IRCTCಯಿಂದ ಲೇಹ್ ಲಡಾಖ್‌ಗೆ ಬೇಸಿಗೆ ಪ್ಯಾಕೇಜ್ ಟೂರ್, ಇಲ್ಲಿದೆ ಮಾಹಿತಿ
ಭಾರತದ ಜನಪ್ರಿಯ ಪ್ರವಾಸಿ ತಾಣವಾಗಿರುವ ಲೇಹ್- ಲಡಾಖ್ ಪ್ರತಿ ವರ್ಷ ನೂರಾರು ಸಾವಿರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಂತಹವರಿಗಾಗಿ ವಿಶೇಷವಾದ IRCTC ಪ್ರವಾಸದ ಪ್ಯಾಕೇಜ್ ಅನ್ನು ತಂದಿದ್ದು, ಈ ಸುಂದರ ಸ್ಥಳವನ್ನು ನೋಡಲು ಪ್ರವಾಸಿಗರಿಗೆ ಅವಕಾಶ ಒದಗಿಸುತ್ತಿದೆ.
ನವದೆಹಲಿ, ಫೆಬ್ರವರಿ 7: ಚಳಿಗಾಲ ಮುಗಿದು ಬೇಸಿಗೆ ಹತ್ತಿರವಾಗುತ್ತಿದ್ದಂತೆ IRCTC ಪ್ರವಾಸಿಗರಿಗೆ ಲಡಾಖ್ ಪ್ಯಾಕೇಜ್ ಸೇರಿದಂತೆ ವಿವಿಧ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಿದೆ. ಇದು ಪ್ರಯಾಣಿಕರಿಗೆ ವಿಶೇಷವಾದ ಪ್ರಯಾಣ ಅನುಭವ ನೀಡುತ್ತದೆ.
ಭಾರತದ ಜನಪ್ರಿಯ ಪ್ರವಾಸಿ ತಾಣವಾಗಿರುವ ಲೇಹ್- ಲಡಾಖ್ ಪ್ರತಿ ವರ್ಷ ನೂರಾರು ಸಾವಿರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಂತಹವರಿಗಾಗಿ ವಿಶೇಷವಾದ IRCTC ಪ್ರವಾಸದ ಪ್ಯಾಕೇಜ್ ಅನ್ನು ತಂದಿದ್ದು, ಈ ಸುಂದರ ಸ್ಥಳವನ್ನು ನೋಡಲು ಪ್ರವಾಸಿಗರಿಗೆ ಅವಕಾಶ ಒದಗಿಸುತ್ತಿದೆ.
ಲೇಹ್ ಲಡಾಖ್‌ನ ಪ್ರವಾಸ 6ನೇ ಜೂನ್, 20ನೇ ಜೂನ್, 27ನೇ ಜೂನ್, 3ನೇ ಜುಲೈ, 10ನೇ ಜುಲೈ, 17ನೇ ಜುಲೈ, ಮತ್ತು 24ನೇ ಜುಲೈನಲ್ಲಿ ಅಂತ್ಯವಾಗುತ್ತದೆ. ಮುಂಬೈನಿಂದ ಪ್ರಾರಂಭವಾಗುವ ಈ ಪ್ಯಾಕೇಜ್ ಲೇಹ್, ಶಾಮ್ ವ್ಯಾಲಿ, ನುಬ್ರಾ, ಟರ್ಟುಕ್ ಮತ್ತು ಪ್ಯಾಂಗಾಂಗ್‌ನಂತಹ ಹಲವಾರು ಸುಂದರ ಸ್ಥಳಗಳನ್ನು ಪ್ರವಾಸಿಗರು ನೋಡಬಹುದಾಗಿದೆ.
ಐಆರ್‌ಸಿಟಿಸಿ ಪ್ರವಾಸವು ಮುಂಬೈನಿಂದ ಲೇಹ್‌ಗೆ ವಿಮಾನದಿಂದ ಪ್ರಾರಂಭವಾಗುತ್ತದೆ. ಪ್ರವಾಸದ ಉದ್ದಕ್ಕೂ ರಾತ್ರಿ ತಂಗಲು ಹೋಟೆಲ್ ಸೌಕರ್ಯಗಳು, ಹಾಗೆಯೇ ಉಪಹಾರ, ಊಟ ಮತ್ತು ರಾತ್ರಿಯ ಊಟವನ್ನು ಪ್ಯಾಕೇಜ್ ಒಳಗೊಂಡಿದೆ. ಇದು ನಾನ್-ಎಸಿ ಬಸ್‌ನೊಂದಿಗೆ ಮುಂದುವರಿಯುತ್ತದೆ. ಆದ್ದರಿಂದ ಪ್ರವಾಸಿಗರು ಸುಖಕರ ಪ್ರಯಾಣ ಮಾಡಬಹುದು.
ಐಆರ್‌ಸಿಟಿಸಿ ಈಗ ಪರಿಚಯಿಸಿರುವ ಲಡಾಖ್ ಪ್ಯಾಕೇಜ್‌ನಲ್ಲಿ 7 ದಿನಗಳು ಮತ್ತು 6 ರಾತ್ರಿಗಳಿಗೆ ಸಾರಿಗೆ, ವಸತಿ ಮತ್ತು ಊಟವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಈ ಪ್ಯಾಕೇಜ್‌ನ ಬೆಲೆ 57,900 ರೂಪಾಯಿ ಆಗಿರುತ್ತದೆ. ನೀವು ಇಬ್ಬರೊಂದಿಗೆ ಪ್ರಯಾಣಿಸುತ್ತಿದ್ದರೆ 52,800 ರೂಪಾಯಿ ತಗಲುತ್ತದೆ. ಈ ಪ್ರವಾಸಕ್ಕೆ ಮೂವರೊಂದಿಗೆ ಪ್ರಯಾಣಿಸುತ್ತಿದ್ದರೆ 50,900 ರೂಪಾಯಿ ತಗಲುತ್ತದೆ. ಹಾಗಾಗಿ ಒಟ್ಟಾಗಿ ಸ್ನೇಹಿತರು ಇಲ್ಲವೆ ಕುಟುಂಬಕ್ಕೆ ಇದು ಸೂಕ್ತ ಪ್ರವಾಸಿ ಪ್ಯಾಕೇಜ್ ಆಗಿದೆ.

