ಕುಡಚಿ-ಉಗಾರಖುರ್ದ್‌ ಜೋಡಿ ಮಾರ್ಗದಲ್ಲಿ ಶೀಘ್ರವೇ ಓಡಲಿದೆ ರೈಲು

ಬಳ್ಳಾರಿ, ಸೆಪ್ಟೆಂಬರ್ 29; ನೈಋತ್ಯ ರೈಲ್ವೆ ವಿಭಾಗದ ಪ್ರಯಾಣಿಕರಿಗೆ ಸಿಹಿಸುದ್ದಿ. ಬಹುನಿರೀಕ್ಷಿತ ಕುಡಚಿ-ಉಗಾರಖುರ್ದ್‌ ಜೋಡಿ ರೈಲು ಹಳಿಯಲ್ಲಿ ಶೀಘ್ರವೇ ರೈಲು ಸಂಚಾರ ಆರಂಭವಾಗಲಿದೆ. ಈ ಮಾರ್ಗದಲ್ಲಿ ಗಂಟೆಗೆ 90 ಕಿ. ಮೀ. ವೇಗದಲ್ಲಿ ರೈಲು ಓಡಿಸಲು ರೈಲ್ವೆ ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡಿದ್ದಾರೆ.

ಕುಡಚಿ-ಉಗಾರಖುರ್ದ್‌ 25.1 ಕಿ. ಮೀ. ಜೋಡಿ ಹಳಿ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಪ್ರಾಯೋಗಿಕ ಸಂಚಾರ ನಡೆಸಿ, ರೈಲು ಸಂಚಾರಕ್ಕೆ ಒಪ್ಪಿಗೆಯನ್ನು ಸಹ ನೀಡಿದ್ದಾರೆ. ರೈಲುಗಳ ವಾಣಿಜ್ಯ ಸಂಚಾರದ ದಿನಾಂಕ ನಿಗದಿಯಾಗಬೇಕಿದೆ.

Train Service In Ugar Khurd Kudachi Double Line Soon

ಬುಧವಾರ ರೈಲ್ವೆ ಸುರಕ್ಷತಾ ಆಯುಕ್ತ ಅನಂತ ಮಧುಕರ ಚೌಧರಿ ಅಧಿಕಾರಿಗಳ ತಂಡದ ಜೊತೆ ಪರಿಶೀಲನೆ ನಡೆಸಿದರು. ಕುಡಚಿ-ಉಗಾರಖುರ್ದ್‌ ಜೋಡಿ ರೈಲು ಹಳಿ ಮಾರ್ಗವನ್ನು ಲೋಂಡಾ-ಮೀರಜ್ ಜೋಡಿ ಹಳಿ ಯೋಜನೆಯ ಭಾಗವಾಗಿ ನಿರ್ಮಾಣ ಮಾಡಲಾಗಿದೆ. 2015-16ರಲ್ಲಿ ಘೋಷಣೆಯಾದ ಮಾರ್ಗಕ್ಕೆ ಶೇ 100ರಷ್ಟು ಅನುದಾನವನ್ನು ರೈಲ್ವೆ ಇಲಾಖೆಯೇ ನೀಡಿದೆ.

ಪ್ರಾಯೋಗಿಕ ಸಂಚಾರ ಯಶಸ್ವಿ; ಕುಡಚಿ-ಉಗಾರಖುರ್ದ್‌ ಜೋಡಿ ಹಳಿ ಮಾರ್ಗದಲ್ಲಿ ಪ್ರಾಯೋಗಕ ಸಂಚಾರ ಯಶಸ್ವಿಯಾಗಿದೆ. ಗಂಟೆಗೆ 119 ಮತ್ತು 89 ಕಿ. ಮೀ. ವೇಗದಲ್ಲಿ ಓಡಿಸುವ ಪ್ರಯೋಗ ನಡೆಸಲಾಯಿತು. ಬಳಿಕ ಗಂಟೆಗೆ 90 ಕಿ. ಮೀ. ವೇಗದಲ್ಲಿ ಓಡಿಸಲು ಒಪ್ಪಿಗೆ ನೀಡಲಾಗಿದೆ.

ಈ ಜೋಡಿ ಮಾರ್ಗದ ನಿರ್ಮಾಣದಿಂದ ಎಕ್ಸ್‌ಪ್ರೆಸ್ ರೈಲುಗಳ ಸುಗಮ ಸಂಚಾರಕ್ಕೆ ಇದ್ದ ಅಡೆತಡೆ ನಿವಾರಣೆಯಾಗಿದೆ. ಗೂಡ್ಸ್ ಮತ್ತು ಪ್ಯಾಸೆಂಜರ್ ರೈಲುಗಳು ಸಂಚಾರ ನಡೆಸುವಾಗ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಹಾಲಿ ರೈಲು ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ ನಡೆಯುತ್ತವೆ. ಆದರೆ ಕುಡಚಿ-ಉಗಾರಖುರ್ದ್‌ ಜೋಡಿ ಹಳಿ ಮಾರ್ಗಕ್ಕೆ ಸಂಪೂರ್ಣ ಅನುದಾವನ್ನು ರೈಲ್ವೆ ಸಚಿವಾಲಯವೇ ನೀಡಿದೆ.

ಈ ಯೋಜನೆಯು ಕೃಷ್ಣಾ ನದಿ ಮೇಲಿನ ಸೇತುವೆ. ಕುಡಚಿಯಲ್ಲಿ ಸುಸಜ್ಜಿತ ಫ್ಲಾಟ್‌ಫಾರ್ಮ್ ಮತ್ತು ಒಂದು ರಸ್ತೆ ಮೇಲು ಸೇತುವೆಯನ್ನು ಒಳಗೊಂಡಿದೆ. ರೈಲ್ವೆ ಸಚಿವಾಲಯ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಯಾವಾಗ ಆರಂಭಿಸಲಾಗುತ್ತದೆ ಎಂದು ಶೀಘ್ರವೇ ಮಾಹಿತಿ ನೀಡುವ ನಿರೀಕ್ಷೆ ಇದೆ.

ಕುಡಚಿ-ಉಗಾರಖುರ್ದ್‌ ಜೋಡಿ ರೈಲು ಮಾರ್ಗದಲ್ಲಿ ಶೀಘ್ರವೇ ಸಂಚಾರ ಆರಂಭವಾಗಲಿದೆ. ಉಳಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬಾಗಲಕೋಟೆ-ಕುಡಚಿ ಮತ್ತು ಗದಗ-ವಾಡಿ ಎರಡು ಪ್ರಮುಖ ರೈಲು ಯೋಜನೆಗಳಾಗಿವೆ. ಈ ಯೋಜನೆಗಳು ಸಹ ಪೂರ್ಣಗೊಳ್ಳುವ ಹಂತದಲ್ಲಿದೆ.

ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ಕೆಲವು ದಿನಗಳ ಹಿಂದೆ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆಯನ್ನು 2025ರ ಅಂತ್ಯದೊಳಗೆ ಮತ್ತು ಗದಗ-ವಾಡಿ ಮಾರ್ಗವನ್ನು ಮಾರ್ಚ್ 2026ರೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+