Arecanut And Copra Price: ಮತ್ತೆ ಏರಿಕೆ ಕಂಡ ಅಡಿಕೆ ಧಾರಣೆ: ಪ್ರಮುಖ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ
ತೀವ್ರ ಕುಸಿತ ಕಂಡ ಬಳಿಕ ಅಡಿಕೆ ಧಾರಣೆ ಸದ್ಯ ಅಲ್ಪ ಏರಿಕೆ ಕಂಡಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ಭೂತಾನ್‌ನಿಂದ ಹಸಿ ಅಡಿಕೆ ಆಮದು ಸುದ್ದಿಯಾದ ಬಳಿಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕುಸಿತ ಕಂಡಿದ್ದು ರೈತರಲ್ಲಿ ಆತಂಕ ಮೂಡಿಸಿತ್ತು. ಆದರೆ ಈ ವಾರದ ಆರಂಭದಲ್ಲೇ ಅಲ್ಪ ಏರಿಕೆ ಕಂಡಿರುವುದು ಅಡಿಕೆ ಬೆಳೆಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ.
ಸೋಮವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 42499 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ 50,599 ರೂಪಾಯಿಗಳಾಗಿತ್ತು. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 44,599 ರೂಪಾಯಿ ಆಗಿದ್ದರೆ, ಗರಿಷ್ಠ ಧಾರಣೆ 49119 ರೂಪಾಯಿ ಆಗಿತ್ತು.

ಬೆಂಗಳೂರು ಮಾರುಕಟ್ಟೆಯಲ್ಲಿ ಸೋಮವಾರ ಅಡಿಕೆ ಧಾರಣೆ ಕನಿಷ್ಠ 55 ಸಾವಿರ ರೂಪಾಯಿ ಇದ್ದರೆ ಗರಿಷ್ಠ 60 ಸಾವಿರ ರೂಪಾಯಿ ಆಗಿತ್ತು. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಟ 33,269 ರೂಪಾಯಿ ಇದ್ದರೆ ಗರಿಷ್ಠ 49,999 ರೂಪಾಯಿ ಆಗಿತ್ತು. ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕ್ವಿಂಟಾಲ್‌ಗೆ ಕನಿಷ್ಠ48,280 ರೂಪಾಯಿ ಗರಿಷ್ಠ 52,899 ರೂಪಾಯಿ ಆಗಿತ್ತು.
ಸೆಪ್ಟೆಂಬರ್ 11 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಚನ್ನಗಿರಿ | ರಾಶಿ | ₹44,559 | ₹50,812 | ₹48,264 |
| 2 | ಬೆಂಗಳೂರು | ಇತರೆ | ₹55,000 | ₹60,000 | ₹57,500 |
| 3 | ಬಂಟ್ವಾಳ | ಹಳೆವೆರೈಟಿ | ₹46,000 | ₹48,500 | ₹47,500 |
| 4 | ಕಾರ್ಕಳ | ಹೊಸ ವೆರೈಟಿ | ₹30,000 | ₹45,000 | ₹35,000 |
| 5 | ಕಾರ್ಕಳ | ಹಳೆವೆರೈಟಿ | ₹40,000 | ₹48,000 | ₹45,000 |
| 6 | ಕುಮಟಾ | ಕೋಕಾ | ₹20,199 | ₹33,619 | ₹32,519 |
| 7 | ಕುಮಟಾ | ಫ್ಯಾಕ್ಟರಿ | ₹11,569 | ₹24,829 | ₹22,869 |
| 8 | ಕುಮಟಾ | ಹಳೆಚಾಲಿ | ₹39,899 | ₹41,339 | ₹40,529 |
| 9 | ಕುಂದಾಪುರ | ಹಳೆಚಾಲಿ | ₹40,000 | ₹46,000 | ₹46,000 |
| 10 | ಕುಂದಾಪುರ | ಹೊಸಚಾಲಿ | ₹40,000 | ₹45,000 | ₹43,000 |
| 11 | ಪುತ್ತೂರು | ಹೊಸ ವೆರೈಟಿ | ₹34,000 | ₹45,000 | ₹39,500 |
| 12 | ಸಾಗರ | ಬಿಳೆಗೋಟು | ₹17,211 | ₹39,989 | ₹32,799 |
| 13 | ಸಾಗರ | ಚಾಲಿ | ₹34,390 | ₹39,099 | ₹37,899 |
| 14 | ಸಾಗರ | ಕೆಂಪುಗೋಟು | ₹29,129 | ₹37,155 | ₹35,389 |
| 15 | ಸಾಗರ | ರಾಶಿ | ₹33,269 | ₹49,999 | ₹48,699 |
| 16 | ಶಿವಮೊಗ್ಗ | ರಾಶಿ | ₹42,499 | ₹50,599 | ₹49,599 |
| 17 | ಶಿವಮೊಗ್ಗ | ಸರಕು | ₹54,769 | ₹81,596 | ₹64,399 |
| 18 | ಸಿದ್ದಾಪುರ | ರಾಶಿ | ₹45,069 | ₹49,099 | ₹48,899 |
| 19 | ಶಿರಸಿ | ರಾಶಿ | ₹46,099 | ₹49,999 | ₹48,827 |
| 20 | ಯಲ್ಲಾಪುರ | ರಾಶಿ | ₹48,280 | ₹52,899 | ₹50,689 |
| 21 | ತೀರ್ಥಹಳ್ಳಿ | ರಾಶಿ | ₹35,368 | ₹50,369 | ₹50,029 |
ಸ್ಥಿರತೆ ಕಾಯ್ದುಕೊಂಡಿರುವ ಕೊಬ್ಬರಿ ಬೆಲೆ
ಸೋಮವಾರ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಸೋಮಾವರ ಕೊಬ್ಬರಿ ಧಾರಣೆ ಕನಿಷ್ಠ 7500 ರೂಪಾಯಿ ಇದ್ದರೆ ಗರಿಷ್ಠ 8300 ರೂಪಾಯಿಗೆ ಮಾರಾಟವಾಗಿದೆ.
ತುರುವೇಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ 8200 ರೂಪಾಯಿ ಆಗಿತ್ತು. ಹುಳಿಯಾರಿನಲ್ಲಿ ಬಾಲ್ ಕೊಬ್ಬರಿ ಧಾರಣೆ ಕನಿಷ್ಠ 8000 ರೂಪಾಯಿ ಇದ್ದರೆ, ಗರಿಷ್ಠ 8700 ರೂಪಾಯಿಗೆ ಮಾರಾಟವಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹7,500 | ₹8,410 | ₹8,023 |
| 2 | ಹುಳಿಯಾರು | ಬಾಲ್ | ₹8,000 | ₹8,700 | ₹8,200 |
| 3 | ತಿಪಟೂರು | ಬಾಲ್ | ₹7,500 | ₹8,300 | ₹8,000 |
| 4 | ತುರುವೇಕರೆ | ಕೊಬ್ಬರಿ | ₹8,200 | ₹8,200 | ₹8,200 |
| 5 | ಕೆಆರ್ ಪೇಟೆ | ಇತರೆ | ₹7,992 | ₹7,992 | ₹7,992 |
| 6 | ತುಮಕೂರು | ಬಾಲ್ | ₹7,900 | ₹8,450 | ₹8,120 |












Click it and Unblock the Notifications