Vande Bharat Train: ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು, ದರಪಟ್ಟಿ
ಹುಬ್ಬಳ್ಳಿ, ಸೆಪ್ಟೆಂಬರ್ 15: ಉತ್ತರ ಕರ್ನಾಟಕ ಭಾಗಕ್ಕೆ ಮತ್ತೊಂದು ವಂದೇ ಭಾರತ್ ರೈಲು ಬರಲಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ 10 ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಇವುಗಳಲ್ಲಿ ಹುಬ್ಬಳ್ಳಿ-ಪುಣೆ ನಡುವಿನ ರೈಲು ಸೇರಿದೆ. ಉಭಯ ನಗರಗಳ ನಡುವೆ ಕೇಸರಿ ಬಣ್ಣದ ರೈಲು ಸಂಚಾರ ನಡೆಸಲಿದ್ದು, 7 ನಿಲ್ದಾಣಗಳನ್ನು ಹೊಂದಿದೆ. ಈಗಾಗಲೇ ಪ್ರಾಯೋಗಿಕ ಸಂಚಾರ ಸಹ ಮುಕ್ತಾಯಗೊಂಡಿದೆ.
ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಹಮದಾಬಾದ್‌ನಿಂದ ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ. ರೈಲು ಹುಬ್ಬಳ್ಳಿ-ಪುಣೆ ನಡುವೆ ನೇರವಾಗಿ ಸಂಚರಿಸಲಿದ್ದು, ಕೊಲ್ಹಾಪುರ ಮುಖಾಂತರ ಸಂಚರಿಸುವುದಿಲ್ಲ. ಪ್ರಯಾಣಿಕರ ಸ್ಪಂದನೆ ಮತ್ತು ಜನದಟ್ಟಣೆಯನ್ನು ಗಮನದಲ್ಲಿಟ್ಟು ಮುಂದೆ ಈ ರೈಲುನ್ನು ಪ್ರತಿದಿನ ಸಂಚರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ.

ರೈಲು ನಂಬರ್ 20669 ಹುಬ್ಬಳ್ಳಿ-ಪುಣೆ ನಡುವೆ ವಾರದಲ್ಲಿ ಮೂರು ಬಾರಿ (ಬುಧವಾರ, ಶುಕ್ರವಾರ ಹಾಗೂ ರವಿವಾರ) ಮತ್ತು ರೈಲು ನಂಬರ್ 20670 ಪುಣೆ-ಹುಬ್ಬಳ್ಳಿ ನಡುವೆ (ಗುರುವಾರ, ಶನಿವಾರ ಮತ್ತು ಸೋಮವಾರ) ರೈಲು ಸಂಚಾರ ನಡೆಸಲಿದೆ. ಈಗಾಗಲೇ ರೈಲಿನ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.
ಸಂಸದ ಪ್ರಹ್ಲಾದ್ ಜೋಶಿ, 'ಹುಬ್ಬಳ್ಳಿ-ಪುಣೆ ಸಂಪರ್ಕದಿಂದ ಈ ಭಾಗದ ವಾಣಿಜ್ಯೋದ್ಯಮಕ್ಕೆ, ಕೈಗಾರಿಕಾ ವಸಹಾತುಗಳಿಗೆ ತುಂಬಾ ಅನಕೂಲವಾಗುವುದು ಮತ್ತು ಮುಂಬೈ ಸಂಪರ್ಕಕ್ಕೆ ಈ ಮಾರ್ಗ ಅತ್ಯಂತ ಪ್ರಮುಖವಾಗುವುದೆಂಬುದನ್ನು ರೈಲ್ವೆ ಸಚಿವರ ಗಮನಕ್ಕೆ ತರಲಾಗಿತ್ತು. ಅವರು ನನ್ನ ಮನವಿಗೆ ಸ್ಪಂದನೆ ನೀಡಿ ರೈಲು ಸೇವೆಯನ್ನು ಆರಂಭಿಸುತ್ತಿರುವುದು ಸಂತೋಷದ ವಿಷಯ' ಎಂದು ಹೇಳಿದ್ದಾರೆ.
ರೈಲಿನ ದರದ ಮಾಹಿತಿ: ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ ಮತ್ತು ಪುಣೆಯಲ್ಲಿ ನಿಲುಗಡೆಯನ್ನು ಹೊಂದಿದೆ. ರೈಲಿನ ವೇಳಾಪಟ್ಟಿಯ ಮತ್ತು ದರವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ದರಪಟ್ಟಿ ಹೀಗಿದೆ....
* ಹುಬ್ಬಳ್ಳಿ-ಧಾರವಾಡ ಚೇರ್. ಕಾರ್ (ವಿತ್ ಕ್ಯಾಟರಿಂಗ್) 365 ರೂ., ಎಕ್ಸಿಕ್ಯುಟಿವ್ ಕ್ಲಾಸ್ 690 ರೂ.ಗಳು. ಚೇರ್ ಕಾರ್ (ಕ್ಯಾಟರಿಂಗ್ ಇಲ್ಲದೆ) 365 ರೂ., ಎಕ್ಸಿಕ್ಯುಟಿವ್ ಕ್ಲಾಸ್ 690 ರೂ.ಗಳು.
