ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳಾನಧ್ಯಕ್ಷರ ಮೆರವಣಿಗೆ: ಸಂಚಾರ, ಪಾರ್ಕಿಂಗ್ ಬದಲು

By Srinath
|
Google Oneindia Kannada News

traffic, parking problem
ಬೆಂಗಳೂರು, ಫೆ.3- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆಯಿಂದ (ಫೆ.4) ಪ್ರಾರಂಭ. ಈ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ. ಸಮ್ಮೇಳಾನಧ್ಯಕ್ಷ ಪ್ರೊ. ಜಿ. ವೆಂಕಟಸುಬ್ಬಯ್ಯ ಮತ್ತು ಇತರೆ ಪ್ರಮುಖ ಗಣ್ಯರು ಮೆರವಣಿಗೆಯಲ್ಲಿರುತ್ತಾರೆ.

ಶುಕ್ರವಾರ ಬೆಳಗ್ಗೆ 9.30ಕ್ಕೆ ಆರಂಭವಾಗುವ ಮೆರವಣಿಗೆ ಬಿಬಿಎಂಪಿ ಕೇಂದ್ರ ಕಚೇರಿಯಿಂದ ಹೊರಟು ಜೆ.ಸಿ. ರಸ್ತೆ, ಮಿನರ್ವ ಸರ್ಕಲ್, ಮಕ್ಕಳ ಕೂಟ, ಪಂಪ ಮಹಾಕವಿ ರಸ್ತೆ ಮೂಲಕ ನ್ಯಾಷನಲ್ ಕಾಲೇಜು ಮೈದಾನ ತಲುಪಲಿದೆ.

ಸಂಚಾರ ನಿರ್ಬಂಧ: ಮೆರವಣಿಗೆ ಸಾಗುವ ಸಂದರ್ಭದಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಹಾಗಾಗಿ ಸಾರ್ವಜನಿಕರು ಪರ್ಯಾಯ ರಸ್ತೆಗಳಲ್ಲಿ ಸಂಚರಿಸಬೇಕೆಂದು ಕೋರಲಾಗಿದೆ. ಮೆರವಣಿಗೆಗೂ ಮುನ್ನ ಮತ್ತು ನಂತರ ಸಂಚಾರ ಎಂದಿನಂತೆ ಮುಂದುವರಿಯಲಿದೆ.

ಇಲ್ಲಿ ಸಂಚರಿಸಿ:
ಮೆರವಣಿಗೆ ಆರಂಭಗೊಂಡ ನಂತರ ಕಾರ್ಪೊರೇಶನ್ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಕೆ.ಜಿ. ರಸ್ತೆ ಕಡೆಗೆ:
1. ಮಿನರ್ವ ಸರ್ಕಲ್, ಕುಂಬಾರಗುಂಡಿ ರಸ್ತೆ, ಟೌನ್ ಹಾಲ್.
2. ಕೊಂಡಜ್ಜಿ ಬಸಪ್ಪ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಸಿಟಿ ಮಾರ್ಕೆಟ್ ರಸ್ತೆ.
3. ಲಾಲ್‌ಬಾಗ್ ವೆಸ್ಟ್ ಗೇಟ್, ಎಂಎನ್‌ಕೆ ರಾವ್ ರಸ್ತೆ, ಗಾಂಧಿ ಬಜಾರ್, ರಾಮಕೃಷ್ಣಾಶ್ರಮ ವೃತ್ತ, ಬಜಾರ್ ಸ್ಟ್ರೀಟ್, ಸಿರ್ಸಿ ಸರ್ಕಲ್.
4. ಉತ್ತರಹಳ್ಳಿಯಿಂದ ಬರುವ ವಾಹನಗಳು ಕದಿರೇನಹಳ್ಳಿ ಕ್ರಾಸ್, ಕಾಮಾಕ್ಯ ವೃತ್ತ, ಮಾಗಡಿ ರಸ್ತೆ ಅಥವಾ ಗೂಡ್ಸ್‌ಶೆಡ್ ರಸ್ತೆ ಮುಖಾಂತರ ಮೆಜಿಸ್ಟಿಕ್ ತಲುಪಬಹುದು.
5. ಜೆಬಿಎಸ್ ಬಳಿ ತಿರುವು, ಚೆನ್ನಮ್ಮ ವೃತ್ತ, ಮೈಸೂರು ರಸ್ತೆ.
6. ಕನಕಪುರ ರಿಂಗ್ ರಸ್ತೆಯಿಂದ ಬೇಂದ್ರೆ ವೃತ್ತ, ಚೆನ್ನಮ್ಮ ವೃತ್ತ, ಮೈಸೂರು ರಸ್ತೆ.
7. ಕೆ.ಆರ್. ರಸ್ತೆಯಿಂದ ಬರುವ ವಾಹನಗಳು ಭಾರತಿ ನರ್ಸಿಂಗ್ ಹೋಮ್, ಗಾಂಧಿ ಬಜಾರ್, ಆಶ್ರಮ, ಚಾಮರಾಜ್ ಪೇಟೆ, ಸಿರ್ಸಿ ಸರ್ಕಲ್.

ಕಸ್ತೂರಬಾ ರಸ್ತೆ ಕಡೆಗೆ:
1. ಜೆ.ಸಿ. ರಸ್ತೆ, ಭಾರತ್ ಜಂಕ್ಷನ್, ಸಿದ್ದಯ್ಯ ರಸ್ತೆ, ಕೆ.ಎಚ್. ರಸ್ತೆ.
2. ಮಿನರ್ವ, ಲಾಲ್‌ಬಾಗ್ ರಸ್ತೆ, ಲಾಲ್‌ಬಾಗ್ ಮೈನ್ ಗೇಟ್, ಕೆ.ಎಚ್. ರಸ್ತೆ.
3. ಸೌತ್ ಎಂಡ್ ರಸ್ತೆ, ಮಾಧವನ್ ಪಾರ್ಕ್, ಮರಿಯಪ್ಪ ರಸ್ತೆ, ಅಶೋಕ ಪಿಲ್ಲರ್, ಸಿದ್ದಾಪುರ ರಸ್ತೆ, ಕೆ.ಎಚ್. ರಸ್ತೆ.

