Arecanut Price: ಬೆಲೆ ಕುಸಿತದ ಬಳಿಕ ಸ್ಥಿರತೆ ಕಾಯ್ದುಕೊಂಡ ಅಡಿಕೆ ಧಾರಣೆ; ಕೊಬ್ಬರಿ ಬೆಲೆ ಹೇಗಿದೆ?

ರಾಜ್ಯ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏಳು ಬೀಳು ಕಾಣುತ್ತಿದೆ. ರಾಶಿ ಕೆಂಪಡಿಕೆ ಧಾರಣೆ ಈ ವಾರ ಸ್ಥಿರತೆ ಕಾಯ್ದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅಲ್ಪ ಏರಿಕೆ ಕಾಣುವ ಭರವಸೆ ಮೂಡಿಸಿದೆ. ಕಳೆದ ಎರಡು ವಾರದಿಂದ ಅಡಿಕೆ ಧಾರಣೆ ಗರಿಷ್ಠ ₹46,000-₹48,000 ಆಸುಪಾಸಿನಲ್ಲಿದೆ.

ಫೆಬ್ರವರಿ 27ರಂದು ಮಂಗಳವಾರ ರಾಶಿ ಕೆಂಪಡಕೆ ವಿವಿಧ ಮಾರುಕಟ್ಟೆಗಳಲ್ಲಿ ಕನಿಷ್ಠ ₹26,000 ಗಳಿಂದ ₹48,500 ದವರೆಗೆ ಮಾರಾಟವಾಗಿದೆ. ಕಳೆದ ಕೆಲವು ದಿನಗಳಿಂದ ಅಲ್ಪ ಕುಸಿತ ಕಂಡಿದ್ದ ಅಡಿಕೆ ಬೆಲೆ ಸದ್ಯ ಸ್ಥಿರವಾಗಿದೆ.

Areca Nut Prices Experience Slight Decrease, Latest Copra Rates in Karnataka Markets as of Feb 27th

ಮಂಗಳವಾರ ಚನ್ನಗಿರಿ, ಚಿತ್ರದುರ್ಗ, ಭದ್ರಾವತಿ, ಶಿವಮೊಗ್ಗ, ಸಿದ್ಧಾಪುರ, ಯಲ್ಲಾಪುರ, ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ ₹26,009 ಆಗಿದ್ದರೆ ಗರಿಷ್ಠ ₹48,399 ಆಗಿತ್ತು. ಸಿದ್ಧಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ ₹42,109 ಇದ್ದರೆ, ಗರಿಷ್ಠ ₹42,109 ಆಗಿತ್ತು.

ಬೆಳ್ತಂಗಡಿ ಮಾರುಕಟ್ಟೆಯಲ್ಲಿ ಕೋಕಾ ಅಡಿಕೆ ಧಾರಣೆ ಕನಿಷ್ಠ ₹20,800 ಆಗಿದ್ದರೆ ಗರಿಷ್ಠ ಮಾರಾಟ ದರ ₹21,500 ಆಗಿತ್ತು. ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ ಕನಿಷ್ಠ ₹48,600 ಇದ್ದರೆ ಗರಿಷ್ಠ ಬೆಲೆ ₹82,999 ಆಗಿತ್ತು.

ಫೆಬ್ರವರಿ 27ರಂದು ಅಡಿಕೆ ಬೆಲೆ (ಪ್ರತಿ ಕ್ವಿಂಟಲ್‌ಗೆ)

ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
ಬೆಳ್ತಂಗಡಿ ಕೋಕಾ ₹20,800 ₹21,500 ₹21,000
ಬೆಳ್ತಂಗಡಿ ಹೊಸ ವೆರೈಟಿ ₹30,200 ₹32,000 ₹31,500
ಬಂಟ್ವಾಳ ಕೋಕಾ ₹18,000 ₹28,500 ₹23,500
ಬಂಟ್ವಾಳ ಹೊಸ ವೆರೈಟಿ ₹28,500 ₹34,500 ₹32,500
ಭದ್ರಾವತಿ ರಾಶಿ ₹40,399 ₹47,699 ₹45,609
ಚನ್ನಗಿರಿ ರಾಶಿ ₹45,812 ₹48,400 ₹47,265
ಚಿತ್ರದುರ್ಗ ಅಪಿ ₹47,219 ₹47,629 ₹47,400
ಚಿತ್ರದುರ್ಗ ಕೆಂಪು ಗೋಟು ₹27,559 ₹27,910 ₹27,700
ಚಿತ್ರದುರ್ಗ ರಾಶಿ ₹46,739 ₹47,169 ₹46,999
ಕಾರ್ಕಳ ಹೊಸ ವೆರೈಟಿ ₹25,000 ₹34,500 ₹30,000
ಕೊಪ್ಪ ಬೆಟ್ಟೆ ₹38,366 ₹52,879 ₹48,699
ಕೊಪ್ಪ ಇಡಿ ₹34,179 ₹48,099 ₹45,899
ಮಡಿಕೇರಿ ಕಚ್ಚಾ ₹36,776 ₹36,776 ₹36,776
ಶಿವಮೊಗ್ಗ ಬೆಟ್ಟೆ ₹44,100 ₹54,259 ₹54,099
ಶಿವಮೊಗ್ಗ ಸರಕು ₹48,600 ₹82,999 ₹58,320
ಶಿವಮೊಗ್ಗ ರಾಶಿ ₹26,009 ₹48,559 ₹47,259
ಸಿದ್ದಾಪುರ ರಾಶಿ ₹42,109 ₹46,099 ₹45,899
ಶಿರಸಿ ರಾಶಿ ₹43,208 ₹46,709 ₹45,254
ಯಲ್ಲಾಪುರ ರಾಶಿ ₹44,060 ₹53,499 ₹47,699

ಕೊಬ್ಬರಿ ಧಾರಣೆ ಮಾಹಿತಿ

ಫೆಬ್ರವರಿ 27ರಂದು ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹8,000 ಗರಿಷ್ಠ ₹8,810 ಆಗಿತ್ತು.

ಬಂಟ್ವಾಳ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹7,000 ಇದ್ದರೆ ಗರಿಷ್ಠ ಧಾರಣೆ ₹8,000 ಆಗಿತ್ತು. ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹8,900 ಇದ್ದರೆ ಗರಿಷ್ಠ ₹10,500 ಕ್ಕೆ ಮಾರಾಟವಾಗಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹8,000 ₹8,810 ₹8,172
2 ಬಂಟ್ವಾಳ ಬೇರೆ ₹7,000 ₹8,000 ₹7,500
3 ಅರಸೀಕೆರೆ ಕೊಬ್ಬರಿ ₹8,900 ₹10,500 ₹10,273
4 ತಿಪಟೂರು ಕೊಬ್ಬರಿ ₹8,000 ₹9,207 ₹9,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+