India's Top 10 coolest spots: ಬೇಸಿಗೆಯಲ್ಲೂ ತಂಪಾಗಿರುವ ದೇಶದ ಟಾಪ್ 10 ಅದ್ಭುತ ತಾಣಗಳಿವು-ತಲುಪುವುದೇಗೆ?
ಭಾರತವು ಎಲ್ಲಾ ಖತುವಿನಲ್ಲೂ ಹೊಂದಾಣಿಕೆಯಾಗುವಂತಹ ಸುಂದರ ಪ್ರವಾಸಿ ತಾಣಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಅದರಲ್ಲೂ ಈ ತಾಣಗಳಲ್ಲಿ ತಾಪಮಾನವು 0 ಡಿಗ್ರಿ ಸೆಂಟಿಗ್ರೇಡ್‌ಗಿಂತ ಕಡಿಮೆ ಇರಲಿದ್ದು, ವರ್ಷವಿಡೀ ತಂಪಾಗಿರುತ್ತವೆ. ಹಾಗಾದರೆ ಆ ತಾಣಗಳು ಯಾವುವು ಹಾಗೂ ಅಲ್ಲಿಗೆ ತಲುಪುವ ಮಾರ್ಗಗಳ ವಿವರವನ್ನು ಇಲ್ಲಿ ತಿಳಿಯಿರಿ.
ಭಾರತವು ಉಷ್ಣವಲಯದ ಪ್ರದೇಶವಾಗಿದ್ದು, ವೈವಿಧ್ಯಮಯ ಹವಾಮಾನ ಪರಿಸ್ಥಿತಿಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ ಅದ್ಭುತ ಪ್ರವಾಸಿ ತಾಣಗಳ ನೆಲೆಯಾಗಿದೆ. ಅದರಲ್ಲಿ ಈ ಸಂದರ್ಭದಲ್ಲಿ ನಾವು ಇರುವ ಸ್ಥಳಕ್ಕಿಂತ ತಣ್ಣನೆಯ ಕೆಲವು ಸ್ಥಳಗಳ ಪಟ್ಟಿ ಸಮೇತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

1) ದ್ರಾಸ್: ಭಾರತದ ಅತ್ಯಂತ ತಂಪಾದ ಸ್ಥಳ, ಜನವಸತಿ ಪ್ರದೇಶ ಎಂದು ಹೆಸರಾಗಿರುವ ದ್ರಾಸ್ ಲಡಾಖ್‌ನ ಕಾರ್ಗಿಲ್ ಪಟ್ಟಣದಲ್ಲಿದೆ. ಸಮುದ್ರ ಮಟ್ಟದಿಂದ 3,280 ಮೀಟರ್ ಎತ್ತರದಲ್ಲಿ ನೆಲೆಸಿರುವ ಇದನ್ನು ಲಡಾಖ್ ಗೇಟ್‌ವೇ ಅಂತಲೂ ಕರೆಯಲಾಗುತ್ತದೆ. ಈ ಪ್ರದೇಶವು ಅಮರನಾಥ ಗುಹೆ ಮತ್ತು ಸಿಯಾಲ್‌ಕೋಟ್‌ಗೆ ಭೇಟಿ ನೀಡಲು ಬಸುವ ಯಾತ್ರಾರ್ಥಿಗಳಿಗೆ ಮೂಲ ಟ್ರೆಕ್ಕಿಂಗ್ ತಾಣವಾಗಿದೆ.
ಇಲ್ಲಿನ ರಮಣೀಯ ಭೂದೃಶ್ಯಗಳು, ಹಿಮದಿಂದ ಕೂಡಿದ ಪರ್ವತಗಳು ಎಂತಹವನ್ನು ತನ್ನತ್ತ ಸೆಳೆದುಬಿಡುತ್ತವೆ.
ಚಳಿಗಾಲದಲ್ಲಿ ಇಲ್ಲಿ ತಾಪಮಾನವು ಮೈನಸ್ 45 ಡಿಗ್ರಿ ಸೆಂಟಿಗ್ರೇಡ್‌ಗೆ ಇಳಿಯುತ್ತದೆ. ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಜೂನ್‌ನಿಂದ ಸೆಪ್ಟೆಂಬರ್‌ವೆಗೆ.
