ಭಾರತದ ಕಾಫಿ ಉತ್ಪಾದನೆ ಕುಸಿತ

ದೇಶದಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪ್ರಮುಖ ಕಾಫಿ ಉತ್ಪಾದನಾ ರಾಜ್ಯಗಳಾಗಿದೆ. ಕಳೆದ ವರ್ಷದ ಉತ್ಪಾದನೆ 2,89,000 ಟನ್ ಗಳೆಂದು ಅಂದಾಜಿಸಲಾಗಿತ್ತು .ಅಮೇರಿಕಾದ ಕೃಷಿ ಇಲಾಖೆಯ ಪ್ರಕಾರ ಕೆಲ ಕಾಫಿ ಬೆಳೆಯುವ ಪ್ರದೇಶಗಳು ಉತ್ತಮ ಹೂ ಮಳೆ ಮತ್ತು ನಂತರದ ಮಳೆಯನ್ನು ಪಡೆದಿದ್ದರೂ ಕೊಡಗು ಮತ್ತು ತಮಿಳುನಾಡಿನ ಕೆಲ ಭಾಗಗಳು ಮಳೆಯನ್ನು ಪಡೆದಿಲ್ಲ ಎಂದು ಹೇಳಿದೆ.
ಕಳೆದ ಫೆಬ್ರವರಿ ಮತ್ತು ಮಾರ್ಚ್ ನ ಪ್ರಖರ ಬಿಸಿಲು ಕಾಫಿ ಉತ್ಪಾದನೆ ಮೇಲೆ ಪರಿಣಾಮ ಬೀರಿದರೂ, 2009 ರ ಡಿಸೆಂಬರ್ ನ ಮಳೆಯಿಂದ ಭೂಮಿಯಲ್ಲಿ ತೇವಾಂಶ ಇದೆ ಎಂದು ಹೇಳಲಾಗಿದೆ. ಕಳೆದ 4-5 ವರ್ಷಗಳಿಂದ ಉತ್ತಮ ಕಾಫಿ ದರದಿಂದ ಬೆಳೆಗಾರರು ಉತ್ಪಾದನೆ ಹೆಚ್ಚಿಸಲು ಹೆಚ್ಚಿನ ಅಸ್ಥೆ ವಹಿಸಿದ್ದಾರೆ ಎಂದು ವರದಿ ತಿಳಿಸುತ್ತದೆ.
ಉದ್ಯಮ ಮೂಲಗಳ ಪ್ರಕಾರ ಹೊಸ ಕಾಫಿ ಗಿಡಗಳು ಪೂರ್ಣ ಪ್ರಮಾಣದಲ್ಲಿ ಬೆಳೆದರೆ ಉತ್ಪಾದನೆ 3ಲಕ್ಷ ಟನ್ ಗಳಿಗೆ ಸ್ಥಿರವಾಗಲಿದೆ. ದೇಶದ 2.20ಲಕ್ಷ ಕಾಫಿ ಹಿಡುವಳಿದಾರರಲ್ಲಿ 2.18 ಲಕ್ಷ ಹಿಡುವಳಿದಾರರು ಸಣ್ಣ ಬೆಳೆಗಾರರಾಗಿದ್ದು, 10 ಹೆಕ್ಟೇರ್ ಗಿಂತ ಕಡಿಮೆ ತೋಟ ಹೊಂದಿದ್ದು ಇವರ ಪಾಲು ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇ.70 ಆಗಿದೆ.











Click it and Unblock the Notifications