ಡಿಎಪಿ ರಸಗೊಬ್ಬರಕ್ಕೆ ಬೆಲೆ ನಿಗದಿ; ಹೆಚ್ಚಿನ ದರ ಪಡೆದರೆ ಕ್ರಮ
ಬಳ್ಳಾರಿ, ಮೇ 24; ಕೇಂದ್ರ ಸರ್ಕಾರವು ಡಿಎಪಿ ರಸಗೊಬ್ಬರದ ಮೇಲಿನ ಸಹಾಯಧನ ಹೆಚ್ಚಿಸಿ ಆದೇಶಿಸಿದೆ. 50 ಕೆಜಿ ಚೀಲಕ್ಕೆ ಬೆಲೆಯನ್ನು ಸಹ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ರೈತರು ಅಧಿಕೃತ ಮಾರಾಟಗಾರರಿಂದ ರಸಗೊಬ್ಬರ ಖರೀದಿ ಮಾಡಬಹುದಾಗಿದೆ.
ಏಪ್ರಿಲ್ 1ರಿಂದ ಅನ್ವಯವಾಗುವಂತೆ ಡಿಎಪಿ (18-46-0) ರಸಗೊಬ್ಬರದ ಬೆಲೆ ಪ್ರತಿ 50 ಕೆಜಿ ಚೀಲಕ್ಕೆ 1,200 ರೂ.ನಿಗದಿಪಡಿಸಲಾಗಿದೆ. ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದು ಕಂಡುಬಂದಲ್ಲಿ ವಿತರಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಡಿಎಪಿ ರಸಗೊಬ್ಬರದ ಮೇಲಿನ ಸಹಾಯಧನ ಹೆಚ್ಚಿಸಿ ಆದೇಶಿ ಹೊರಡಿಸಿದೆ. ರೈತರು ನಿಗದಿತ ದರದಲ್ಲಿ ರಸಗೊಬ್ಬರಗಳನ್ನು ಮಾರಾಟಗಾರರಿಂದ ಖರೀದಿಸಬೇಕು ಹಾಗೂ ಮಾರಾಟಗಾರರು ನಿಗದಿಪಡಿಸಿದ ದರದನ್ವಯ ರಸಗೊಬ್ಬರವನ್ನು ವಿತರಿಸಬೇಕು ಎಂದು ಸೂಚಿಸಲಾಗಿದೆ.

ಒಂದು ವೇಳೆ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ರೈತರು ತಾಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ/ ರೈತ ಸಂಪರ್ಕಕೇಂದ್ರದ ಪರೀವೀಕ್ಷಕರಿಗೆ ದೂರವಾಣಿ ಮುಖಾಂತರ ಅಥವಾ ಲಿಖಿತದೂರು ನೀಡಿದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ದೂರುದಾರನ ಹೆಸರು ಗೌಪ್ಯವಾಗಿ ಇಡಲಾಗುತ್ತದೆ.
ರೈತರು ರಸಗೊಬ್ಬರಗಳನ್ನು ಖರೀದಿಸುವಾಗ ತಪ್ಪದೇ ತಮ್ಮ ಗುರುತಿನಚೀಟಿ/ ಆಧಾರಕಾರ್ಡ್‍ನ ಮಾಹಿತಿಯನ್ನು ರಸಗೊಬ್ಬರ ಖರೀದಿಸುವ ಸಂದರ್ಭದಲ್ಲಿ ಪರಿಕರ ಮಾರಾಟ ಮಾಲೀಕರಿಗೆ ಒದಗಿಸಬೇಕು. ಪಿ.ಓ.ಎಸ್. ಯಂತ್ರದ ಮೂಲಕವೇ ಖರೀದಿಸುವುದು ಮತ್ತು ರಸೀದಿ ಪಡೆಯಬೇಕು ಎಂದು ಮನವಿ ಮಾಡಲಾಗಿದೆ.











Click it and Unblock the Notifications