ಕುಸಿತದ ಬಳಿಕ ಸ್ಥಿರತೆ ಕಾಯ್ದುಕೊಂಡ ಅಡಿಕೆ ಬೆಲೆ: ಕೊಬ್ಬರಿ ದರ ಹೇಗಿದೆ?

ಕರ್ನಾಟಕದಲ್ಲಿ ಅಡಿಕೆ ಧಾರಣೆ ಏರಿಳಿತ ಮುಂದುವರೆದಿದೆ. ಕಳೆದ ವಾರ ಇಳಿಕೆ ಕಂಡಿದ್ದ ಅಡಿಕೆ ಧಾರಣೆ ಸದ್ಯ ಸ್ಥಿರತೆ ಕಾಯ್ದುಕೊಂಡಿದೆ. ರಾಶಿ ಕೆಂಪಡಕೆ ಧಾರಣೆ ಕ್ವಿಂಟಾಲ್‌ಗೆ ₹48,000 ಆಸುಪಾಸಿನಲ್ಲಿದೆ. ರಾಶಿ ಅಡಿಕೆ 50 ಸಾವಿರ ದಾಟುವ ನಿರೀಕ್ಷೆಯಲ್ಲಿದ್ದ ಬೆಳೆಗಾರರು ನಿರಾಶರಾಗಿದ್ದಾರೆ.

ಫೆಬ್ರವರಿ 14ರಂದುಬುಧವಾರ ರಾಶಿ ಕೆಂಪಡಕೆ ವಿವಿಧ ಮಾರುಕಟ್ಟೆಗಳಲ್ಲಿ ಕನಿಷ್ಠ ₹28,000 ಗಳಿಂದ ₹48,000 ದವರೆಗೆ ಮಾರಾಟವಾಗಿದೆ. ಒಂದು ವಾರದಿಂದ ಅಲ್ಪ ಕುಸಿತ ಕಂಡಿದ್ದ ಅಡಿಕೆ ಬೆಲೆ ಸದ್ಯ ಸ್ಥಿರವಾಗಿದೆ.

Areca Nut Prices Dip Slightly, Latest Copra Rates in Karnataka Markets On February 14th

ಬುಧವಾರ ಕುಮಟಾ, ಶಿವಮೊಗ್ಗ, ಸಿದ್ಧಾಪುರ, ಶಿರಸಿ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ ₹28,200 ಆಗಿದ್ದರೆ ಗರಿಷ್ಠ ₹48,399 ಆಗಿತ್ತು. ಸಿದ್ಧಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ ₹42,869 ಇದ್ದರೆ, ಗರಿಷ್ಠ ₹46,889 ಆಗಿತ್ತು.

ಬಂಟ್ವಾಳ ಮಾರುಕಟ್ಟೆಯಲ್ಲಿ ಕೋಕಾ ಅಡಿಕೆ ಧಾರಣೆ ಕನಿಷ್ಠ ₹18,000 ಆಗಿದ್ದರೆ ಗರಿಷ್ಠ ಮಾರಾಟ ದರ ₹28,500 ಆಗಿತ್ತು. ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ ಕನಿಷ್ಠ ₹52,200 ಇದ್ದರೆ ಗರಿಷ್ಠ ಬೆಲೆ ₹79,110 ಆಗಿತ್ತು.

ಫೆಬ್ರವರಿ 14ರಂದು ಅಡಿಕೆ ಬೆಲೆ (ಪ್ರತಿ ಕ್ವಿಂಟಲ್‌ಗೆ)

ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
ಬಂಟ್ವಾಳ ಕೋಕಾ ₹18,000 ₹28,500 ₹23,500
ಬಂಟ್ವಾಳ ಹೊಸ ವೆರೈಟಿ ₹28,500 ₹34,500 ₹32,500
ಕಾರ್ಕಳ ಹೊಸ ವೆರೈಟಿ ₹25,000 ₹34,500 ₹30,000
ಕುಮಟಾ ಕೋಕಾ ₹16,019 ₹27,019 ₹25,749
ಕುಮಟಾ ಚಿಪ್ಪು ₹26,069 ₹31,009 ₹29,369
ಪುತ್ತೂರು ಹೊಸ ವೆರೈಟಿ ₹26,500 ₹34,500 ₹30,500
ಶಿವಮೊಗ್ಗ ಬೆಟ್ಟೆ ₹42,609 ₹54,569 ₹52,099
ಶಿವಮೊಗ್ಗ ಸರಕು ₹52,200 ₹79,110 ₹60,109
ಶಿವಮೊಗ್ಗ ರಾಶಿ ₹28,200 ₹48,399 ₹47,009
ಸಿದ್ದಾಪುರ ಕೆಂಪು ಗೋಟು ₹31,199 ₹35,499 ₹34,299
ಸಿದ್ದಾಪುರ ರಾಶಿ ₹42,869 ₹46,889 ₹46,689
ಶಿರಸಿ ಬಿಳೆ ಗೊಟು ₹25,099 ₹33,399 ₹27,556
ಶಿರಸಿ ರಾಶಿ ₹42,208 ₹47,661 ₹44,909
ಶಿರಸಿ ಚಾಲಿ ₹35,108 ₹38,612 ₹37,802

ಕೊಬ್ಬರಿ ಧಾರಣೆ ಮಾಹಿತಿ

ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆ ಮುಖಾಂತರ ಕೊಬ್ಬರಿ ಖರೀದಿ ನಡುವೆಯೂ ಕೊಬ್ಬರಿ ಮಾರುಕಟ್ಟೆಯಲ್ಲಿ ದರ ಏರಿಕೆ ಕಾಣುತ್ತಿಲ್ಲ. ಫೆಬ್ರವರಿ 14ರಂದು ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹7,500 ಗರಿಷ್ಠ ₹9,500 ಆಗಿತ್ತು.

ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹8,500 ಇದ್ದರೆ ಗರಿಷ್ಠ ಧಾರಣೆ ₹9,000 ಆಗಿತ್ತು. ಸಿರಾ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಸರಾಸರಿ ₹8,000ಗೆ ಮಾರಾಟವಾಗಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹7,500 ₹9,500 ₹9,019
2 ತಿಪಟೂರು ಕೊಬ್ಬರಿ ₹8,500 ₹9,000 ₹8,900
3 ಕೆ.ಆರ್.ಪೇಟೆ ಬೇರೆ ₹8,600 ₹8,600 ₹8,600
4 ಸಿರಾ ಮಧ್ಯಮ ₹8,000 ₹8,000 ₹8,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+