2) ಸಿಯಾಚಿನ್ ಗ್ಲೇಸಿಯರ್: ವಿಶ್ವದಲ್ಲೇ ಅತ್ಯಂತ ತಣ್ಣನೆಯ ಸ್ಥಳ ಮತ್ತು ಉತ್ತರ ಕಾರಕೋರಂ ಶ್ರೇಣಿಯಲ್ಲಿರುವ ಸಿಯಾಚಿನ್ ಗ್ಲೇಸಿಯರ್ ಭಾರತದ ಅತ್ಯಂತ ತಂಪಾದ ಸ್ಥಳವಾಗಿದ್ದು, ಇದು 5,753 ಮೀಟರ್ ಎತ್ತರದಲ್ಲಿದೆ. ಪರಿಣಾಮವಾಗಿ, ಜನವರಿಯಲ್ಲಿ ಈ ಪ್ರದೇಶದ ಉಷ್ಣತೆಯು ಮೈನಸ್ 50 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ತಾಪಮಾನವು ಮೈನಸ್ 10 ಡಿಗ್ರಿ ಸೆಂಟಿಗ್ರೇಡ್ ಆಗಿರುತ್ತದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದಿತ ಪ್ರದೇಶದ ಭಾಗವಾಗಿರುವ ಈ ಪ್ರದೇಶವು ವಿಶ್ವದ ಅತ್ಯಂತ ತಂಪಾದ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳದಲ್ಲಿ ಸೇನಾ ಸಿಬ್ಬಂದಿಯನ್ನು ಮಾತ್ರ ಕಾಣಬಹುದಾಗಿದ್ದು, ಅವರಿಗೆ ಭೀಕರ ಶೀತದ ಪರಿಸ್ಥಿತಿಯನ್ನು ತಡೆದುಕೊಳ್ಳಲು ವಿಶೇಷ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಒದಗಿಸಲಾಗುತ್ತದೆ.
ಇನ್ನು ಮೊತ್ತೊಂದೆಡೆ ನೋಡುವುದಾದರೆ, ಇಲ್ಲಿ ಆಗಾಗ ಭಾರೀ ಹಿಮಪಾತದಂತಹ ಹವಾಮಾನದಿಂದಾಗಿ ಎರಡೂ ದೇಶಗಳ ಸಾವಿರಾರು ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿರುವ ಘಟನೆಗಳು ಕೂಡ ನಡೆದಿವೆ.
3) ಸೆಲಾ ಪಾಸ್, ತವಾಂಗ್: ಯಾವಾಗಲೂ ಅತೀ ಶೀತದಿಂದ ಕೂಡಿರುವ ಅರುಣಾಚಲ ಪ್ರದೇಶದ ತವಾಂಗ್ ಮತ್ತು ಪಶ್ಚಿಮ ಕಮೆಂಗ್ ಜಿಲ್ಲೆಗಳ ನಡುವೆ ಇರುವ ಸೆಲಾ ಪಾಸ್ ಅನ್ನು ಭಾರತದ ಐಸ್ ಬಾಕ್ಸ್ ಎಂದು ಕರೆಯಲಾಗುತ್ತದೆ. ಇದು 4,170 ಮೀಟರ್ ಎತ್ತರದಲ್ಲಿದ್ದು, ಈ ಪ್ರದೇಶವು ತವಾಂಗ್ ಅನ್ನು ತೇಜ್‌ಪುರ ಮತ್ತು ಗುವಾಹಟಿಗೆ ಸಂಪರ್ಕ ಕಲ್ಪಿಸುತ್ತದೆ.
