ಭಾರತೀಯರಿಗೆ ವೀಸಾ ಫ್ರೀ ಟಾಪ್ 7 ದೇಶಗಳು – ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ

ಬೇಸಿಗೆಯ ರಜೆ ಆರಂಭವಾಗಿದೆ ವಿದೇಶ ಪ್ರವಾಸದ ಕನಸು ಕಾಣುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ವಿಶೇಷವಾಗಿ ಕಡಿಮೆ ದಾಖಲೆಗಳ ಮತ್ತು ಸುಲಭವಾಗಿ ಪ್ರವಾಸ ಮಾಡುವಂತಹ ದೇಶಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ಫ್ರೀ ಅಥವಾ ಸುಲಭವಾದ ಪ್ರವಾಸ ಮಾಡುವಂತಹ ಕೆಲವು ದೇಶಗಳು ಇದೀಗ ಹೆಚ್ಚು ಜನಪ್ರಿಯವಾಗಿವೆ. ಇಲ್ಲಿವೆ ಅಂತಹ 7 ಅತ್ಯುತ್ತಮವಾದ ದೇಶಗಳ ವಿವರ ಇಲ್ಲಿದೆ.

1. ಶ್ರೀಲಂಕಾ

ಭಾರತೀಯರಿಗೆ ಅತ್ಯಂತ ಹತ್ತಿರದಲ್ಲಿರುವ ಹಾಗೂ ಸುಲಭವಾಗಿ ಪ್ರವಾಸ ಮಾಡುವಂತಹ ದೇಶಗಳಲ್ಲಿ ಶ್ರೀಲಂಕಾ ಪ್ರಮುಖ ದೇಶವಾಗಿದೆ. ಭಾರತೀಯರಿಗೆ ವೀಸಾ ಫ್ರೀ ಅಥವಾ ಉಚಿತ ETA (Electronic Travel Authorization) ಸೌಲಭ್ಯ ಲಭ್ಯವಿದ್ದು, ಬೇಗನೆ ಅನುಮತಿ ಸಿಗುತ್ತದೆ. ಮಿರಿಸ್ಸಾ, ಉನಾವತುನಾ, ಬೆಂಟೋಟಾದಂತಹ ನೈಋತ್ಯ ಕರಾವಳಿಯಲ್ಲಿರುವ ಸುಂದರ ಕಡಲತೀರಗಳು, ಯಾಲಾ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ಸಫಾರಿ, ಕ್ಯಾಂಡಿಯ ಪ್ರಸಿದ್ಧ ದೇವಸ್ಥಾನ ಈ ಎಲ್ಲಾ ಪ್ರದೇಶಗಳನ್ನು ಒಂದೇ ದೇಶದಲ್ಲಿ ನೋಡಬಹುದು.

Top 7 Visa Free Countries

2. ನೇಪಾಳ

ನೇಪಾಳವು ಹಿಮಾಲಯದ ತಪ್ಪಲಿನಲ್ಲಿರುವ ದಕ್ಷಿಣ ಏಷ್ಯಾದ ರಾಷ್ಟ್ರವಾಗಿದೆ. ಪರ್ವತ ಪ್ರಿಯರಿಗೆ ನೇಪಾಳವು ಪರಿಪೂರ್ಣ ತಾಣವಾಗಿದೆ. ಕಠ್ಮಂಡು ಮತ್ತು ಪೋಖರಾದ ಪ್ರಕೃತಿ ಸೌಂದರ್ಯ, ಹಿಮಾಲಯ ಟ್ರೆಕ್ಕಿಂಗ್ ಮತ್ತು ಸಾಹಸಪ್ರಿಯರಿಗೆ ಇದು ಸೂಕ್ತವಾದ ಜಾಗವಾಗಿದೆ. ಭಾರತೀಯರು ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿ ಮೂಲಕವೇ ವೀಸಾ ಇಲ್ಲದೆ ಈ ಪ್ರದೇಶವನ್ನು ಪ್ರವೇಶಿಸಬಹುದು.

