Arecanut and Copra Price: ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕೊಬ್ಬರಿ ಧಾರಣೆ
ಕರ್ನಾಟಕ ರಾಜ್ಯದ ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ ಏರಿಳಿತ ಮುಂದುವರೆದಿದೆ. ನವೆಂಬರ್ 29ರಂದು ಬುಧವಾರ ರಾಶಿ ಕೆಂಪಡಕೆ ವಿವಿಧ ಮಾರುಕಟ್ಟೆಗಳಲ್ಲಿ ಕನಿಷ್ಠ 35,000 ರೂಪಾಯಿಗಳಿಂದ 48,000 ರೂಪಾಯಿವರೆಗೆ ಮಾರಾಟವಾಗಿದೆ.
ಬುಧವಾರ ಶಿವಮೊಗ್ಗ, ಸಿದ್ಧಾಪುರ, ಚನ್ನಗಿರಿ, ಸಾಗರ, ಶಿರಸಿ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ. ಶಿರಸಿ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ ₹44,869 ಇದ್ದರೆ ಗರಿಷ್ಠ ₹48,009 ಮಾರಾಟವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ 47,169 ರೂಪಾಯಿ ಇದ್ದರೆ, ಗರಿಷ್ಠ 77,210 ರೂಪಾಯಿಗೆ ಮಾರಾಟವಾಗಿದೆ.

ಸಾಗರ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಅಡಿಕೆ ಧಾರಣೆ ಕನಿಷ್ಠ 20,150 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ 21,089 ರೂಪಾಯಿಗಳಾಗಿತ್ತು. ಹೊನ್ನಳ್ಳಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ 47655 ರೂಪಾಯಿಗೆ ಮಾರಾಟವಾಗಿದೆ.
ನವೆಂಬರ್ 29 ರಂದು ಅಡಿಕೆ ಬೆಲೆ(ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಹೊನ್ನಳ್ಳಿ | ರಾಶಿ | ₹47,655 | ₹47,655 | ₹47,655 |
| 2 | ಬಂಟ್ವಾಳ | ಹೊಸ ವೆರೈಟಿ | ₹27,000 | ₹36,500 | ₹33,500 |
| 3 | ಬಂಟ್ವಾಳ | ಹಳೆ ವೆರೈಟಿ | ₹43,500 | ₹47,000 | ₹45,000 |
| 4 | ಹೊನ್ನಾವರ | ಹಳೆ ಚಾಲಿ | ₹36,000 | ₹39,000 | ₹38,300 |
| 5 | ಶಿಕಾರಿಪುರ | ಕೆಂಪು | ₹41,375 | ₹46,438 | ₹43,733 |
| 6 | ಶಿವಮೊಗ್ಗ | ಬೆಟ್ಟೆ | ₹47,000 | ₹53,332 | ₹52,899 |
| 7 | ಶಿವಮೊಗ್ಗ | ಗೊರಬಲು | ₹20,000 | ₹38,259 | ₹36,359 |
| 8 | ಶಿವಮೊಗ್ಗ | ಹೊಸ ವೆರೈಟಿ | ₹45,559 | ₹46,898 | ₹46,359 |
| 9 | ಶಿವಮೊಗ್ಗ | ರಾಶಿ | ₹42,869 | ₹47,109 | ₹46,349 |
| 10 | ಶಿವಮೊಗ್ಗ | ಸರಕು | ₹47,169 | ₹77,210 | ₹58,009 |
| 11 | ಸಿದ್ದಾಪುರ | ರಾಶಿ | ₹44,059 | ₹,46539 | ₹46,309 |
| 12 | ಸಿದ್ದಾಪುರ | ಕೆಂಪುಗೋಟು | ₹28,019 | ₹28,019 | ₹28,019 |
| 13 | ಸಿರಾ | ಇತರೆ | ₹9,000 | ₹46,000 | ₹44,545 |
| 14 | ಶಿರಸಿ | ಬಿಳೆಗೋಟು | ₹28,899 | ₹36,176 | ₹33,741 |
| 15 | ಶಿರಸಿ | ರಾಶಿ | ₹44,869 | ₹48,009 | ₹46,026 |
| 16 | ಕಾರ್ಕಳ | ಹಳೆವೆರೈಟಿ | ₹30,000 | ₹47,000 | ₹40,000 |
| 17 | ಸಾಗರ | ಸಿಪ್ಪೆಗೋಟು | ₹20,510 | ₹21,089 | ₹20,510 |
| 18 | ಸಾಗರ | ಕೆಂಪುಗೋಟು | ₹34,299 | ₹34,299 | ₹34,299 |
| 19 | ಸಾಗರ | ರಾಶಿ | ₹37,699 | ₹46,809 | ₹45,409 |
| 20 | ಯಲ್ಲಾಪುರ | ಆಪಿ | ₹66,379 | ₹66,379 | ₹66,379 |
ಕೊಬ್ಬರಿ ಧಾರಣೆ ಮಾಹಿತಿ
ಬುಧವಾರ ರಾಜ್ಯದ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ ಸ್ಥಿರತೆ ಕಾಯ್ದುಕೊಂಡಿದೆ. ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 7,000 ರೂಪಾಯಿ ಇದ್ದರೆ ಗರಿಷ್ಠ 8,500 ರೂಪಾಯಿಗೆ ಮಾರಾಟವಾಗಿದೆ.
ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ 8,215 ರೂಪಾಯಿಗೆ ಮಾರಾಟವಾಗಿದ್ದು, ಪುತ್ತೂರಿನಲ್ಲಿ ಇತರೆ ಕೊಬ್ಬರಿ ಬೆಲೆ ಕನಿಷ್ಠ 5,500 ರೂಪಾಯಿ ಮತ್ತು ಗರಿಷ್ಠ 9100 ರೂಪಾಯಿಗೆ ಮಾರಾಟವಾಗಿದೆ. ಕೆ.ಆರ್. ಪೇಟೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 8,209 ರೂಪಾಯಿ ಆಗಿದ್ದರೆ ಗರಿಷ್ಠ 8,250 ರೂಪಾಯಿ ಆಗಿತ್ತು.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ತಿಪಟೂರು | ಕೊಬ್ಬರಿ | ₹7,000 | ₹8,500 | ₹7,900 |
| 2 | ಅರಸಿಕೆರೆ | ಕೊಬ್ಬರಿ | ₹8,215 | ₹8,225 | ₹8,220 |
| 3 | ಕೆ.ಆರ್.ಪೇಟೆ | ಬೇರೆ | ₹8,209 | ₹8,250 | ₹8,250 |
| 4 | ಪುತ್ತೂರು | ಬೇರೆ | ₹5,500 | ₹9,100 | ₹7,300 |
| 5 | ತುರುವೇಕೆರೆ | ಕೊಬ್ಬರಿ | ₹8,100 | ₹8,100 | ₹8,100 |
| 6 | ಹುಳಿಯಾರು | ಬಾಲ್ | ₹6,900 | ₹7,500 | ₹7,000 |












Click it and Unblock the Notifications