ಸೇವಂತಿಗೆ ಬೆಳೆಗೆ ರೋಗ ಬಾಧೆ; ಹತೋಟಿಗೆ ರೈತರಿಗೆ ಸಲಹೆಗಳು
ಚಿತ್ರದುರ್ಗ, ಆಗಸ್ಟ್ 25: ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ ಸೇವಂತಿಗೆ ಬೆಳೆಯಲ್ಲಿ ಕೀಟ ಮತ್ತು ರೋಗಬಾಧೆ ಕಂಡು ಬಂದಿದೆ. ಬೆಂಗಳೂರು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ವಿಜ್ಞಾನಿಗಳ ತಂಡದಲ್ಲಿ ಡಾ. ಮುರಳಿ ಮೋಹನ್ ಮತ್ತು ಡಾ. ಜಹೀರ್ ಬಾಷ ಸಿ. ಆರ್. ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇದ್ದರು. ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಗಳನ್ನು ಪರಿಶೀಲಿಸಿದರು. ಸೇವಂತಿಗೆ ಬೆಳೆಯಲ್ಲಿ ಸೊರಗು ರೋಗ ಮತ್ತು ಥಿಪ್ಸ್ ಕೀಟ ಹೆಚ್ಚಾಗಿರುವುದು ಕಂಡುಬಂದಿರುತ್ತದೆ. ಪ್ರಮುಖವಾಗಿ ಸೊರಗು ರೋಗ ಹಾಗೂ ಫಿಪ್ಸ್ ಕೀಟ ನಿಯಂತ್ರಣಕ್ಕೆ ಹತೋಟಿ ಕ್ರಮಗಳನ್ನು ವಿಜ್ಞಾನಿಗಳು ಸಲಹೆ ಮಾಡಿದ್ದಾರೆ.

ಸೊರಗು ರೋಗ ನಿಯಂತ್ರಣ ಕ್ರಮಗಳು
ಕೊಟ್ಟಿಗೆ ಗೊಬ್ಬರದ ಜೊತೆಗೆ ಟ್ರೈಕೋಡರ್ಮ 1 ಕಿ. ಗ್ರಾಂ, ಮೆಟರೈಟಿಯಂ ಅನಿಸೊಪ್ಲಿಯೆ 2 ಕಿ. ಗ್ರಾಂ ಮತ್ತು ಸುಡೋಮೊನಾಸ್ ಪ್ಲುರೋಸೆಂಸ್ 1 ಕಿ. ಗ್ರಾಂ, ಜೈವಿಕ ಪೀಡೆ ನಾಶಕಗಳನ್ನು ಪ್ರತಿ ಒಂದು ಟನ್ ಗೊಬ್ಬರಕ್ಕೆ ಮಿಶ್ರಣ ಮಾಡಿ ಭೂಮಿಗೆ ಹಾಕಬೇಕು. ನಾಟಿಗೆ ಸಿದ್ಧ ಸಸಿಗಳನ್ನು ಸಂಯುಕ್ತ ಶಿಲೀಂದ್ರ ನಾಶಕವಾದ ಕಾರ್ಬನ್ ಡೈಜಿಮ್ ಮತ್ತು ಮ್ಯಾಕೋಂಜೆಬ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣದಿಂದ ಸಸಿಗಳ ಬೇರುಗಳನ್ನು ನೆನಸಿ ನಾಟಿ ಮಾಡಬೇಕು. ತಾಕಿನಲ್ಲಿ ರೋಗ ಕಂಡುಬಂದರೆ ಥೈಯೊಫೀನೇಟ್ ಮೀಥೈಲ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಬುಡಗಳು ನೆನಯುವಂತೆ ಹಾಕಬೇಕು. ಬಹುಮುಖ್ಯವಾಗಿ ಬೆಳೆ ಪರಿವರ್ತನೆ ಅತೀ ಅವಶ್ಯಕವಾಗಿರುತ್ತದೆ.