ಏಕಾಂಗಿ, ಇಲ್ಲವೇ ಕುಟುಂಬದೊಂದಿಗೆ ಹೋಗಬಹುದು
ಐಆರ್‌ಸಿಟಿಸಿಯ ಈ ಲಡಾಖ್ ಪ್ಯಾಕೇಜ್ ಅತ್ಯದ್ಭುತ ಪ್ರದೇಶವನ್ನು ಅನ್ವೇಷಿಸಲು ಮತ್ತು ಅದರ ನೈಸರ್ಗಿಕ ಸೌಂದರ್ಯ, ಸಂಸ್ಕೃತಿಯನ್ನು ತಿಳಿಯಲು ಅದ್ಭುತ ಮಾರ್ಗವಾಗಿದೆ. ನೀವು ಏಕಾಂಗಿಯಾಗಿ ಅಥವಾ ನಿಮ್ಮ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದರೂ ಈ ಪ್ಯಾಕೇಜ್‌ನೊಂದಿಗೆ ಬಜೆಟ್‌ನಲ್ಲಿ ಲೇಹ್-ಲಡಾಖ್ ಅನ್ನು ಅನ್ವೇಷಿಸಬಹುದು.

ವಸತಿಗಳು, ಊಟ ಮತ್ತು ಸಾರಿಗೆ ವ್ಯವಸ್ಥೆ
ಬೇಸಿಗೆಯಲ್ಲಿ ಈ ಸುಂದರ ಪ್ರದೇಶಕ್ಕೆ ಭೇಟಿ ನೀಡಲು ಬಯಸುವವರಿಗೆ ಐಆರ್‌ಸಿಟಿಸಿಯ ಲಡಾಖ್ ಪ್ಯಾಕೇಜ್ ಸೂಕ್ತವಾಗಿದೆ. ವಿಮಾನಗಳು, ಹೋಟೆಲ್ ವಸತಿಗಳು, ಊಟ ಮತ್ತು ಸಾರಿಗೆ ವ್ಯವಸ್ಥೆ ಪ್ರಯಾಣಿಕರಿಗೆ ಸಿಗಲಿದೆ. ಈ ಮೂಲಕ ಪ್ರವಾಸಿಗರು ಅದ್ಭುತ ತಮ್ಮ ರಜಾದಿನವನ್ನು ಆನಂದಿಸಬಹುದು. ಇದರೊಂದಿಗೆ ಇತ್ತೀಚೆಗೆ ಐಆರ್‌ಸಿಟಿಯು ದೇಶದಾದ್ಯಂತ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಐಆರ್‌ಸಿಟಿಸಿಯು ಪ್ರಯಾಣಿಕರು ತಾವು ರೈಲಿನಲ್ಲಿ ಪ್ರಯಾಣಿಸುವಾಗ ವಾಟ್ಸಾಪ್ ಮೂಲಕವೇ ಈಗ ತಮಗೆ ಇಚ್ಚಿಸಿದ ಖಾದ್ಯವನ್ನು ತರಿಸಿಕೊಂಡು ಸವಿಯಬಹುದಾಗಿದೆ.