ಈ ಪ್ರದೇಶದ ಚಳಿಗಾಲದಲ್ಲಿ ತಾಪಮಾನವು ಮೈನಸ್ 15 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುತ್ತದೆ. ಹಿಮದಿಂದ ಆವೃತವಾಗಿರುವ ಸೆಲಾ ಪಾಸ್ ಪೂರ್ವ ಹಿಮಾಲಯ ಮತ್ತು ಸೆಲಾ ಸರೋವರ ಎಂದು ಕರೆಯಲ್ಪಡುವ ತವಾಂಗ್‌ನಲ್ಲಿ ಸುಂದರವಾದ ಸರೋವರಗಳ ದೃಶ್ಯಗಳನ್ನು ಕಾಣಬಹುದಾಗಿದೆ. ಇದು ಟಿಬೆಟಿಯನ್ ಬೌದ್ಧರಿಗೆ ಒಂದು ಪವಿತ್ರ ಸ್ಥಳವಾಗಿದ್ದು, ಇದರ ಆವರಣದಲ್ಲಿ 101 ಪವಿತ್ರ ಸರೋವರಗಳನ್ನು ಹೊಂದಿದೆ.
4) ಲಾಚೆನ್ ಮತ್ತು ಥಂಗು ಕಣಿವೆ: ಲಾಚೆನ್ ಮತ್ತು ಥಂಗು ಕಣಿವೆಗಳು ಉತ್ತರ ಸಿಕ್ಕಿಂನ ಅತ್ಯಂತ ಶೀತ ಪಟ್ಟಣಗಳಾಗಿದೆ. ಈ ಪ್ರದೇಶವು ಸಮುದ್ರ ಮಟ್ಟದಿಂದ 2500 ಮೀಟರ್ ಎತ್ತರದಲ್ಲಿದೆ. ಇಲ್ಲಿ ಚಳಿಗಾಲದಲ್ಲಿ ಮೈನಸ್ 10 ಡಿಗ್ರಿ ತಾಪಮಾನವನ್ನು ಕಾಣಬಹುದಾಗಿದೆ.
ಈ ಕಣಿವೆಯು ತೀಸಾ ನದಿಯ ಗಡಿಯಲ್ಲಿರುವ ಆಲ್ಪೈನ್ ಹುಲ್ಲುಗಾವಲುಗಳಿಂದ ತುಂಬಿದೆ. ಮತ್ತು ಇಲ್ಲಿ ಬರೀ ಮರದಿಂದ ನಿರ್ಮಾಣ ಮಾಡಿದ ಮಡಗಳಿದ್ದು, ಈ ದೃಶ್ಯ ಸುಂದರ ಅನುಭವವನ್ನು ನೀಡುತ್ತವೆ. ಇನ್ನು ಇಲ್ಲಿ ಬೇಸಿಗೆಯಲ್ಲಿಯೂ ತಂಪಾದ ವಾತಾವರಣವನ್ನು ಕಾಣಬಹುದಾಗಿದೆ. ಈ ವೇಳೆ ಇಲ್ಲಿನ ತಾಪಮಾನವು ಸುಮಾರು 10 ಡಿಗ್ರಿ ಸೆಂಟಿಗ್ರೇಡ್ ಆಗಿರುತ್ತದೆ.
ಬೇಸಿಗೆಯಲ್ಲಿ ನಡೆಯುವ ಯಾಕ್ ರೇಸ್‌ಗಳಿಂದ ಈ ಸ್ಥಳವು ತುಂಬಾ ಪ್ರಸಿದ್ಧಿಯಾಗಿದೆ. ಪ್ರಪಂಚದ ಅತಿ ಎತ್ತರದ ಮೋಟಾರು ರಸ್ತೆ, ಐಕಾನಿಕ್ ಮ್ಯಾಗ್ನೆಟಿಕ್ ಹಿಲ್, ವೈಡೂರ್ಯದ ಬಣ್ಣದ ಪ್ಯಾಂಗೊಂಗ್ ಸರೋವರ ಸೇರಿದಂತೆ ಇನ್ನಿತರ ಸುಂದರ ದೃಶ್ಯಗಳನ್ನು ಒಳಗೊಂಡಿರುವ ಈ ಕಣಿವೆ ಪ್ರವಾಸಿಗರಿಗೆ ಸೂಕ್ತವಾದ ಸ್ಥಳವಾಗಿದೆ. ಇನ್ನು ಚಳಿಗಾಲದಲ್ಲಿ, ಇಲ್ಲಿ ಭಾರೀ ಹಿಮಪಾತ ಆಗುತ್ತದೆ. ಆದ್ದರಿಂದ ಇಲ್ಲಿದೆ ಭೇಟಿ ನಡಲು ಭಯಸುವವರಿಗೆ ಬೇಸಿಗೆ ಸೂಕ್ತ ಸಮಯವಾಗಿದೆ.
