಿಎಸ್​​ ಮೈತ್ರಿ ಸರ್ಕಾರ ದೋಸ್ತಿ ಸರ್ಕಾರವಾಗಿರಲಿಲ್ಲ. ಅದು ದುಶ್ಮನ್​​ ಸರ್ಕಾರವಾಗಿತ್ತು. ಸದನದಲ್ಲಿ ಅವರ ದೋಸ್ತಿ ಏನಾಗಿದೆ ಎಂದು ರಾಜ್ಯದ ಜನತೆಗೆ ತಿಳಿದಿದೆ. ಡಿಕೆಶಿ ಮಾಧ್ಯಮ ಹಾಗೂ ಪ್ರತಿಕೆಗಳ ಮುಂದೆ ರಾಕ್ಷಸರಂತೆ​​ ವರ್ತನೆ ಮಾಡಿದ್ದಾರೆ ಎಂದರು.

ರಾಜ್ಯದ ಜನರು ಡಿಕೆ.ಶಿವಕುಮಾರ್ ಅವರನ್ನು ಟ್ರಬಲ್​​ ಶೂಟರ್​​ ಎಂದು ಕರೆಯಬೇಕು, ಆಗ ಮಾತ್ರ ಅವರು ನಾಯಕರಾಗುತ್ತಾರೆ. ಇವರೆಲ್ಲಾ ಸ್ವಯಂ ಘೋಷಿತ ಲೀಡರ್​​ಗಳು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

"ಸಿಎಂ ಪಟ್ಟಕ್ಕೇರುವ ಮೊದಲೇ ರೈತರ ಹಿತ ಕಾಯುವ ಆಶ್ವಾಸನೆ"

ಮುಂಬೈನಲ್ಲಿರುವ ಅತೃಪ್ತರು ನಮ್ಮ ಪಕ್ಷಕ್ಕೆ ಬಂದರೇ ನಾವು ಸ್ವಾಗತಿಸುತ್ತೇವೆ. ಆದರೆ, ನಾವು ಯಾರನ್ನು ಬಲವಂತ ಮಾಡಿ ಕರೆಯುವುದಿಲ್ಲ ಎಂದ ಅವರು ಸ್ಪೀಕರ್​​ ಬದಲಾವಣೆ ಬಗ್ಗೆ ನಾಯಕರ ಜತೆ ಚರ್ಚೆ ಮಾಡುತ್ತೇವೆ ಎಂದರು.

ಅತೃಪ್ತ ಶಾಸಕರನ್ನು ಬಿಜೆಪಿಗೆ ಆಹ್ವಾನಿಸುವ ಕುರಿತು ಮಾಹಿತಿ ನೀಡಿದ ಅವರು, ಅತೃಪ್ತರು ನಮ್ಮ ಪಕ್ಷಕ್ಕೆ ಬಂದ್ರೆ ಸ್ವಾಗತ. ಆದ್ರೆ ಯಾರನ್ನು ಬಲವಂತ ಮಾಡಿ ಕರೆಯೋಲ್ಲ‌. ಬಿಜೆಪಿ ಸರ್ಕಾರ ಸ್ಥಿರ ಸರ್ಕಾರವಾಗಿ ನಿಲ್ಲಲಿದೆ ಎಂದರು.

English summary
MLA Eishwarappa blames on D K Shivakumar. He said that, DK Shivakumar Representing Himself As 'Rakshas' Instead Of a Troubleshooter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X