Arecanut: 57,000 ದಾಟಿದ ಬಳಿಕ ಕುಸಿದ ಅಡಿಕೆ ದರ: ಕೊಬ್ಬರಿ ಮತ್ತು ಅಡಿಕೆ ಧಾರಣೆ
57 ಸಾವಿರ ದಾಟುವ ಮೂಲಕ ರೈತರಲ್ಲಿ ಸಂತಸ ಮೂಡಿಸಿದ್ದ ಅಡಿಕೆ ಧಾರಣೆ ದಿಢೀರ್ ಕುಸಿತ ಕಂಡಿದೆ. ಕ್ವಿಂಟಾಲ್ ರಾಶಿ ಅಡಿಕೆ ದರ 57000 ದಾಟಿದ್ದು, ಈಗ 2-3 ಸಾವಿರದವರೆಗೆ ಕುಸಿತ ಕಂಡಿದ್ದು, 54000 - 55000 ಆಸುಪಾಸಿನಲ್ಲಿದೆ.
ಅಡಿಕೆ ದರ ದಿಢೀರ್ ಕುಸಿತ ಕಂಡಿರುವುದು ಮಾರುಕಟ್ಟೆಯಲ್ಲಿ ಆತಂಕ ಉಂಟು ಮಾಡಿದ್ದಾರೆ. ಮತ್ತಷ್ಟು ದರ ಹೆಚ್ಚುತ್ತದೆ ಎಂದು ಕಾದವರಿಗೂ ಆತಂಕ ಶುರುವಾಗಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರ ಒಮ್ಮೆಲೆ 2 ರಿಂದ 3 ಸಾವಿರದವರೆಗೆ ಕುಸಿತ ಕಂಡಿದೆ.

ಪ್ರಮುಖ ಅಡಿಕೆ ಮಾರುಕಟ್ಟೆಯಾಗಿರುವ ಶಿವಮೊಗ್ಗದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 40,999 ಇದ್ದರೆ, ಗರಿಷ್ಠ 55,099 ರೂಗಳವರೆಗೆ ಮಾರಾಟವಾಗಿದೆ. ತುಮಕೂರಿನಲ್ಲಿ ರಾಶಿ ಅಡಿಕೆ ದರ ಕನಿಷ್ಠ 54,400 ಇದ್ದರೆ, ಗರಿಷ್ಠ55,900 ರೂಪಾಯಿಗೆ ಮಾರಾಟವಾಗಿದೆ.
ಜುಲೈ 19ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಚನ್ನಗಿರಿ | ರಾಶಿ | ₹54032 | ₹57,399 | ₹54,911 |
| 2 | ಗುಬ್ಬಿ | ರಾಶಿ | ₹51,100 | ₹52,000 | ₹50,800 |
| 3 | ಬಂಟ್ವಾಳ | ಕೋಕಾ | ₹12,500 | ₹25,000 | ₹22,500 |
| 4 | ಬಂಟ್ವಾಳ | ಹಳೆ ವೆರೈಟಿ | ₹46,000 | ₹49,500 | ₹47,500 |
| 5 | ಹೊನ್ನಳ್ಳಿ | ರಾಶಿ | ₹52,466 | ₹52,466 | ₹52,466 |
| 6 | ಪುತ್ತೂರು | ಹೊಸ ವೆರೈಟಿ | ₹34,000 | ₹42,500 | ₹38,250 |
| 7 | ಶಿವಮೊಗ್ಗ | ರಾಶಿ | ₹40,099 | ₹55,099 | ₹53,099 |
| 8 | ಶಿವಮೊಗ್ಗ | ಸರಕು | ₹54,100 | ₹70,810 | ₹75,300 |
| 9 | ಸಾಗರ | ರಾಶಿ | ₹46,699 | ₹52,529 | ₹51,699 |
| 10 | ಸಾಗರ | ಕೆಂಪುಗೋಟು | ₹37,599 | ₹39,009 | ₹38,399 |
| 11 | ಹುಳಿಯಾರು | ಕೆಂಪು | ₹55499 | ₹55,499 | ₹55,499 |
| 12 | ಸಿದ್ದಾಪುರ | ಚಾಲಿ | ₹37,609 | ₹40,299 | ₹39,899 |
| 13 | ಬೆಂಗಳೂರು | ಇತರೆ | ₹55,000 | ₹60,000 | ₹57,500 |
| 14 | ಸಿರಾ | ಬೆಟ್ಟೆ | ₹40,299 | ₹48,869 | ₹45,295 |
| 15 | ತುಮಕೂರು | ರಾಶಿ | ₹54,400 | ₹55,900 | ₹55,150 |
| 16 | ದಾವಣಗೆರೆ | ರಾಶಿ | ₹48,069 | ₹54,629 | ₹52,986 |

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ
ಕೊಬ್ಬರಿ ದರ ವಿವಿಧ ಮಾರುಕಟ್ಟೆಗಳಲ್ಲಿ ಕಳೆದ ವಾರ 9000 ದಾಟುವ ಮೂಲಕ ರೈತರಲ್ಲಿ ನೆಮ್ಮದಿ ತಂದಿತ್ತು, ಈ ವಾರ ಕೂಡ ಕೊಬ್ಬರಿ ದರ ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯದ ಪ್ರಮುಖ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಪ್ರತಿ ಕ್ವಿಂಟಲ್‌ಗೆ ಗರಿಷ್ಠ 9100 ರೂಪಾಯಿಗೆ ಮಾರಾಟವಾಗಿದೆ.
ಪ್ರಮುಖ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ತಿಪಟೂರು | ಕೊಬ್ಬರಿ | ₹8,100 | ₹9,100 | ₹8,500 |
| 2 | ಅರಸೀಕೆರೆ | ಬಾಲ್ | ₹7,500 | ₹8,808 | ₹7,889 |
| 3 | ಹುಳಿಯಾರು | ಬಾಲ್ | ₹8,000 | ₹9,000 | ₹8,500 |
| 4 | ತುರುವೇಕೆರೆ | ಕೊಬ್ಬರಿ | ₹8,800 | ₹8,800 | ₹8,800 |
| 5 | ತುಮಕೂರು | ಕೊಬ್ಬರಿ | ₹7,500 | ₹8,650 | ₹8,050 |
| 6 | ತುಮಕೂರು | ಮಿಲ್ಲಿಂಗ್ | ₹3,400 | ₹4,650 | ₹4,050 |
| 7 | ತುಮಕೂರು | ಇತರೆ | ₹7,950 | ₹8,250 | ₹8,120 |












Click it and Unblock the Notifications