5) ಲೇಹ್ ಲಡಾಖ್: ಲೇಹ್ ಲಡಾಖ್ ಭಾರತದ ಉತ್ತರದ ಭಾಗದ ಹಿಮಾಲಯ ಪರ್ವತ ಶ್ರೇಣಿಗಳ ಸಮೀಪದಲ್ಲಿದೆ. ಇದು ಸಮುದ್ರ ಮಟ್ಟದಿಂದ 6,000 ಮೀಟರ್ ಎತ್ತರದಲ್ಲಿದ್ದು, ಈ ಪ್ರದೇಶವು ಭಾರತದ ಅತ್ಯಂತ ತಂಪಾದ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ತಾಪಮಾನವು ಮೈನಸ್ 12 ಡಿಗ್ರಿ ಸೆಂಟಿಗ್ರೇಡ್‌ನಿಂದ ಮೈನಸ್ 2 ಡಿಗ್ರಿ ಸೆಲ್ಸಿಯಸ್‌ವರೆಗೆ ಬದಲಾಗುತ್ತಿರುತ್ತದೆ.
ಲಡಾಖ್‌ನಲ್ಲಿರುವ ಲೇಹ್ ಪಟ್ಟಣವು ವಿಶಿಷ್ಟವಾದ ಭೂದೃಶ್ಯಗಳು ಮತ್ತು ಸುಂದರ ವಿವಿಧ ಸುಂದರ ಆಕರ್ಷಣಿಯ ಸ್ಥಳಗಳನ್ನು ಒಳಗೊಂಡಿದೆ. ಟಿಬೆಟಿಯನ್ ಬೌದ್ಧ ಮಠಗಳು ಮತ್ತು ಸ್ತೂಪಗಳು ಮತ್ತು ಮಂತ್ರಮುಗ್ಧಗೊಳಿಸುವ ಸ್ಥಳಗಳಿಗೆ ತವರು ಆಗಿದೆ. ಈ ಪ್ರದೇದಲ್ಲಿ ಮೈನಸ್ 35 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಕಡಿಮೆ ತಾಪಮಾನದ ಕಾರಣದಿಂದಾಗಿ ಚಳಿಗಾಲದಲ್ಲಿ ಭಾರೀ ಹಿಮಪಾತ ಸಂಭವಿಸುತ್ತಲೇ ಇರುತ್ತದೆ.
6) ಮುನ್ಸಿಯಾರಿ: ಭಾರತದ ಅತ್ಯಂತ ತಂಪಾದ ಪ್ರವಾಸಿ ತಾಣಗಳಲ್ಲಿ ಒಂದಾದ ಮುನ್ಸಿಯಾರಿ ಉತ್ತರಾಖಂಡ್‌ನ ಪಿಥೋರಗಢ ಜಿಲ್ಲೆಯಲ್ಲಿರುವ ಗಿರಿಧಾಮವಾಗಿದೆ. ಇದು ಸಮುದ್ರ ಮಟ್ಟದಿಂದ 2500 ಮೀಟರ್ ಎತ್ತರದಲ್ಲಿದೆ. ಇಲ್ಲಿನ ವಾತಾವರಣ ಸಾಮಾನ್ಯವಾಗಿ ವರ್ಷವಿಡೀ ತಂಪಾಗಿರುತ್ತದೆ. ಆದರೆ ಚಳಿಗಾಲದಲ್ಲಿ ತಾಪಮಾನವು ಮೈನಸ್ 10 ಡಿಗ್ರಿ ಸೆಂಟಿಗ್ರೇಡ್‌ಗೆ ಇಳಿಯುತ್ತದೆ. ಈ ಸ್ಥಳವನ್ನು "ಲಿಟಲ್ ಕಾಶ್ಮೀರ" ಅಂತಲೂ ಕರೆಯಲಾಗುತ್ತದೆ.
