ಬಜಗೋಳಿಯಲ್ಲಿ 31ನೇ ಕೃಷಿಮೇಳದ ಸಂಭ್ರಮ

ಅಡುಗೆ ಚಪ್ಪರ, 40 ಶೌಚಾಲಯ ನಿರ್ಮಾಣ, ಜಾನುವಾರು ಮತ್ತು ಶ್ವಾನ ಪ್ರದರ್ಶನಕ್ಕೆ ತಯಾರಿ, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ತಯಾರಿ, ಗುಟ್ಟಿನ ಮನೆ, ನೀರು ಪೂರೈಕೆಗೆ ಪೈಪ್ ಲೈನ್ ವ್ಯವಸ್ಥೆ, ಆಲೆಮನೆ ತಯಾರಿ, ಚಪ್ಪರಗಳು ಸೇರಿದಂತೆ ಇನ್ನಿತರ ಪೂರ್ವ ಸಿದ್ದತೆಗಳು ಭರದಿಂದ ಸಾಗುತ್ತಿವೆ.
ಕೃಷಿ ಮೇಳದ ಸ್ವಾಗತ ಸಮಿತಿಯ ವತಿಯಿಂದ ಬಜಗೋಳಿಯ ಆಸುಪಾಸಿನಲ್ಲಿ ಏಳು ಸ್ವಾಗತ ದ್ವಾರಗಳು ನಿರ್ಮಾಣಗೊಳ್ಳುತ್ತಿವೆ. ಗ್ರಾಮಾಭಿವೃದ್ಧಿಯ ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ಕಾರ್ಕಳ, ಬೆಳ್ತಂಗಡಿ, ಮೂಡಬಿದಿರೆಗಳಲ್ಲಿ ಕೂಡ ಸ್ವಾಗತ ದ್ವಾರಗಳು ನಿರ್ಮಾಣಗೊಂಡಿವೆ.
31ನೇ ಕೃಷಿ ಮೇಳದ ಮೆರವಣಿಗೆಯಲ್ಲಿ 31 ತರಹದ ಟ್ಯಾಬ್ಲೋಗಳನ್ನೂ ಮೆರವಣಿಗೆಯಲ್ಲಿ ಅಳವಡಿಸುವ ಚಿಂತನೆ ನಡೆಯುತ್ತಿದೆ. ಈ ಕೃಷಿಮೇಳದಿಂದಾಗಿ ಬಜಗೋಳಿಯ ಸುತ್ತ ಮುತ್ತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.












Click it and Unblock the Notifications