Shivamogga Airport: ಶಿವಮೊಗ್ಗದಿಂದ ಹಾರಾಟ ನಡೆಸುವ ವಿಮಾನಗಳು, ವೇಳಾಪಟ್ಟಿ

ಶಿವಮೊಗ್ಗ, ಅಕ್ಟೋಬರ್ 13: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿರುವ ವಿಮಾನ ನಿಲ್ದಾಣದಲ್ಲಿ ಶಿವಮೊಗ್ಗವೂ ಒಂದು. ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದಲ್ಲಿರುವ ವಿಮಾನ ನಿಲ್ದಾಣವನ್ನು 27.02.2023ರಂದು ಲೋಕಾರ್ಪಣೆ ಮಾಡಿದ್ದರು. ಇಂಡಿಗೋ ವಿಮಾನಯಾನ ಸಂಸ್ಥೆ 31.08.2023ರಿಂದ ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ಮೊದಲು ವಿಮಾನ ಸೇವೆಯನ್ನು ಆರಂಭಿಸಿತು. ಸದ್ಯ ವಿವಿಧ ನಗರಗಳಿಗೆ ಮಲೆನಾಡ ಹೆಬ್ಭಾಗಿಲು ಶಿವಮೊಗ್ಗದಿಂದ ವಿಮಾನ ಸೇವೆ ಇದೆ.

ಕರ್ನಾಟಕ ಸರ್ಕಾರವೇ ನಿರ್ವಹಣೆ ಮಾಡುತ್ತಿರುವ ರಾಜ್ಯದ ಮೊದಲ ವಿಮಾನ ನಿಲ್ದಾಣ ಶಿವಮೊಗ್ಗ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆ ನೋಡಿಕೊಳ್ಳುತ್ತದೆ. ನಿಗಮ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ನಿಯೋಜನೆ ಮಾಡಿದೆ.

Shivamogga Airport Flight Schedule Timings And Information

ಅಕ್ಟೋಬರ್ 10ರಂದು ಶಿವಮೊಗ್ಗ-ಹೈದರಾಬಾದ್, ಶಿವಮೊಗ್ಗ-ಚೆನ್ನೈ ಮಾರ್ಗದ ವಿಮಾನ ಸೇವೆಯನ್ನು ಸ್ಪೈಸ್‌ ಜೆಟ್ ಆರಂಭಿಸಿದೆ. ಈ ಮೂಲಕ ಶಿವಮೊಗ್ಗದಿಂದ ಸದ್ಯ ಬೆಂಗಳೂರು, ಹೈದರಾಬಾದ್, ತಿರುಪತಿ, ಗೋವಾಕ್ಕೆ ವಿಮಾನ ಸೇವೆ ಇದೆ. ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನದ ಲ್ಯಾಂಡಿಂಗ್ ಸೌಲಭ್ಯ ಉದ್ಘಾಟನೆಯಾದರೆ ಇನ್ನಷ್ಟು ವಿಮಾನಗಳು ನಗರಕ್ಕೆ ಆಗಮಿಸಲಿವೆ ಎಂದು ನಿರೀಕ್ಷೆ ಮಾಡಲಾಗಿದೆ.

ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಿಗೆ ಅನುಕೂಲವಾಗುವಂತೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕನಸಾಗಿತ್ತು. ಅವರು 2019ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಇದ್ದ ಅಡೆತಡೆ ನಿವಾರಣೆ ಮಾಡಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ಯೋಜನೆಗೆ ಚಾಲನೆ ನೀಡಿದ್ದಾರೆ.

ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದಲ್ಲಿರುವ ವಿಮಾನ ನಿಲ್ದಾಣ ರಾಜ್ಯದ 3ನೇ ಉದ್ದದ ರನ್‌ವೇಯನ್ನು ಹೊಂದಿದೆ. ಏರ್ ಬಸ್ ಮಾದರಿ ವಿಮಾನವನ್ನು ಸಹ ಇಳಿಸಲು ಅನುಕೂಲವಾಗುವಂತೆ ರನ್ ವೇ ವಿನ್ಯಾಸಗೊಳಿಸಲಾಗಿದೆ. ಸುಮಾರು 662.38 ಎಕರೆ ಪ್ರದೇಶದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಹವಾಮಾನ ವೈಪರೀತ್ಯ ಮತ್ತು ರಾತ್ರಿ ವೇಳೆಯೂ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಾಗುವಂತೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.