ಥ್ರಿಪ್ಸ್ ಕೀಟದ ಸಮಗ್ರ ನಿಯಂತ್ರಣ ಕ್ರಮಗಳು
ತೋಟದ ಸುತ್ತ ಜೋಳ ಅಥವಾ ಮೆಕ್ಕೆಜೋಳ ಅಥವಾ ಸಜ್ಜೆಯನ್ನು ತಡೆ ಬೆಳೆಯಾಗಿ 3 ರಿಂದ 4 ಸಾಲು ಬೆಳೆಯುವುದು. ಸಾಧ್ಯವಾದಲ್ಲಿ ಪಾಲಿಥಿನ್ ಮಲ್ಚಿಂಗ್ ಮಾಡಿ ಸಸಿ ನಾಟಿ ಮಾಡುವುದು. ತೋಟದಲ್ಲಿ ಹಾಗೂ ಬದುಗಳ ಮೇಲೆ ಇರುವ ಕಳೆಗಳನ್ನು ತೆಗೆದು ಸ್ವಚ್ಛವಾಗಿಡುವುದು. ಪ್ರೌಡ ಥ್ರೀಪ್ಸ್ ಕೀಟಗಳನ್ನು ಆಕರ್ಷಿಸಿ ಕೊಲ್ಲಲು ಒಂದು ಎಕರೆ ಪ್ರದೇಶದಲ್ಲಿ 25 ರಿಂದ 30 ನೀಲಿ ಅಥವಾ ಹಳದಿ ಬಣ್ಣದ ಅಂಟು ಬಲೆಗಳನ್ನು ಆಳವಡಿಸುವುದು. ಥ್ರೀಪ್ಸ್ ಕೀಟದ ಹಾನಿಯನ್ನು ತೋಟದಲ್ಲಿ ಆಗಿಂದಾಗೆ ಪರಿಶೀಲಿಸುವುದು, ಥ್ರೀಪ್ಸ್ ಹಾವಳಿ ಕಂಡುಬಂದಲ್ಲಿ ಕೆಳಗೆ ತಿಳಿಸಿರುವ ಯಾವುದಾದರೊಂದು ಕೀಟನಾಶಕವನ್ನು ಸಿಂಪಡಿಸುವುದು ಅವಶ್ಯಕತೆಗನುಗುಣವಾಗಿ ಕೀಟನಾಶಕ ಸಿಂಪರಣೆ ಪುನರಾವರ್ತಿಸುವುದು. ಅಜಾಡಿರೆಕ್ಟಿನ್ 1% (10000 ಪಿಪಿಎಂ) 2 ಮಿಲೀ ಅಥವಾ ಬೇವಿನ ಎಣ್ಣೇ 5 ಮಿಲೀ ಮತ್ತು 0.50 ಮಿಲೀ ಸೋಪು ಪ್ರ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.
ಬೆವೆರಿಯಾ ಬೆಸಿಯಾನ 4 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸ್ಪೈನೆಟೊರಂ 11.7 ಎಸ್‍ಸಿ 1. ಮಿಲೀ ಅಥವಾ ಸ್ಪೈನೊಸ್ಯಾಡ್ 45 ಎಸ್‍ಸಿ 0.30 ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬ್ರೊಪ್ಲೊನಿಲೈಡ್ 30 ಎಸ್‍ಸಿ 0.12 ಮಿಲೀ ಅಥವಾ ಪ್ಲೂಕ್ಸಾ ಮೆಟಮೈಡ್ 10 ಇಸಿ 0.8 ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಟೊಲ್‍ಫೆನ್‍ಪೈರಾಡ್ 15 ಇಸಿ 2 ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇಮಿಡಾಕ್ಲೊಪ್ರಿಡ್ 17.8 ಸಿಎಲ್ 0.5 ಮಿಲೀ ಅಥವಾ ಥೈಯಾಮಿಥೋಕ್ಸಾಮ್ 25 ಡಬ್ಲ್ಯೂಸಿ 0.4 ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಡೈಫೆನ್‍ಥೈಯುರಾನ್ 50 ಡಬ್ಲ್ಯೂ ಪಿ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅಸಿಫೇಟ್ 75 ಎಸ್‍ಪಿ 1.50 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಫೆನ್‍ಪ್ರೊಪಾಥ್ರಿನ್ 30 ಇಸಿ 0.30 ಮಿಲೀ ಅಥವಾ ಲ್ಯಾಂಡಂ ಸೈಹ್ಯಾಲೋಥ್ರಿನ್ 5 ಇಸಿ 1 ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಸತತವಾಗಿ ಒಂದೇ ಕೀಟನಾಶಕವನ್ನು ಬಳಸಿದ್ದಲ್ಲಿ ಕೀಟದಲ್ಲಿ ಕೀಟನಾಶಕ ನಿರೋಧಕ ಶಕ್ತಿ ಹೆಚ್ಚುವ ಸಾಧ್ಯತೆ ಇರುತ್ತದೆ. ಆದ್ದರಿಂದ ಒಮ್ಮೆ ಬಳಸಿದ ಕೀಟನಾಶಕವನ್ನು ಅದೇ ಬೆಳೆಯ ಮೇಲೆ ಮತ್ತೊಮ್ಮೆ ಬಳಸಬಾರದು.











Click it and Unblock the Notifications