Arecanut Price: ಅಲ್ಪ ಕುಸಿತ ಕಂಡ ಅಡಿಕೆ ಧಾರಣೆ: ಕೊಬ್ಬರಿ ಬೆಲೆ ಹೇಗಿದೆ?
ಕಳೆದ ಒಂದು ವಾರದಿಂದ ಸ್ಥಿರತೆ ಕಾಯ್ದುಕೊಂಡಿದ್ದ ಅಡಿಕೆ ಧಾರಣೆ, ಅಲ್ಪ ಕುಸಿತ ಕಂಡಿದೆ. ₹50,000 ಸನಿಹ ಬಂದಿದ್ದ ರಾಶಿ ಕೆಂಪಡಕೆ ಧಾರಣೆ ಈಗ ₹48,000 ಸನಿಹಕ್ಕೆ ಬಂದಿದೆ. 50 ಸಾವಿರ ದಾಟುವ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ಮತ್ತೆ ನಿರಾಸೆಯಾಗಿದೆ.
ಕರ್ನಾಟಕದ ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಏರಿಳಿತ ಮುಂದುವರೆದಿದೆ. ಒಂದಷ್ಟು ದಿನ ಅಲ್ಪ ಏರಿಕೆ ಕಾಣುವ ಅಡಿಕೆ ಧಾರಣೆ, ಮತ್ತೆ ಕುಸಿತ ಕಾಣುತ್ತದೆ. ಆದರೆ ಇದು ಹೆಚ್ಚಿನ ಅಂತರದಲ್ಲಿ ಇಲ್ಲದೇ ಇರುವುದು ಸಮಾಧಾನ ತರಿಸಿದೆ.

ಫೆಬ್ರವರಿ 9ರಂದು ಶುಕ್ರವಾರ ರಾಶಿ ಕೆಂಪಡಕೆ ವಿವಿಧ ಮಾರುಕಟ್ಟೆಗಳಲ್ಲಿ ಕನಿಷ್ಠ ₹35,000 ಗಳಿಂದ ₹48,000 ದವರೆಗೆ ಮಾರಾಟವಾಗಿದೆ. ಹಲವು ಮಾರುಕಟ್ಟೆಗಳಲ್ಲಿ ಕಳೆದ ಒಂದು ವಾರದಿಂದ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿತ್ತು. ಆದರೆ ಈಗ ಅಲ್ಪ ಕುಸಿತ ಕಂಡಿದೆ.
ಶುಕ್ರವಾರ ಕೊಪ್ಪಳ, ಭದ್ರಾವತಿ, ಹೊಸನಗರ, ಕೊಪ್ಪ, ಶಿವಮೊಗ್ಗ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಇಳಿಕೆ ಕಂಡಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ ₹32,010 ಆಗಿದ್ದರೆ ಗರಿಷ್ಠ ₹48,098 ಆಗಿತ್ತು. ಭದ್ರಾವತಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ ₹33,199 ಇದ್ದರೆ, ಗರಿಷ್ಠ ₹48,319 ಆಗಿತ್ತು.
ಕೊಪ್ಪ ಮಾರುಕಟ್ಟೆಯಲ್ಲಿ ಅಪಿ ಅಡಿಕೆ ಧಾರಣೆ ಕನಿಷ್ಠ ₹41,366 ಆಗಿದ್ದರೆ ಗರಿಷ್ಠ ಮಾರಾಟ ದರ ₹55,110 ಆಗಿತ್ತು.ಸಿದ್ದಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ₹43,809 ಇದ್ದರೆ ಗರಿಷ್ಠ ಬೆಲೆ ₹47,309 ಆಗಿತ್ತು.