ಈ ಸ್ಥಳವು ಐದು ಶಿಖರಗಳ ಸಮೂಹವಾಗಿರುವ ಪಂಚಚುಲಿ ಶಿಖರಗಳ ಅಪಾರವಾದ ಟ್ರೆಕ್ಕಿಂಗ್ ಟ್ರೇಲ್ಸ್ ಮತ್ತು ಮೋಡಿ ಮಾಡುವ ಸುಂದರ ಸ್ಥಳಗಳನ್ನು ಒಳಗೊಂಡಿದೆ. "ಜೋಹರ್ ಕಣಿವೆಗೆ ಗೇಟ್‌ವೇ" ಎಂದು ಕರೆಯಲ್ಪಡುವ ಮುನಿಸಿಯಾರಿಯು ನಮ್ಲಿಕ್, ರಲಂ ಮತ್ತು ಮಿಲಾಮ್ ಹಿಮನದಿ, ಕುಮಾವೂನ್ ಹಿಮಾಲಯದ ಇತರ ಭಾಗಗಳಿಗೆ ಚಾರಣಕ್ಕೆ ತೆರಳಲು ಮೂಲ ಆಧಾರವಾಗಿದೆ.
7) ಸ್ಪಿಟಿ ಕಣಿವೆ: ಶೀತಲ ಮರುಭೂಮಿ ಪರ್ವತ ಸ್ಪಿತಿ ಕಣಿವೆ ಹಿಮಾಚಲ ಪ್ರದೇಶದಲ್ಲಿದೆ. ಇಲ್ಲಿನ ಸಸ್ಯವರ್ಗ ಮತ್ತು ಸುಂದರ ಭೂದೃಶ್ಯಗಳು ಟಿಬೆಟ್‌ನಂತೆಯೇ ಇರುತ್ತದೆ. ಆದ್ದರಿಂದ ಇದನ್ನು "ಪುಟ್ಟ ಟಿಬೆಟ್" ಅಂತಲೂ ಕರೆಯಲಾಗುತ್ತದೆ.
ಸ್ಪಿಟಿಯಲ್ಲಿ ತಾಪಮಾನ ಪ್ರಮಾಣ ಚಳಿಗಾಲದಲ್ಲಿ ಮೈನಸ್ 30 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಕಡಿಮೆಯಾದರೆ, ಬೇಸಿಗೆಯಲ್ಲಿ ಉಷ್ಣತೆಯು ಏರುತ್ತದೆ. ಇದು ಸಮುದ್ರ ಮಟ್ಟದಿಂದ 2,745 ಮೀಟರ್‌ಗಳಷ್ಟು ಎತ್ತರದಲ್ಲಿದ್ದು, ಲಡಾಖ್‌ನ ಗಡಿಯಾಗಿದೆ.
ಇದು ಹಲವಾರು ಬೌದ್ಧ ಮಠಗಳು ಮತ್ತು ರಮಣೀಯ ನೈಸರ್ಗಿಕ ತಾಣಗಳಿಗೆ ನೆಲೆಯಾಗಿದೆ. ಇಲ್ಲಿನ ಅದ್ಭುತ ಭೂದೃಶ್ಯವು ಕಣಿವೆಗಳು ನೋಡುಗರನ್ನು ತನ್ನತ್ತ ಸೆಳೆದೇಬಿಡುತ್ತವೆ.
8) ಸೋನಾಮಾರ್ಗ್: ಸೋನಾಮಾರ್ಗ್ ಭಾರತದ ಜಮ್ಮು ಮತ್ತು ಕಾಶ್ಮೀರದ ಗಂಡರ್‌ಬಾಲ್ ಜಿಲ್ಲೆಯಲ್ಲಿದ್ದು, ಇದು ಒಂದು ಜನಪ್ರಿಯ ಗಿರಿಧಾಮವಾಗಿದೆ. ಸೋನಾಮಾರ್ಗ್ ಎಂದರೆ "ಚಿನ್ನದ ಹುಲ್ಲುಗಾವಲು". ಇದು ಲಡಾಕ್‌ಗೆ ಹೋಗುವ ಮಾರ್ಗದಲ್ಲಿದೆ.
