Arecanut And Copra Price: ಅಲ್ಪ ಏರಿಕೆ ಕಂಡ ಅಡಿಕೆ ಧಾರಣೆ: ಕೊಬ್ಬರಿ ದರ ಹೇಗಿದೆ ನೋಡಿ
ತೀವ್ರ ಕುಸಿತ ಕಂಡ ಬಳಿಕ ಅಡಿಕೆ ಧಾರಣೆ ಸದ್ಯ ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ಅಲ್ಪ ಏರಿಕೆ ಕೂಡ ದಾಖಲಿಸಿದೆ. ಭೂತಾನ್‌ನಿಂದ 17 ಸಾವಿರ ಟನ್ ಅಡಿಕೆ ಆಮದಿನ ನಂತರ ಅಡಿಕೆ ಧಾರಣೆ ಕುಸಿತವಾಗಿದೆ ಎಂದು ಹೇಳಿದ್ದರೂ, ಅದು ಮಾರುಕಟ್ಟೆ ಮೇಲೆ ಹೆಚ್ಚಿನ ಪರಿಣಾಮ ಬೀರಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.
ಗುರುವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 34309 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ 49,899 ರೂಪಾಯಿಗಳಾಗಿತ್ತು. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 46099 ರೂಪಾಯಿ ಆಗಿದ್ದರೆ, ಗರಿಷ್ಠ ಧಾರಣೆ 50509 ರೂಪಾಯಿ ಆಗಿತ್ತು.

ಕುಮಟಾ ಮಾರುಕಟ್ಟೆಯಲ್ಲಿ ಗುರುವಾರ ಹೊಸ ಚಾಲಿ ಅಡಿಕೆ 36399-40899 ರೂಪಾಯಿಗಳಿಗೆ ಮಾರಾಟವಾಗಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಟ 33,199 ರೂಪಾಯಿ ಇದ್ದರೆ ಗರಿಷ್ಠ 49,949 ರೂಪಾಯಿ ಆಗಿತ್ತು. ತುಮಕೂರು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕ್ವಿಂಟಾಲ್‌ಗೆ ಕನಿಷ್ಠ 46,500 ರೂಪಾಯಿ ಗರಿಷ್ಠ 48,200 ರೂಪಾಯಿ ಆಗಿತ್ತು.
ಸೆಪ್ಟೆಂಬರ್ 7 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಚನ್ನಗಿರಿ | ರಾಶಿ | ₹46,099 | ₹50,509 | ₹48,031 |
| 2 | ಬಂಟ್ವಾಳ | ಹೊಸ ವೆರೈಟಿ | ₹28,000 | ₹45,000 | ₹42,500 |
| 3 | ಬಂಟ್ವಾಳ | ಹಳೆವೆರೈಟಿ | ₹46,000 | ₹48,500 | ₹47,500 |
| 4 | ಕಾರ್ಕಳ | ಹೊಸ ವೆರೈಟಿ | ₹30,000 | ₹45,000 | ₹35,000 |
| 5 | ಕಾರ್ಕಳ | ಹಳೆವೆರೈಟಿ | ₹40,000 | ₹48,000 | ₹45,000 |
| 6 | ಕುಮಟಾ | ಚಿಪ್ಪು | ₹28,299 | ₹35,389 | ₹34,729 |
| 7 | ಕುಮಟಾ | ಕೋಕಾ | ₹18,209 | ₹33,889 | ₹32,089 |
| 8 | ಕುಮಟಾ | ಹಳೆಚಾಲಿ | ₹41,099 | ₹41,599 | ₹41,269 |
| 9 | ಕುಂದಾಪುರ | ಹಳೆಚಾಲಿ | ₹40,000 | ₹46,000 | ₹46,000 |
| 10 | ಕುಂದಾಪುರ | ಹೊಸಚಾಲಿ | ₹40,000 | ₹45,000 | ₹43,000 |
| 11 | ಪುತ್ತೂರು | ಹೊಸ ವೆರೈಟಿ | ₹34,000 | ₹45,000 | ₹39,500 |
| 12 | ಸಾಗರ | ಬಿಳೆಗೋಟು | ₹28,989 | ₹33,599 | ₹32,199 |
| 13 | ಸಾಗರ | ಚಾಲಿ | ₹34,199 | ₹39,099 | ₹37,899 |
| 14 | ಸಾಗರ | ಕೆಂಪುಗೋಟು | ₹29,899 | ₹36,709 | ₹34,699 |
| 15 | ಸಾಗರ | ರಾಶಿ | ₹33,199 | ₹49,949 | ₹48,299 |
| 16 | ಶಿವಮೊಗ್ಗ | ರಾಶಿ | ₹34,309 | ₹49,899 | ₹48,769 |
| 17 | ಶಿವಮೊಗ್ಗ | ಸರಕು | ₹56,599 | ₹79,009 | ₹73,007 |
| 18 | ಸಿದ್ದಾಪುರ | ರಾಶಿ | ₹44,349 | ₹48,699 | ₹48,399 |
| 19 | ಶಿರಸಿ | ರಾಶಿ | ₹46,699 | ₹49,699 | ₹48,559 |
| 20 | ತುಮಕೂರು | ರಾಶಿ | ₹46,500 | ₹48,200 | ₹47,200 |
ಕೊಬ್ಬರಿ ಧಾರಣೆ ಹೇಗಿದೆ ನೋಡಿ
ಗುರುವಾರ ಕೊಬ್ಬರಿ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 8000 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 8,726 ರೂಪಾಯಿಗೆ ಮಾರಾಟವಾಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಕ್ವಿಂಟಾಲ್‌ಗೆ ಕನಿಷ್ಠ 9,800 ರೂಪಾಯಿ ಇದ್ದರೆ ಗರಿಷ್ಠ ಧಾರಣೆ 11000 ರೂಪಾಯಿಗೆ ಮಾರಾಟವಾಗಿದೆ. ತುಮಕೂರಿನಲ್ಲಿ ಮಿಲ್ಲಿಂಗ್ ಕೊಬ್ಬರಿ ಧಾರಣೆ ಕನಿಷ್ಠ 3800 ರೂಪಾಯಿ ಇದ್ದರೆ, ಗರಿಷ್ಠ 4200 ರೂಪಾಯಿಗೆ ಮಾರಾಟವಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಬೆಂಗಳೂರು | ಕೊಬ್ಬರಿ | ₹9,800 | ₹11,000 | ₹10,400 |
| 2 | ತುರುವೇಕೆರೆ | ಕೊಬ್ಬರಿ | ₹8,500 | ₹8,700 | ₹8,500 |
| 3 | ಹುಳಿಯಾರು | ಕೊಬ್ಬರಿ | ₹7,900 | ₹8,300 | ₹8,000 |
| 4 | ತಿಪಟೂರು | ಕೊಬ್ಬರಿ | ₹8,000 | ₹8,726 | ₹8,000 |
| 5 | ತುಮಕೂರು | ಮಿಲ್ಲಿಂಗ್ | ₹3,800 | ₹4,200 | ₹4,050 |
| 6 | ಅರಸೀಕೆರೆ | ಕೊಬ್ಬರಿ | ₹8,500 | ₹8,780 | ₹8,734 |
| 7 | ಕೆ.ಆರ್ ಪೇಟೆ | ಇತರೆ | ₹8,000 | ₹8,000 | ₹8,000 |












Click it and Unblock the Notifications