Sports competition of TTD employees: ಟಿಟಿಡಿ ನೌಕರರ ಕ್ರೀಡಾ ಸ್ಪರ್ಧೆ: ಒಂದೇ ದಿನ ತಿಮ್ಮಪ್ಪನ ಹುಂಡಿಗೆ ಅಪಾರ ಹಣ, ವಿಶೇಷ ಕಾ
ತಿರುಪತಿ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ಮತ್ತೊಮ್ಮೆ ದಾಖಲೆಯ ಹಣ ಹರಿದು ಬಂದಿದೆ. ಸ್ವಾಮಿಯ ಹುಂಡಿಯಲ್ಲಿ ಮತ್ತೆ ಹಣದ ಸುರಿಮಳೆಯಾಗಿದೆ. ಬಹಳ ದಿನಗಳ ನಂತರ ಸ್ವಾಮಿಯ ದೈನಂದಿನ ಆದಾಯ 5 ಕೋಟಿ ರೂಪಾಯಿಯ ಗಡಿ ತಲುಪಿದೆ. ಶ್ರೀವಾರಿ ಹುಂಡಿಯಲ್ಲಿ ಭಾನುವಾರ ಒಂದೇ ದಿನ 5.09 ಕೋಟಿ ಹಣ ಸಂಗ್ರಹವಾಗಿದೆ ಎಂದು ಟಿಟಿಡಿ ತಿಳಿಸಿದೆ.
ಭಾನುವಾರ 76, 577 ಭಕ್ತರು ತಿರುಮಲ ಶ್ರೀಗಳ ದರ್ಶನ ಪಡೆದರು. 23,656 ಮಂದಿ ಹರಕೆಯನ್ನು ತೀರಿಸಿ ಪೂಜೆ ಸಲ್ಲಿಸಿದರು. ಸರ್ವ ದರ್ಶನಂ ಟೋಕನ್ ಇಲ್ಲದೆ ಭಕ್ತರಿಗೆ 10 ಗಂಟೆ ಕಾದ ಬಳಿಕ ತಿಮ್ಮಪ್ಪನ ದರ್ಶನವಾಗುತ್ತಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಬೆಟ್ಟದಲ್ಲಿ ಭಕ್ತರ ದಂಡು ಹರಿದು ಬಂದಿತ್ತು. ಇದರಿಂದಾಗಿ ಭಾನುವಾರ ಅಪಾರ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಭಾನುವಾರ ಒಂದೇ ದಿನ 5.09 ಕೋಟಿ ಹಣ ಸಂಗ್ರಹವಾಗಿದೆ. ಇದು ಈ ಫೆಬ್ರವರಿ ತಿಂಗಳಲ್ಲಿ ಎರಡನೇ ಬಾರಿಗೆ ಸಂಗ್ರಹವಾದ ಹಣವಾಗಿದೆ.

ನೀವೇನಾದರೂ ಮಾರ್ಚ್ ತಿಂಗಳಲ್ಲಿ ತಿರುಮಲಕ್ಕೆ ಭೇಟಿ ನೀಡಬೇಕು ಅಂದುಕೊಂಡಿದ್ದರೆ ವಿಶೇಷ ದಿನ ಹಾಗೂ ಕಾರ್ಯಕ್ರಮಗಳಿಗನುಸಾರ ನಿಮ್ಮ ಟಿಕೆಕ್ ಹಾಗೂ ವಾಸ್ತವ್ಯ ಕೊಠಡಿಗಳನ್ನು ಬುಕ್ ಮಾಡಿಕೊಳ್ಳಬಹುದು. ಹಾಗಾದರೆ ಮಾರ್ಚ್ ತಿಂಗಳಲ್ಲಿ ಯಾವಾಗ ವಿಶೇಷ ದಿನಗಳು ಬರುತ್ತವೆ ಎಂದು ತಿಳಿಯೋಣ.
ಮಾರ್ಚ್ ತಿಂಗಳಲ್ಲಿ ನಡೆಯುವ ಕಾರ್ಯಕ್ರಮಗಳು
ಮಾರ್ಚ್ ತಿಂಗಳಲ್ಲಿ ತಿರುಮಲದಲ್ಲಿ ನಡೆಯಲಿರುವ ವಿಶೇಷ ಉತ್ಸವಗಳು ಮತ್ತು ಇತರ ಕಾರ್ಯಕ್ರಮಗಳ ವಿವರಗಳು ಇಲ್ಲಿದೆ. ಮಾರ್ಚ್ 3 ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಹಾಗೆಯೇ ಮಾರ್ಚ್ 6 ಮತ್ತು 20 ಸರ್ವ ಏಕಾದಶಿ, ಮಾರ್ಚ್ 8 ಮಹಾಶಿವರಾತ್ರಿಯಂದು ಜಾಗರಣೆ ವಿಶೇಷ ಪೂಜೆಗಳು ನಡೆಯಲಿವೆ.