ಇದು ಸಮುದ್ರ ಮಟ್ಟದಿಂದ 2,800 ಮೀಟರ್ ಎತ್ತರದಲ್ಲಿದೆ. ಇಲ್ಲಿ ತಾಪಮಾನವು ಮೈನಸ್ 6 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಬಹುದು. ಚಳಿಗಾಲದಲ್ಲಿ ಈ ತಂಪಾದ ಸ್ಥಳದಲ್ಲಿ ಭಾರೀ ಹಿಮಪಾತವನ್ನು ಕಾಣಬಹುದು. ಆದ್ದರಿಂದ ಬೇಸಿಗೆಯು ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
9) ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಶ್ರೀನಗರ ನಗರವು ಸಮುದ್ರ ಮಟ್ಟದಿಂದ 1585 ಮೀಟರ್ ಎತ್ತರದಲ್ಲಿದ್ದು, ಇದು ಝೇಲಂ ನದಿ ದಡದಲ್ಲಿ ಕಂಡುಬರುತ್ತದೆ. ಚಳಿಗಾಲದಲ್ಲಿ ಇಲ್ಲಿ ಉಷ್ಣತೆಯು ಮೈನಸ್ 3 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ.
ಈ ಪ್ರದೇಶವು ಸುಂದರ ಸರೋವರಗಳು, ಉದ್ಯಾನಗಳು, ಹೌಸ್‌ಬೋಟ್‌ಗಳು ಮತ್ತು ಆಹಾರ ಮತ್ತು ಸಂಸ್ಕೃತಿಗೆ ಜನಪ್ರಿಯವಾಗಿದೆ. ವಿಶೇಷವಾಗಿ ಸುಂದರವಾದ ದಾಲ್ ಸರೋವರವನ್ನು ಇಲ್ಲಿ ಕಾಣಬಹುದಾಗಿದೆ. "ಹೆವೆನ್ ಆನ್ ಅರ್ಥ್" ಎಂದು ಕರೆಯಲ್ಪಡುವ ಈ ಸ್ಥಳವು ಮೊಘಲ್ ಯುಗದ ಉದ್ಯಾನಗಳಾದ ಶಾಲಿಮಾರ್ ಬಾಗ್, ಚಶ್ಮ್-ಇ-ಶಾಹಿ ಮತ್ತು ನಿಶಾತ್ ಬಾಗ್‌ಗಳಿಗೆ ನೆಲೆಯಾಗಿದೆ.
10) ರೋಹ್ತಾಂಗ್ ಪಾಸ್: ಮನಾಲಿಯಿಂದ 51 ಕಿಲೋ ಮೀಟರ್ ದೂರದಲ್ಲಿರುವ ರೋಹ್ಟಾಂಗ್ ರೋಹ್ಟಾಂಗ್ ಪಾಸ್ ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿಟಿ ಕಣಿವೆಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ.
'ರೋಹ್ತಾಂಗ್' ಎಂದರೆ 'ಶವಗಳ ನೆಲ' ಎಂದರ್ಥ. ಏಕೆಂದರೆ ಇದನ್ನು ದಾಟುವಾಗ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸ್ಥಳವು ಸಮುದ್ರ ಮಟ್ಟದಿಂದ 3,980 ಮೀಟರ್ ಎತ್ತರದಲ್ಲಿದೆ. ಈ ಮಾರ್ಗದಲ್ಲಿ ಹಿಮಾಲಯದ ಶಿಖರಗಳು, ಹಿಮನದಿಗಳು, ಲಾಹೌಲ್ ಕಣಿವೆ ಮತ್ತು ಚಂದ್ರ ನದಿಯ ಸುಂದರ ದೃಶ್ಯಗಳನ್ನು ಸವಿಯಬಹುದಾಗಿದೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications