ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ವೈನ್ ಫೆಸ್ಟ್
ಶಿವಮೊಗ್ಗ, ಅಕ್ಟೋಬರ್ 11 : ತೋಟಗಾರಿಕಾ ಇಲಾಖೆ ವತಿಯಿಂದ ಶಿವಮೊಗ್ಗದಲ್ಲಿ 'ಶಿವಮೊಗ್ಗ ವೈನ್ ಫೆಸ್ಟ್' ಆಯೋಜಿಸಲಾಗಿದೆ. ಅಕ್ಟೋಬರ್ 13ರಂದು ಫೆಸ್ಟ್‌ಗೆ ಚಾಲನೆ ದೊರೆಯಲಿದ್ದು, ಮೂರು ದಿನಗಳ ಕಾಲ ಬಗೆ-ಬಗೆಯ ವೈನ್ ರುಚಿಯನ್ನು ಸವಿಯಬಹುದಾಗಿದೆ.
ತೋಟಗಾರಿಕಾ ಇಲಾಖೆ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ಶಿವಮೊಗ್ಗ ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ಮೂರು ದಿನಗಳ SHIVAMOGGA WINEFEST ಹಮ್ಮಿಕೊಳ್ಳಲಾಗಿದೆ. ಫೆಸ್ಟ್‌ನಲ್ಲಿ ಪಾಲ್ಗೊಳ್ಳಲು ಪ್ರವೇಶ ದರ 20 ರೂ.ಗಳು.

ಪ್ರತಿದಿನ ಬೆಳಗ್ಗೆ 11 ರಿಂದ ರಾತ್ರಿ 9 ಗಂಟೆಯ ತನಕ ಫೆಸ್ಟ್ ನಡೆಯಲಿದೆ. ವಿನೋಬನಗರದಲ್ಲಿರುವ ಜಿಲ್ಲಾ ಹಾಪ್‌ಕಾಮ್ಸ್ ಆವರಣದಲ್ಲಿ ಫೆಸ್ಟ್ ಆಯೋಜಿಸಲಾಗಿದೆ. ವೈನ್ ಮಾರಾಟದ ಮೇಲೆ ಶೇ 10ರಷ್ಟು ರಿಯಾಯಿತಿ ಇರುತ್ತದೆ.
ಮೇಳದಲ್ಲಿ ವಿವಿಧ ಬಗೆಯ ವೈನ್ ಗಳ ರುಚಿಯನ್ನು ಸವಿಯಬಹುದಾಗಿದೆ. ಪ್ರತಿ ದಿನ ಸಂಜೆ ವಿವಿಧ ತಂಡಗಳ ಸಂಗೀತ ಕಾರ್ಯಕ್ರಮನ್ನು ಆಯೋಜನೆ ಮಾಡಲಾಗಿದೆ. 21 ವರ್ಷ ಮೇಲ್ಪಟ್ಟವರು ಮಾತ್ರ ಮೂರು ದಿನಗಳ ಕಾಲ ನಡೆಯುವ ಫೆಸ್ಟ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ.












Click it and Unblock the Notifications