ಬೇಕರಿ ಟೆಕ್ನಾಲಜಿ ತರಬೇತಿಗಾಗಿ ಅರ್ಜಿ ಆಹ್ವಾನ
ಬೆಂಗಳೂರು, ಮೇ. 8 : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಬೇಕರಿ ತರಬೇತಿ ಕೇಂದ್ರದಲ್ಲಿ ಹದಿನಾಲ್ಕು ವಾರದ ಬೇಕರಿ ಟೆಕ್ನಾಲಜಿ ತರಬೇತಿಗಾಗಿ ಅರ್ಜಿ ಸ್ವೀಕರಿಸಲಾಗುವುದು. ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ. (ಹತ್ತನೇ ತರಗತಿ) ಪಾಸಾಗಿರಬೇಕು. ತರಬೇತಿ ಶುಲ್ಕ ರು. 5,000 (ಐದು ಸಾವಿರ ರೂ) ಆಗಿರುತ್ತದೆ.
ನಿಗದಿತ ಅರ್ಜಿ ಫಾರಂಗಳನ್ನು ಸ್ವತ: ರೂ 10 ಸಂದಾಯಿಸಿ, ಬೇಕರಿ ತರಬೇತಿ ಕೇಂದ್ರ, ಕೃಷಿ ಕೃಷಿ ವಿಶ್ವ ವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು - 560024, ಇಲ್ಲಿಂದ ಪಡೆದುಕೊಳ್ಳಬಹುದು. ಅಂಚೆ ಮೂಲಕ ಅರ್ಜಿ ಪಡೆದುಕೊಳ್ಳಲು ಇಚ್ಫಿಸಿದಲ್ಲಿ, ಸ್ವವಿಳಾಸವುಳ್ಳ ಲಕೋಟೆಯನ್ನು ರೂ 5 ಸ್ಟಾಂಪ್ ಲಗತ್ತಿಸಿ , 10 ರೂಪಾಯಿಗಳ 'ಮನಿ ಅರ್ಡರ್' ನೊಂದಿಗೆ ಕಳುಹಿಸತಕ್ಕದು.
ಭರ್ತಿಮಾಡಿದ ಅರ್ಜಿಯನ್ನು ಮೇ 30 ರೊಳಗೆ ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ಕೃಷಿ ವಿಶ್ವ ವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು -560024 ಈ ವಿಳಾಸಕ್ಕೆ ತಲುಪಿಸಬೇಕು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications