ಬಳ್ಳಾರಿಯಲ್ಲಿ ರೈತರ ಗಮನ ಸೆಳೆದ ಕೃಷಿ ಡ್ರೋನ್ ತಂತ್ರಜ್ಞಾನ ಪ್ರದರ್ಶನ

ಬಳ್ಳಾರಿ, ನವೆಂಬರ್ 20: ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಬಳಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿಯೇ ಬಳ್ಳಾರಿಯಲ್ಲಿ ನಡೆದ ಕೃಷಿ ಡ್ರೋನ್ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನೂರಾರು ರೈತರು ಪ್ರದರ್ಶನದಲ್ಲಿ ಪಾಲ್ಗೊಂಡರು.

ಸಿರುಗುಪ್ಪ ರಸ್ತೆಯ ಲಕ್ಷ್ಮೀನಗರ ಕ್ಯಾಂಪ್ ಹತ್ತಿರದ ಐಸಿಎಆರ್ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಸ್ಥೆಯ ಸಂಶೋಧನಾ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ-ಡ್ರೋನ್ ಯೋಜನೆಯಡಿ ಐಸಿಅಆರ್- ಕೃಷಿ ತಂತ್ರಜ್ಞಾನ ಅಪ್ಲಿಕೇಶನ್ ಸಂಶೋಧನಾ ಸಂಸ್ಥೆ ಲೂಧಿಯಾ ಇವರ ವತಿಯಿಂದ ಈ ಪ್ರದರ್ಶನ ಆಯೋಜನೆ ಮಾಡಲಾಗಿತ್ತು.

Agriculture Drone Exhibition At Ballari Karnataka

ಸಂಶೋಧನಾ ಫಾರ್ಮ್‍ನ ಆವರಣದಲ್ಲಿ ನವೆಂಬರ್ 16ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಕೃಷಿ ಡ್ರೋನ್ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮಕ್ಕೆ ಮಣ್ಣು ಮತ್ತು ಜಲ ಸಂರಕ್ಷಣೆಯ ಪ್ರಧಾನ ವಿಜ್ಞಾನಿ ಡಾ. ಬಿ. ಎಸ್. ನಾಯ್ಕ್ ಚಾಲನೆ ನೀಡಿದರು.

ಐಸಿಎಆರ್ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಸ್ಥೆಯ ಸಂಶೋಧನಾ ಕೇಂದ್ರದ ಪ್ರಭಾರಿ ಮುಖ್ಯಸ್ಥ ಹಾಗೂ ಮಣ್ಣು ಮತ್ತು ಜಲ ಸಂರಕ್ಷಣೆಯ ಪ್ರಧಾನ ವಿಜ್ಞಾನಿ ಡಾ.ಬಿ.ಎಸ್.ನಾಯ್ಕ್ ಅವರು ಡ್ರೋನ್ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಮಹತ್ವದ ಕುರಿತು ರೈತರಿಗೆ ತಿಳಿಸಿದರು.

ರೈತರಿಗೆ ಮಾಹಿತಿ ನೀಡಲಾಯಿತು; ಹಿರಿಯ ವಿಜ್ಞಾನಿ (ಅರಣ್ಯ) ಡಾ. ಎಂ. ಎನ್. ರಮೇಶ ರೈತರಿಗೆ ಕೃಷಿ ಡ್ರೋನ್ ಪ್ರದರ್ಶನ ಕಾರ್ಯಕ್ರಮದ ವಿವರಗಳನ್ನು ನೀಡಿದರು. ರಾಷ್ಟ್ರೀಯ ಬೀಜ ನಿಗಮದ ಸಹಾಯಕ ನಿರ್ದೇಶಕ ವಿನೋದ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ರೈತರಿಗೆ ಡ್ರೋನ್‌ ತಂತ್ರಜ್ಞಾನದ ಮಹತ್ವ ವಿವರಿಸಿದರು.

ಡ್ರೋನ್ ಒಂದು ಎಕರೆ ಪ್ರದೇಶದಲ್ಲಿ ರಾಸಾಯನಿಕ ಸಿಂಪಡಿಸಲು 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು 12 ಲೀಟರ್ ದ್ರಾವಣವನ್ನು ಮಾತ್ರ ಬಳಸುತ್ತದೆ. ಇದು ಬೆಳೆಗಳಿಗೆ ರಾಸಾಯನಿಕಗಳನ್ನು ಸಿಂಪಡಿಸಲು ಅಗತ್ಯವಾದ ಕಾರ್ಮಿಕರನ್ನು ಹೆಚ್ಚು ಉಳಿಸುತ್ತದೆ ಎಂದು ತಂತ್ರಜ್ಞರು ವಿವರಣೆ ನೀಡಿದರು.

ಕೇಂದ್ರೀಕೃತ ರಾಸಾಯನಿಕಗಳನ್ನು ನಿಖರವಾಗಿ ಸಿಂಪಡಿಸಲು ಇದು ಬಹಳ ಸಹಕಾರಿಯಾಗಿದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು. ಅದೇ ರೀತಿಯಾಗಿ ಹೆಚ್ಚಿನ ಪ್ರದೇಶದಲ್ಲಿ ಡ್ರೋನ್ ಮೂಲಕ ಸಿಂಪಡಣೆಯ ಪ್ರಾತ್ಯಕ್ಷಿಕೆ ತೋರಿಸಬೇಕು ಎಂದು ರೈತರು ಪ್ರದರ್ಶನದಲ್ಲಿ ಒತ್ತಾಯಿಸಿದರು.

ಪ್ರದರ್ಶನದಲ್ಲಿ ಮೆಣಸಿನಕಾಯಿ ಬೆಳೆಗೆ ಡ್ರೋನ್ ಮೂಲಕ ರಾಸಾಯನಿಕಗಳನ್ನು ಸಿಂಪಡಿಸಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು. ಅನೇಕ ರೈತರು ಡ್ರೋನ್‍ನ ಬೆಲೆಯ ಬಗ್ಗೆ ಮಾಹಿತಿ ಕೇಳಿ ತಿಳಿದುಕೊಂಡರು. ಕೆಲ ರೈತರು ಮುಂಬರುವ ಬೆಳೆ ಋತುವಿನಲ್ಲಿ ಡ್ರೋನ್ ಅನ್ನು ಖರೀದಿಸಲು ಆಸಕ್ತಿ ಇದೆ ಎಂದರು.

ಲಕ್ಷ್ಮೀನಗರ ಕ್ಯಾಂಪ್, ಕೋಳೂರು ಮತ್ತು ಸೋಮಸಮುದ್ರ ಗ್ರಾಮಗಳ ಸುಮಾರು 60ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 20 ಎಕರೆ ಮೆಣಸಿನಕಾಯಿ ಬೆಳೆಗೆ ಡ್ರೋನ್ ಮೂಲಕ ಸಸ್ಯ ಸಂರಕ್ಷಣಾ ಸಿಂಪಡಿಸಿ ಪ್ರಾತ್ಯಕ್ಷಿಕೆ ತೋರಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+