ಫೆಬ್ರವರಿ 9ರಂದು ಅಡಿಕೆ ಬೆಲೆ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಭದ್ರಾವತಿ | ರಾಶಿ | ₹33,199 | ₹48,319 | ₹43,646 |
| 2 | ಬಂಟ್ವಾಳ | ಕೋಕಾ | ₹18,000 | ₹28,500 | ₹23,500 |
| 3 | ಹೊಸನಗರ | ಕೆಂಪು ಗೋಟು | ₹28,599 | ₹35,311 | ₹33,411 |
| 4 | ಹೊಸನಗರ | ರಾಶಿ | ₹42,169 | ₹48,411 | ₹48,211 |
| 5 | ಕಾರ್ಕಳ | ಹೊಸ ವೆರೈಟಿ | ₹25,000 | ₹35,000 | ₹30,000 |
| 6 | ಕೊಪ್ಪ | ಅಪಿ | ₹41,366 | ₹55,110 | ₹51,058 |
| 7 | ಕೊಪ್ಪ | ಸರಕು | ₹57,899 | ₹72,599 | ₹64,898 |
| 8 | ಕೊಪ್ಪ | ಇಡಿ | ₹20,009 | ₹48,799 | ₹46,915 |
| 9 | ಕುಮಟಾ | ಚಿಪ್ಪು | ₹25,699 | ₹32,509 | ₹30,549 |
| 10 | ಕುಮಟಾ | ಫ್ಯಾಕ್ಟರಿ | ₹11,509 | ₹19,429 | ₹18,699 |
| 11 | ಪುತ್ತೂರು | ಹೊಸ ವೆರೈಟಿ | ₹26,500 | ₹35,000 | ₹30,750 |
| 12 | ಶಿವಮೊಗ್ಗ | ಸರಕು | ₹45,155 | ₹80,986 | ₹57,029 |
| 13 | ಶಿವಮೊಗ್ಗ | ರಾಶಿ | ₹32,010 | ₹48,098 | ₹45,699 |
| 14 | ಸಿದ್ದಾಪುರ | ತಟ್ಟಿ ಬೆಟ್ಟೆ | ₹39,099 | ₹46,799 | ₹42,899 |
| 15 | ಸಿದ್ದಾಪುರ | ಚಾಲಿ | ₹35,349 | ₹37,299 | ₹37,099 |
| 16 | ಸಿದ್ದಾಪುರ | ರಾಶಿ | ₹43,809 | ₹47,309 | ₹46,939 |
| 17 | ಶಿರಸಿ | ರಾಶಿ | ₹43,599 | ₹47,609 | ₹45,733 |
| 18 | ಯಲ್ಲಾಪುರ | ರಾಶಿ | ₹46,099 | ₹53,689 | ₹49,899 |
| 19 | ಸುಳ್ಯ | ಹೊಸ ವೆರೈಟಿ | ₹28,000 | ₹33,000 | ₹30,000 |
ಕೊಬ್ಬರಿ ಧಾರಣೆ ಮಾಹಿತಿ
ಶುಕ್ರವಾರ ರಾಜ್ಯದ ಮಾರುಕಟ್ಟೆಗಳಲ್ಲಿ ಕೊಬ್ಬರಿ ಧಾರಣೆ ಅಲ್ಪ ಏರಿಕೆ ಕಂಡಿದೆ. ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹8,500 ಇದ್ದರೆ ಗರಿಷ್ಠ ₹10,500 ಆಗಿತ್ತು. ಜಿಲ್ಲೆಯಲ್ಲಿ ನಾಫೆಡ್ ಕೇಂದ್ರಗಳಲ್ಲಿ ಕೊಬ್ಬರಿ ಖರೀದಿ ತಡವಾಗಿದ್ದು ತೆಂಗು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹8,000 ಇದ್ದರೆ ಗರಿಷ್ಠ ಧಾರಣೆ ₹10,000 ಆಗಿತ್ತು. ತುಮಕೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹8,600 ಆಗಿದ್ದರೆ ಗರಿಷ್ಠ ₹10,500 ಆಗಿತ್ತು.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ತಿಪಟೂರು | ಕೊಬ್ಬರಿ | ₹8,500 | ₹10,500 | ₹9,500 |
| 2 | ಅರಸೀಕೆರೆ | ಕೊಬ್ಬರಿ | ₹8,000 | ₹10,000 | ₹8,528 |
| 3 | ತುಮಕೂರು | ಬೇರೆ | ₹8,600 | ₹10,500 | ₹9,400 |
| 4 | ಸಿರಾ | ಮಧ್ಯಮ | ₹9,000 | ₹9,000 | ₹9,000 |
| 5 | ಕೆ.ಆರ್.ಪೇಟೆ | ಬೇರೆ | ₹8,600 | ₹8,600 | ₹8,600 |












Click it and Unblock the Notifications