Lakshadweep Travel 2026: ಈ 2 ಹೊಸ ನಿಯಮಗಳಿಂದ ಈಗ ಲಕ್ಷದ್ವೀಪ ಪ್ರವಾಸ ಇನ್ನಷ್ಟು ಸುಲಭ
Lakshadweep Travel 2026: ಈ 2 ಹೊಸ ನಿಯಮಗಳಿಂದ ಈಗ ಲಕ್ಷದ್ವೀಪ ಪ್ರವಾಸ ಇನ್ನಷ್ಟು ಸುಲಭ

3. ಸೆಶೆಲ್ಸ್

ಹಿಂದೂ ಮಹಾಸಾಗರದಲ್ಲಿರುವ 115 ದ್ವೀಪಗಳ ಸುಂದರವಾದ ಆಪ್ರಿಕನ್ ದ್ವೀಪಸಮೂಹ ರಾಷ್ಟ್ರವಾಗಿದೆ. ಈ ಸುಂದರ ದ್ವೀಪ ರಾಷ್ಟ್ರ ಭಾರತೀಯರಿಗೆ 90 ದಿನಗಳವರೆಗೆ ವೀಸಾ ಫ್ರೀ ಪ್ರವೇಶ ನೀಡುತ್ತದೆ. ಸೆಶೆಲ್ಸ್ ತನ್ನ ಬಿಳಿ ಮರಳು ಕಡಲತೀರಗಳು ಮತ್ತು ನೀಲಿ ನೀರಿನ ಸೌಂದರ್ಯದಿಂದ ಪ್ರಸಿದ್ಧವಾಗಿದೆ. ಹನಿಮೂನ್ ಅಥವಾ ವಿಶ್ರಾಂತಿಯನ್ನು ಪಡೆಯಲು ಈ ಪ್ರವಾಸ ಅತ್ಯುತ್ತಮವಾಗಿದೆ.

Top 7 Visa Free Countries

4. ಮಾರಿಷಿಯಸ್

ಮಾರಿಷಿಯಸ್, ಹಿಂದೂ ಮಹಾಸಾಗರದಲ್ಲಿರುವ ಸುಂದರ ದ್ವೀಪ ರಾಷ್ಟ್ರವಾಗಿದ್ದು, ಅದರ ಬಿಳಿ ಮರಳಿನ ಕಡಲತೀರಗಳು ಮತ್ತು ಹಸಿರಾದ ಪರ್ವತಗಳಿಗೆ ಇದು ಹೆಸರುವಾಸಿಯಾಗಿದೆ. ಐಷಾರಾಮಿ ಕಡಲತೀರ ಪ್ರವಾಸಕ್ಕಾಗಿ ಮೋರಿಷಿಯಸ್ ಉತ್ತಮ ಆಯ್ಕೆಯಾಗಿದೆ. ಕ್ರಿಸ್ಟಲ್ ಕ್ಲಿಯರ್ ನೀರು, ವಾಟರ್ ಸ್ಪೋರ್ಟ್ಸ್ ಮತ್ತು ಸುಂದರ ದೃಶ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಭಾರತೀಯರಿಗೆ 60-90 ದಿನಗಳವರೆಗೆ ವೀಸಾ ಫ್ರೀ ಪ್ರವೇಶ ಇರುತ್ತದೆ.

ಕೈಲಾಸ ಮಾನಸ ಸರೋವರ ಯಾತ್ರೆ 2026: ನೋಂದಣಿ ಆರಂಭ, ಭಕ್ತರಿಗೆ ಸುವರ್ಣಾವಕಾಶ
ಕೈಲಾಸ ಮಾನಸ ಸರೋವರ ಯಾತ್ರೆ 2026: ನೋಂದಣಿ ಆರಂಭ, ಭಕ್ತರಿಗೆ ಸುವರ್ಣಾವಕಾಶ