ಯುವಜನರು, ಪ್ರೇಮಿಗಳು ನವ ದಂಪತಿಗೆ ಪ್ಯಾಕೇಜ್
ಐಆರ್‌ಸಿಟಿಸಿ ಭಾರತವನ್ನು ನೋಡಲು ಬಯಸುವ ಬಜೆಟ್‌ಸ್ನೇಹಿ ಪ್ರವಾಸಿಗರಿಗೆ ಪ್ರವಾಸ ಪ್ಯಾಕೇಜ್‌ಗಳನ್ನು ಒದಗಿಸುತ್ತಿದೆ. ಗೋವಾಕ್ಕೆ 5 ದಿನದ ವ್ಯಾಲೆಂಟೈನ್ಸ್ ಡೇ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿಯ ಪರಿಚಯಿಸಿದೆ. ಗೋವಾ ಯುವಜನರು ಮತ್ತು ನವ ದಂಪತಿಗೆ ಇಷ್ಟವಾದ ಪವಾಸಿ ತಾಣವಾಗಿದೆ. ಇದು ಪ್ರೇಮಿಗಳು ಹಾಗೂ ನವ ದಂಪತಿಗಳು ತಮ್ಮ ದಿನವನ್ನು ಕಳೆಯಲು ಸೂಕ್ತವಾದ ಸ್ಥಳವಾಗಿದೆ. ಈ ಪ್ರವಾಸದ ಪ್ಯಾಕೇಜ್ 4 ರಾತ್ರಿಗಳು ಮತ್ತು 5 ದಿನಗಳವರೆಗೆ ಇರುತ್ತದೆ. ಜೊತೆಗೆ ರೌಂಡ್ ಟ್ರಿಪ್ ಫ್ಲೈಟ್ ಅನ್ನು ಒಳಗೊಂಡಿದೆ. ಪ್ರವಾಸದ ಪ್ಯಾಕೇಜ್ ಫೆಬ್ರವರಿ 11ರಂದು ಪ್ರಾರಂಭವಾಗಿ ಫೆಬ್ರವರಿ 15 ರಂದು ಕೊನೆಗೊಳ್ಳಲಿದೆ.

ಪ್ರತಿ ವ್ಯಕ್ತಿಗೆ ದರ 27,875 ರೂಪಾಯಿ ದರ
ಪ್ರವಾಸದ ಪ್ಯಾಕೇಜ್‌ನಲ್ಲಿ ಸ್ಥಳೀಯ ಮಾರ್ಗದರ್ಶಿಗಳು ಮತ್ತು ಕ್ಯಾಬ್‌ಗಳ ಜೊತೆಗೆ ಉಪಹಾರ ಮತ್ತು ರಾತ್ರಿಯ ಊಟವನ್ನು ಒಳಗೊಂಡಿರುತ್ತದೆ. ಉತ್ತರ ಮತ್ತು ದಕ್ಷಿಣ ಗೋವಾ ಎರಡನ್ನೂ ಸುತ್ತಿ ನೋಡುವ ಅವಕಾಶವನ್ನು ಒಳಗೊಂಡಿದೆ. ಅಗುಡಾ ಫೋರ್ಟ್, ಸ್ಯಾಂಕ್ವೇರಿಯಂ ಬೀಚ್, ಕ್ಯಾಂಡೋಲಿಮ್ ಬೀಚ್, ಬಾಘಾ ಬೀಚ್, ಬೆಸಿಲಿಕಾ ಆಫ್ ಬೊಮ್ ಜೀಸಸ್ ಚರ್ಚ್, ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್, ಮಿರಾಮಾರ್ ಬೀಚ್ ಮತ್ತು ಮಾಂಡೋವಿ ರಿವರ್ ಕ್ರೂಸ್ ಇವೇ ನೋಡಬಹುದಾದ ಕೆಲವು ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದೆ. ಪ್ರವಾಸದ ಪ್ಯಾಕೇಜ್‌ನ ಬೆಲೆ ಪ್ರತಿ ವ್ಯಕ್ತಿಗೆ ದರ 27,875 ರೂಪಾಯಿ ಆಗಿದೆ. ಆದರೂ ಎಷ್ಟು ಜನರು ಒಟ್ಟಿಗೆ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಇದು ಬದಲಾಗಬಹುದು.












Click it and Unblock the Notifications