ಶಿವಮೊಗ್ಗದಿಂದ ಹಾರಾಟ ನಡೆಸುವ ವಿಮಾನ, ವೇಳಾಪಟ್ಟಿ

* ಸ್ಟಾರ್ ಏರ್. ಹೈದರಾಬಾದ್-ಶಿವಮೊಗ್ಗ ವಿಮಾನ. ಹೈದರಾಬಾದ್‌ನಿಂದ 9.30ಕ್ಕೆ ಹೊರಟು, 10.50ಕ್ಕೆ ಶಿವಮೊಗ್ಗಕ್ಕೆ ಆಗಮನ, ಶಿವಮೊಗ್ಗದಿಂದ ನಿರ್ಗಮನ ಸಂಜೆ 5.10.

* ಸ್ಟಾರ್‌ ಏರ್. ತಿರುಪತಿ-ಶಿವಮೊಗ್ಗ. ಮಧ್ಯಾಹ್ನ 1 ಗಂಟೆಗೆ ತಿರುಪತಿಯಿಂದ ಹೊರಟು, 2 ಗಂಟೆಗೆ ಶಿವಮೊಗ್ಗಕ್ಕೆ ಆಗಮನ.

* ಸ್ಟಾರ್ ಏರ್. ಗೋವಾ-ಶಿವಮೊಗ್ಗ. ಮಧ್ಯಾಹ್ನ 3.50ಕ್ಕೆ ಗೋವಾದಿಂದ ಹೊರಟು, ಸಂಜೆ 4.40ಕ್ಕೆ ಶಿವಮೊಗ್ಗಕ್ಕೆ ಆಗಮನ.

* ಇಂಡಿಗೋ. ಬೆಂಗಳೂರು-ಶಿವಮೊಗ್ಗ. ಮಧ್ಯಾಹ್ನ 12.15ಕ್ಕೆ ಬೆಂಗಳೂರಿನಿಂದ ಹೊರಟು, 1.25ಕ್ಕೆ ಶಿವಮೊಗ್ಗಕ್ಕೆ ಆಗಮನ. ಮಧ್ಯಾಹ್ನ 1.45ಕ್ಕೆ ಶಿವಮೊಗ್ಗದಿಂದ ನಿರ್ಗಮನ.

* ಸ್ಪೈಸ್ ಜೆಟ್. ಚೆನ್ನೈ-ಶಿವಮೊಗ್ಗ. ಬೆಳಗ್ಗೆ 10.40ಕ್ಕೆ ಚೆನ್ನೈನಿಂದ ಹೊರಟು, ಮಧ್ಯಾಹ್ನ 12.10ಕ್ಕೆ ಶಿವಮೊಗ್ಗಕ್ಕೆ ಆಗಮನ. ಸಂಜೆ 4.25ಕ್ಕೆ ಶಿವಮೊಗ್ಗದಿಂದ ನಿರ್ಗಮನ.

* ಸ್ಪೈಸ್‌ ಜೆಟ್. ಹೈದರಾಬಾದ್-ಶಿವಮೊಗ್ಗ. ಮಧ್ಯಾಹ್ನ 2.40ಕ್ಕೆ ಹೈದರಾಬಾದ್‌ನಿಂದ ಹೊರಟು, ಸಂಜೆ 4 ಗಂಟೆಗೆ ಶಿವಮೊಗ್ಗಕ್ಕೆ ಆಗಮನ. ಸಂಜೆ 5.10ಕ್ಕೆ ಹೈದರಾಬಾದ್‌ಗೆ ನಿರ್ಗಮನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+