* ಹುಬ್ಬಳ್ಳಿ-ಬೆಳಗಾವಿ. ಕಾರ್ (ವಿತ್ ಕ್ಯಾಟರಿಂಗ್) 520 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1005 ರೂ.ಗಳು. ಚೇರ್ ಕಾರ್ (ಕ್ಯಾಟರಿಂಗ್ ಇಲ್ಲದೆ) 505 ರೂ., ಎಕ್ಸಿಕ್ಯುಟಿವ್ ಕ್ಲಾಸ್ 990 ರೂ.ಗಳು.
* ಹುಬ್ಬಳ್ಳಿ-ಮೀರಜ್. ಚೇರ್ ಕಾರ್ (ವಿತ್ ಕ್ಯಾಟರಿಂಗ್) 860 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1600 ರೂ.ಗಳು. ಚೇರ್ ಕಾರ್ (ಕ್ಯಾಟರಿಂಗ್ ಇಲ್ಲದೆ) 740 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1445 ರೂ.ಗಳು.
* ಹುಬ್ಬಳ್ಳಿ-ಸಾಂಗ್ಲಿ. ಚೇರ್ ಕಾರ್ (ವಿತ್ ಕ್ಯಾಟರಿಂಗ್) 875 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1640 ರೂ.ಗಳು. ಚೇರ್ ಕಾರ್ (ಕ್ಯಾಟರಿಂಗ್ ಇಲ್ಲದೆ) 755 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1485 ರೂ.ಗಳು.
* ಹುಬ್ಬಳ್ಳಿ-ಸತಾರಾ. ಚೇರ್ ಕಾರ್ (ವಿತ್ ಕ್ಯಾಟರಿಂಗ್) 1075 ರೂ., ಎಕ್ಸಿಕ್ಯುಟಿವ್ ಕ್ಲಾಸ್ 2045 ರೂ.ಗಳು. ಚೇರ್ ಕಾರ್ (ಕ್ಯಾಟರಿಂಗ್ ಇಲ್ಲದೆ) 955 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1890 ರೂ.ಗಳು.
* ಹುಬ್ಬಳ್ಳಿ-ಪುಣೆ. ಚೇರ್ ಕಾರ್ (ವಿತ್ ಕ್ಯಾಟರಿಂಗ್) 1530 ರೂ., ಎಕ್ಸಿಕ್ಯುಟಿವ್ ಕ್ಲಾಸ್ 2780 ರೂ.ಗಳು. ಚೇರ್ ಕಾರ್ (ಕ್ಯಾಟರಿಂಗ್ ಇಲ್ಲದೆ) 1185 ರೂ., ಎಕ್ಸಿಕ್ಯುಟಿವ್ ಕ್ಲಾಸ್ 2385 ರೂ.ಗಳು.
* ಧಾರವಾಡ-ಬೆಳಗಾವಿ. ಚೇರ್ ಕಾರ್ (ವಿತ್ ಕ್ಯಾಟರಿಂಗ್) 485 ರೂ., ಎಕ್ಸಿಕ್ಯುಟಿವ್ ಕ್ಲಾಸ್ 930 ರೂ.ಗಳು. ಚೇರ್ ಕಾರ್ (ಕ್ಯಾಟರಿಂಗ್ ಇಲ್ಲದೆ) 470 ರೂ., ಎಕ್ಸಿಕ್ಯುಟಿವ್ ಕ್ಲಾಸ್ 915 ರೂ.ಗಳು.
* ಧಾರವಾಡ-ಮಿರಜ್. ಚೇರ್ ಕಾರ್ (ವಿತ್ ಕ್ಯಾಟರಿಂಗ್) 825 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1540 ರೂ.ಗಳು. ಚೇರ್ ಕಾರ್ (ಕ್ಯಾಟರಿಂಗ್ ಇಲ್ಲದೆ) 705 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1385 ರೂ.ಗಳು.
* ಧಾರವಾಡ-ಸಾಂಗ್ಲಿ. ಚೇರ್ ಕಾರ್ (ವಿತ್ ಕ್ಯಾಟರಿಂಗ್) 845 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1575 ರೂ.ಗಳು. ಚೇರ್ ಕಾರ್ (ಕ್ಯಾಟರಿಂಗ್ ಇಲ್ಲದೆ) 720 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1420 ರೂ.ಗಳು.
* ಧಾರವಾಡ-ಸತಾರಾ. ಧಾರವಾಡ-ಬೆಳಗಾವಿ. ಚೇರ್ ಕಾರ್ (ವಿತ್ ಕ್ಯಾಟರಿಂಗ್) 1040 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1980 ರೂ.ಗಳು. ಚೇರ್ ಕಾರ್ (ಕ್ಯಾಟರಿಂಗ್ ಇಲ್ಲದೆ) 920 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1825 ರೂ.ಗಳು.
* ಧಾರವಾಡ-ಪುಣೆ. ಚೇರ್ ಕಾರ್ (ವಿತ್ ಕ್ಯಾಟರಿಂಗ್) 1505 ರೂ., ಎಕ್ಸಿಕ್ಯುಟಿವ್ ಕ್ಲಾಸ್ 2725 ರೂ.ಗಳು. ಚೇರ್ ಕಾರ್ (ಕ್ಯಾಟರಿಂಗ್ ಇಲ್ಲದೆ) 1160 ರೂ., ಎಕ್ಸಿಕ್ಯುಟಿವ್ ಕ್ಲಾಸ್ 2325 ರೂ.ಗಳು.












Click it and Unblock the Notifications