Vijayapura-Mangaluru Express: ಬದಲಾದ ವಿಜಯಪುರ ಮಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ವೇಳಾಪಟ್ಟಿ
ಬೆಂಗಳೂರು, ಏಪ್ರಿಲ್. 01: ವಿಜಯಪುರ ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ದೈನಂದಿನ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಖ್ಯೆ 07377 ಮತ್ತು 07378 ಪರಿಷ್ಕೃತ ವೇಳಾಪಟ್ಟಿಯೊಂದಿಗೆ ರೈಲುಗಳ ಸೇವೆಯನ್ನು ಮುಂದುವರಿಸಲಾಗುತ್ತಿದೆ. ಅಸ್ತಿತ್ವದಲ್ಲಿರುವ ಬೋಗಿಗಳ ಸಂಯೋಜನೆ ಮತ್ತು ಶುಲ್ಕದಲ್ಲಿ ಯಾವುದೇ ಬದಲಾವಣೆಯಿಲ್ಲ.
ರೈಲುಗಳ ವಿಸ್ತರಣೆಯ ವಿವರ ಈ ಕೆಳಗಿನಂತಿವೆ:
1. ರೈಲು ಸಂಖ್ಯೆ 07377 ವಿಜಯಪುರ - ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಏಪ್ರಿಲ್ 1 ರಿಂದ ಸೆಪ್ಟೆಂಬರ್ 30, 2024 ರವರೆಗೆ ವಿಸ್ತರಣೆ ಮಾಡಲಾಗುತ್ತಿದೆ. ಈ ಮೊದಲು ಇದೆ ತಿಂಗಳ 31 ರವರೆಗೆ ಸೂಚಿಸಲಾಗಿತ್ತು.

2. ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್ - ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಏಪ್ರಿಲ್ 2 ರಿಂದ ಅಕ್ಟೋಬರ್ 1, 2024 ರವರೆಗೆ ವಿಸ್ತರಣೆ ಮಾಡಲಾಗುತ್ತಿದೆ. ಈ ಮೊದಲು ಏಪ್ರಿಲ್ 1, 2024 ರವರೆಗೆ ಸೂಚಿಸಲಾಗಿತ್ತು.
ರೈಲು ಸಂಖ್ಯೆ 07377 / 07378 ವಿಜಯಪುರ - ಮಂಗಳೂರು ಜಂಕ್ಷನ್ - ವಿಜಯಪುರ ವಿಶೇಷ ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದ ನಂತರ, ರೈಲುಗಳ ಸಂಖ್ಯೆ 07338 ಗುಂತಕಲ್ - ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ಮತ್ತು ರೈಲು ಸಂಖ್ಯೆ 06484 ಕಬಕಪುತ್ತೂರು - ಮಂಗಳೂರು ಸೆಂಟ್ರಲ್ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲುಗಳ ವೇಳಾಪಟ್ಟಿಯನ್ನು ಏಪ್ರಿಲ್ 1, 2024 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
ಈ ರೈಲುಗಳ ಪರಿಷ್ಕೃತ ವೇಳಾಪಟ್ಟಿಗಾಗಿ, swr.indianrailways.gov.in ಮತ್ತು ಸಹಾಯವಾಣಿ ಸಂಖ್ಯೆ 139ಗೆ ಅಥವಾ ಭಾರತೀಯ ರೈಲ್ವೆ ವೆಬ್ ಸೈಟ್ www.enquiry.indianrail.gov.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.












Click it and Unblock the Notifications