ಜೆ.ಪಿ. ನಗರ ಕಡೆಯಿಂದ ಬರುವ ವಾಹನಗಳು:
ಕೆನರಾ ಬ್ಯಾಂಕ್ ಜಂಕ್ಷನ್, ಸಿಂಡಿಕೇಟ್ ಬ್ಯಾಂಕ್ ಜಂಕ್ಷನ್, ಟಿ. ಮರಿಯಪ್ಪ ರಸ್ತೆ, ಅಶೋಕ ಪಿಲ್ಲರ್, ಸಿದ್ದಾಪುರ ರಸ್ತೆ, ಕೆ.ಎಚ್. ರಸ್ತೆ ಬಳಸುವುದು.

ಕನಕಪುರ ರಸ್ತೆ ಕಡೆಯಿಂದ ಬರುವ ವಾಹನಗಳು:
ಸಂಗಮ್ ಸರ್ಕಲ್, ಮಾರೇನಹಳ್ಳಿ ಪೆಟ್ರೋಲ್ ಬಂಕ್, ಬನ್ನೇರುಘಟ್ಟ ರಸ್ತೆ ಬಳಸುವುದು.

ಹೊರ ವರ್ತುಲ ರಸ್ತೆ ಕಡೆಯಿಂದ ಬರುವ ವಾಹನಗಳು:
ಪುಟ್ಟೇನಹಳ್ಳಿ ಜಂಕ್ಷನ್, ಜೆ.ಡಿ. ಮರ, ಬನ್ನೇರುಘಟ್ಟ ರಸ್ತೆ ಬಳಸುವುದು.
ಹೊಸೂರು ಕಡೆಯಿಂದ ಬರುವ ವಾಹನಗಳು: ಮಿನರ್ವ ಸರ್ಕಲ್, ಕಲಾಸಿ ಪಾಳ್ಯ.

ಪಾರ್ಕಿಂಗ್‌ಗಂತೂ ಜಾಗವೇ ಇಲ್ಲ: ಬೆಂಗಳೂರಿನಲ್ಲಿ ಹೇಳಿಕೇಳಿ ಟ್ರಾಫಿಕ್ ಪ್ರಾಬ್ಲಂ, ಪಾರ್ಕಿಂಗ್ ಪ್ರಾಬ್ಲಂ ದಿನನಿತ್ಯದ ಸಮಸ್ಯೆ. ಅಂತಹುದರಲ್ಲಿ ಸಮ್ಮೇಳನಕ್ಕಾಗಿ ನಾನಾ ಭಾಗಗಳಿಂದ ಕನಿಷ್ಠ 2 ಲಕ್ಷ ಜನರು ಬಸ್, ಸ್ವರಾಜ್ ಮಾಜ್ಡಾ, ಮೆಟಡಾರ್ ಮತ್ತಿತರ ವಾಹಗಳಲ್ಲಿ ಆಗಮಿಸಿದರೆ ಸಂಚಾರ ಏನಾಗಬೇಡ? ಗಮನಿಸಿ: ಸಮ್ಮೇಳನದ ಕೇಂದ್ರ ಭಾಗವಾದ ಬಸವನಗುಡಿ ಪ್ರದೇಶ ತಲುಪುವುದಕ್ಕೆ ಹರಸಾಹಸ ಪಡಬೇಕಾಗುವುದು ಖಚಿತ. ಭಾರಿ ವಾಹನಗಳನ್ನಂತೂ ಮೂರ್‍ನಾಲ್ಕು ಕಿ.ಮೀ. ದೂರದಲ್ಲಿಯೇ ನಿಲ್ಲಿಸಬೇಕಾಗುತ್ತದೆ. ಅಲ್ಲಿಂದ ಕಾಲ್ನಡಿಗೆಯಲ್ಲಿಯೇ ಸಮ್ಮೇಳನಕ್ಕೆ ಸಾಗಿಬರಬೇಕಾದ ಅನಿವಾರ್ಯತೆ ಇರುತ್ತದೆ.

ಇನ್ನು, ನೇರವಾಗಿ ಬಸವನಗುಡಿಗೆ ವಾಹನದಲ್ಲಿಯೇ ಸಾಗಿಬರುತ್ತೇವೆ ಎನ್ನುವವರಿಗೆ ಪಾರ್ಕಿಂಗ್ ಪೆಡಂಭೂತ ಕಾಡುವುದು ನಿಶ್ಚಿತ. ಆದ್ದರಿಂದ ಜಾಣತನದದಿಂದ ಆದಷ್ಟೂ ವಾಹನಗಳನ್ನು ದೂರದ ಪ್ರದೇಶಗಳಲ್ಲಿಯೇ, ಪೊಲೀಸರಿಗೆ ಹೆಚ್ಚು ತ್ರಾಸ ನೀಡದಂತೆ ಸುರಕ್ಷಿತವಾಗಿ ನಿಲ್ಲಿಸಬೇಕಾದ ಹೊಣೆಗಾರಿಕೆ ವಾಹನ ಮಾಲೀಕರ ಮೇಲಿದೆ.

English summary
77th All India Kannada Sahitya Sammelana which begins in Bengaluru on February 4th will witness a lot of traffic problems around Basavanagudi. Traffic police have provided alternate routes for the commuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X