5. ಫಿಜಿ

ಫಿಜಿ ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಸುಮಾರು 332 ದ್ವೀಪಗಳಲ್ಲಿ 106 ದ್ವೀಪಗಳಲ್ಲಿ ಜನವಸತಿಯಿದೆ. ನೀರು, ಕೊರಲ್ ರೀಫ್ಸ್ ಮತ್ತು ಐಲ್ಯಾಂಡ್ ಹಾಪಿಂಗ್ ಅತ್ಯಂತ ಸ್ಮರಣೀಯ ಅನುಭವ ನೀಡುತ್ತದೆ. ಭಾರತೀಯರಿಗೆ ವೀಸಾ ಫ್ರೀ ಪ್ರವೇಶ ಲಭ್ಯವಿದ್ದು, ಸಾಮಾನ್ಯವಾಗಿ ಸಂಪರ್ಕ ವಿಮಾನಗಳ ಮೂಲಕ ತಲುಪಬೇಕು.

6. ಮಲೇಷ್ಯಾ

ಮಲೇಷ್ಯಾ ಆಗ್ನೇಯ ಏಷ್ಯಾದಲ್ಲಿರುವ ಒಂದು ಸಾಂವಿಧಾನಿಕ ರಾಜಪ್ರಭುತ್ವ ಸಂಯುಕ್ತ ರಾಷ್ಟ್ರ. ಸಂಸ್ಕೃತಿಗಳ ಸಂಯೋಜನೆಯಾದ ಮಲೇಷ್ಯಾ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತದೆ. ಲಾಂಗ್‌ಕಾವಿ ಕಡಲತೀರಗಳು, ಕೌಲಾಲಂಪುರ ನಗರದ ಆಧುನಿಕತೆ, ಬೋರ್ನಿಯೋ ಪ್ರಕೃತಿಯನ್ನು ಇಲ್ಲಿ ಕಾಣಬಹುದು. ಭಾರತೀಯರಿಗೆ ವೀಸಾ ಫ್ರೀ ಪ್ರವೇಶವಿದ್ದು, ಪ್ರಯಾಣಕ್ಕೂ ಮುನ್ನ Malaysia Digital Arrival Card (MDAC) ಭರ್ತಿ ಮಾಡುವುದು ಕಡ್ಡಾಯ.

7. ಥೈಲ್ಯಾಂಡ್

ಭಾರತೀಯ ಪ್ರವಾಸಿಗರ ಮೆಚ್ಚಿನ ತಾಣಗಳಲ್ಲಿ ಥೈಲ್ಯಾಂಡ್ ಮೊದಲ ಸ್ಥಾನದಲ್ಲಿದೆ, ಆಗ್ನೇಯ ಏಷ್ಯಾದಲ್ಲಿರುವ ಒಂದು ಪ್ರಮುಖ ದೇಶವಾಗಿದೆ. ಫುಕೇಟ್ ಮತ್ತು ಪಟ್ಟಾಯ ಕಡಲತೀರಗಳು, ಬ್ಯಾಂಕಾಕ್‌ನ ನಗರ ಜೀವನ, ಚಿಯಾಂಗ್ ಮೈ ಸಂಸ್ಕೃತಿ ಪ್ರವಾಸಿಗರನ್ನು ಸೆಳೆಯುತ್ತವೆ. ಭಾರತೀಯರಿಗೆ 60 ದಿನಗಳವರೆಗೆ ವೀಸಾ ಫ್ರೀ ಪ್ರವೇಶ ದೊರೆಯುತ್ತದೆ.

ಕಡಿಮೆ ವೆಚ್ಚದಲ್ಲಿ ಮತ್ತು ಸುಲಭವಾಗಿ ಪ್ರವಾಸ ಮತ್ತು ವೈವಿಧ್ಯಮಯವಾದ ಅನುಭವ ನೀಡುವ ಈ ದೇಶಗಳು ಬೇಸಿಗೆಯಲ್ಲಿ ವಿದೇಶ ಪ್ರವಾಸಕ್ಕೆ ಅತ್ಯುತ್ತಮ ಆಯ್ಕೆಯಾಗಿವೆ. ಸರಿಯಾದ ಯೋಜನೆ ಮಾಡಿದರೆ ಕಡಿಮೆ ಖರ್ಚಿನಲ್ಲಿ ಅಂತರಾಷ್ಟ್ರೀಯ ಪ್ರವಾಸವನ್ನು ಆನಂದಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+