ಇನ್ನೂ ಮಾ.20ರಿಂದ 24ರವರೆಗೆ ಶ್ರೀವಾರಿ ತೆಪ್ಪೋತ್ಸವ, 25ರಂದು ತುಂಬೂರು ತೀರ್ಥ ಮುಕ್ಕೋಟಿ ಹಾಗೂ ಶ್ರೀ ಲಕ್ಷ್ಮೀ ಜಯಂತಿ ಕಾರ್ಯಕ್ರಮಗಳು ನಡೆಯಲಿವೆ. ತೆಪ್ಪೋತ್ಸವದ ಮೊದಲ ದಿನ ಸೀತಾಲಕ್ಷ್ಮಣ ಆಂಜನೇಯಸ್ವಾಮಿ ಅವರ ಅವತಾರದಲ್ಲಿ ಶ್ರೀರಾಮಚಂದ್ರಮೂರ್ತಿ ಸ್ವಾಮಿಗಳು ಮೂರು ಸುತ್ತು ಪುಷ್ಕರಿಣಿಯನ್ನು ತೆಪ್ಪದಲ್ಲಿ ಪ್ರದರ್ಶಿಸಿ ಭಕ್ತರನ್ನು ರಂಜಿಸಲಿದ್ದಾರೆ. ಎರಡನೇ ದಿನ ರುಕ್ಮಿಣಿ ಸಮೇತ ಶ್ರೀಕೃಷ್ಣ ಸ್ವಾಮಿ, ಕೊನೆಯ ಮೂರು ದಿನ ಶ್ರೀಭೂ ಸಮೇತ ಮಲಯಪ್ಪಸ್ವಾಮಿ ಪುಷ್ಕರಿಣಿಯಲ್ಲಿ ಪಾದಯಾತ್ರೆ ನಡೆಸಿ ಭಕ್ತರಿಗೆ ದರ್ಶನ ನೀಡುವರು.
ಮಾರ್ಚ್ 1 ರಿಂದ ಟಿಟಿಡಿ ನೌಕರರ ವಾರ್ಷಿಕ ಕ್ರೀಡಾ ಸ್ಪರ್ಧೆಗಳು
ಟಿಟಿಡಿ ನೌಕರರ ವಾರ್ಷಿಕ ಕ್ರೀಡಾ ಸ್ಪರ್ಧೆಯು ಮಾರ್ಚ್ 1 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ತಿರುಪತಿಯ ಆಡಳಿತ ಕಟ್ಟಡದಲ್ಲಿರುವ ಪರೇಡ್ ಮೈದಾನದಲ್ಲಿ ಪ್ರಾರಂಭವಾಗುತ್ತದೆ. ಈ ಸ್ಪರ್ಧೆಗಳು ಮಾರ್ಚ್ 18 ರವರೆಗೆ ನಡೆಯಲಿದೆ. ಕ್ರೀಡೆಗಳಲ್ಲಿ ಭಾಗವಹಿಸಲು ನೋಂದಾಯಿಸಿದ ಉದ್ಯೋಗಿಗಳ ಹೆಸರುಗಳು, ತಂಡಗಳು, ಸ್ಪರ್ಧೆಯ ವೇಳಾಪಟ್ಟಿ ಇತ್ಯಾದಿಯನ್ನು ನೀಡುತ್ತವೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಹಗ್ಗಜಗ್ಗಾಟ, ಚೆಸ್, ವಾಲಿಬಾಲ್, ಕೇರಂಮ್, ಬಾಲ್ ಬ್ಯಾಡ್ಮಿಂಟನ್, ಫುಟ್ಬಾಲ್, ಟೇಬಲ್ ಟೆನ್ನಿಸ್, ಕ್ರಿಕೆಟ್, ಶಟಲ್, ಟೆನ್ನಿಸ್ ಮತ್ತಿತರ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಟಿಟಿಡಿ ಕಲ್ಯಾಣ ಇಲಾಖೆ ಉಪ ಇಒ ಅವರು ಸೌಹಾರ್ದ ಕ್ರೀಡಾಕೂಟದ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.












Click it and Unblock the Notifications