Arecanut Price: ₹50 ಸಾವಿರ ದಾಟದ ಅಡಿಕೆ ಧಾರಣೆ; ಕೊಬ್ಬರಿ ಧಾರಣೆ ಹೇಗಿದೆ?

2024ರ ಆರಂಭದಲ್ಲಿ ಅಡಿಕೆ ಧಾರಣ ಏರಿಕೆ ಕಾಣುವ ಮೂಲಕ ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿತ್ತು. ಮುಂದಿನ ದಿನಗಳಲ್ಲಿ ರಾಶಿ ಕೆಂಪಡಕೆ ಧಾರಣೆ ₹ 50 ಸಾವಿರ ದಾಟಲಿದೆ ಎನ್ನುವಾಗಲೇ ಅಲ್ಪ ಕುಸಿತ ಕಂಡು ಮತ್ತೆ ನಿರಾಸೆ ಮೂಡಿಸಿತ್ತು. ಫೆಬ್ರವರಿ 1ರಂದು ಕೂಡ ಅಡಿಕೆ ಧಾರಣೆ ಏರಿಳಿತ ಆಟ ಮುಂದುವರೆಸಿದೆ.

ಫೆಬ್ರವರಿ 1ರಂದು ಶುಕ್ರವಾರ ರಾಶಿ ಕೆಂಪಡಕೆ ವಿವಿಧ ಮಾರುಕಟ್ಟೆಗಳಲ್ಲಿ ಕನಿಷ್ಠ ₹35,000 ಗಳಿಂದ ₹49,000 ದವರೆಗೆ ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಾಣಬಹುದು ಎಂದು ಹೇಳಲಾಗಿದೆ. ಆದರೂ, ಮಾರುಕಟ್ಟೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ.

 Arecanut Prices near the ₹49,000, Copra Surges in Karnataka Markets on Feb 1st

ಶುಕ್ರವಾರ ಬಂಟ್ವಾಳ, ಸಾಗರ, ಚನ್ನಗಿರಿ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಗರಿಷ್ಠ ₹49,200 ಆಗಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ ₹30,899 ಇದ್ದರೆ, ಗರಿಷ್ಠ ₹48,799 ಕ್ಕೆ ಮಾರಾಟವಾಗಿದೆ.

ಬಂಟ್ವಾಳ ಮಾರುಕಟ್ಟೆಯಲ್ಲಿ ಕೋಕಾ ಧಾರಣೆ ಕನಿಷ್ಠ ₹18,000 ಆಗಿದ್ದರೆ ಗರಿಷ್ಠ ಮಾರಾಟ ದರ ₹28,500 ಆಗಿತ್ತು. ಕುಮಟಾ ಮಾರುಕಟ್ಟೆಯಲ್ಲಿ ಚಿಪ್ಪು ಕನಿಷ್ಠ ₹21,209 ಇದ್ದರೆ ಗರಿಷ್ಠ ₹33,069 ಆಗಿದೆ.

ಫೆಬ್ರವರಿ 1ರಂದು ಅಡಿಕೆ ಬೆಲೆ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಬಂಟ್ವಾಳ ಕೋಕಾ ₹18,000 ₹28,500 ₹23,500
2 ಬಂಟ್ವಾಳ ಹೊಸ ವೆರೈಟಿ ₹28,500 ₹35,000 ₹33,000
3 ಚನ್ನಗಿರಿ ರಾಶಿ ₹47,212 ₹49,200 ₹48,054
4 ಗೋಣಿಕೊಪ್ಪಲ್ ಸಿಪ್ಪೆ ಅಡಿಕೆ ₹5,000 ₹5,000 ₹5,000
5 ಕಾರ್ಕಳ ಹೊಸ ವೆರೈಟಿ ₹25,000 ₹35,000 ₹30,000
6 ಕುಮಟಾ ಕೋಕಾ ₹14,129 ₹27,370 ₹25,619
7 ಕುಮಟಾ ಚಿಪ್ಪು ₹21,209 ₹33,069 ₹32,429
8 ಸಾಗರ ಸಿಪ್ಪೆಗೋಟು ₹10,000 ₹19,599 ₹17,699
9 ಸಾಗರ ಬಿಳೆ ಗೊಟು ₹20,199 ₹29,199 ₹28,199
10 ಸಾಗರ ಕೆಂಪು ಗೋಟು ₹25,399 ₹37,099 ₹36,099
11 ಸಾಗರ ರಾಶಿ ₹30,899 ₹48,799 ₹47,699
12 ಸುಳ್ಯ ಹೊಸ ವೆರೈಟಿ ₹37,000 ₹39,900 ₹38,000

ಕೊಬ್ಬರಿ ಧಾರಣೆ ಮಾಹಿತಿ

ಶುಕ್ರವಾರ ರಾಜ್ಯದ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹8,800 ಇದ್ದರೆ ಗರಿಷ್ಠ ₹9,800 ಆಗಿತ್ತು. ಕಳೆದ ವಾರ ಕೊಬ್ಬರಿ ಗರಿಷ್ಠ ಧಾರಣೆ 10 ಸಾವಿರ ದಾಟಿದ್ದು, ಈ ವಾರ ಅಲ್ಪ ಕುಸಿತ ಕಂಡಿದ್ದರೂ, 10 ಸಾವಿರ ರೂಪಾಯಿ ಆಸುಪಾಸಿನಲ್ಲೇ ಇರುವುದು ಬೆಳೆಗಾರರಲ್ಲಿ ಸಮಾಧಾನ ತರಿಸಿದೆ.

ಅರಸಿಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹7,500 ಇದ್ದರೆ ಗರಿಷ್ಠ ಧಾರಣೆ ₹10,800 ಆಗಿತ್ತು. ಕೆ.ಆರ್. ಪೇಟೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ₹10,000 ಆಗಿತ್ತು.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹7,500 ₹10,800 ₹9,510
2 ತಿಪಟೂರು ಕೊಬ್ಬರಿ ₹8,800 ₹9,800 ₹9,500
3 ಕೆ.ಆರ್.ಪೇಟೆ ಕೊಬ್ಬರಿ ₹10,000 ₹10,000 ₹10,000
4 ಪುತ್ತೂರು ಬೇರೆ ₹5,500 ₹9,200 ₹7,350
5 ಹುಳಿಯಾರು ಬಾಲ್ ₹9,800 ₹10,010 ₹10,000

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+