ಎಫಿಲ್ ಟವರ್‌ಗಿಂತ ಹೆಚ್ಚು ಎತ್ತರದ ರೈಲ್ವೇ ಸೇತುವೆ ಮೇಲೆ ವಂದೇ ಭಾರತ್‌ ರೈಲು ಸಂಚಾರ ಯಾವಾಗ?-ಮಾಹಿತಿ

World Highest Railway Bridge: ಭಾರತೀಯ ರೈಲ್ವೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಲೇ ಇವೆ. ಹಾಗೆಯೇ ದೇಶದ ಈ ಭಾಗದಲ್ಲಿ ನಿರ್ಮಾಣ ಆಗಿರುವ ವಿಶ್ವದ ಅತೀ ಎತ್ತರದ ರೈಲ್ವೇ ಸೇತುವೆ ಉದ್ಘಾಟನೆಗೆ ಸಜ್ಜಾಗಿದ್ದು, ಇದರ ಮೇಲೆ ವಂದೇ ಭಾರತ್‌ ರೈಲು ಸಂಚಾರ ಯಾವಾಗ ಆಗಲಿದೆ ಎಂದು ಇಲ್ಲಿ ತಿಳಿಯಿರಿ. ಹಾಗೂ ಇದಕ್ಕೆ ತಗುಲಿದ ವೆಚ್ಚ ಹಾಗೂ ವಿಶೇಷತೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಪ್ಯಾರೀಸ್‌ನಲ್ಲಿನ ಎಫಿಲ್ ಟವರ್‌ಗಿಂತ ಹೆಚ್ಚು ಎತ್ತರದ ರೈಲ್ವೇ ಸೇತುವೆ ಭಾರತದ ಈ ಭಾಗದಲ್ಲಿ ನಿರ್ಮಾಣವಾಗಿದ್ದು, ಇದೇ ವರ್ಷವೇ ಈ ಸೇತುವೆ ಮೇಲೆ ರೈಲು ಸಂಚಾರ ಮಾಡಲಿದೆ ಎನ್ನವ ಮಾಹಿತಿ ಲಭ್ಯವಾಗಿದೆ.

Railway line over bridge height more than Eiffel tower going to start in India

ಈ ಸೇತುವೆಯನ್ನು 2024ರೊಳಗೆ ಉದ್ಘಾಟನೆ ಮಾಡಲಾಗುತ್ತದೆ ಎಂದು ಈ ಹಿಂದೆ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ ಅವರು ಇದರ ವಿಡಿಯೋ ಹಂಚಿಕೊಳ್ಳುವ ಮೂಲಕ ಹೇಳಿದ್ದರು. ಅದರಂತೆಯೇ ಇದೀಗ ಈ ಸೇತುವೆ ಉದ್ಘಾಟನೆಗೆ ಸಜ್ಜಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ಸೇತುವೆ ಮೇಲೆ ರೈಲುಗಳು ಸಂಚಾರ ಮಾಡಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತೀಯ ರೈಲ್ವೆ ನಿರ್ಮಾಣ ಮಾಡಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಈ ವರ್ಷವೇ ತೆರೆಯಲಿದೆ ಎಂದು ತಿಳಿದುಬಂದಿದೆ.

ಚೆನಾಬ್ ನದಿಗೆ ಅಡ್ಡಲಾಗಿ ಕಟ್ಟಲಾದ ಈ ಸೇತುವೆಯನ್ನು ಹೊಸ ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯಡಿ ಉದ್ಘಾಟನೆ ಮಾಡಲು ಸಿದ್ಧತೆ ನಡೆದಿದೆ. ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಕಾಟ್ರಾ-ಬನಿಹಾಳ್ ಸೆಕ್ಷನ್‌ನಲ್ಲಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಇದೇ ವರ್ಷ ಈ ಸೇತುವೆ ಮೂಲಕ ರೈಲು ಸಂಚಾರ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈ ಸೇತುವೆ ಜಾಗತಿಕವಾಗಿ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಯನ್ನಯ ಹೊಂದಿದೆ. ನದಿಯ ತಳಮಟ್ಟದಿಂದ 359 ಮೀಟರ್ ಎತ್ತರದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದ್ದು, ಪ್ಯಾರೀಸ್‌ನ ಎಫಿಲ್‌ ಟವರ್‌ಗಿಂತಲೂ ಎತ್ತರದಲ್ಲಿದೆ ಎಂದು ಹೇಳಲಾಗುತ್ತಿದೆ. ಇದು ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಇತರ ಪ್ರದೇಶಗಳ ಜೊತೆ ಸಂಪರ್ಕ ಕಲ್ಪಿಸುವ ಸೇತುವೆ ಆಗಿದೆ.

ಇನ್ನು ಇದು 93 ಡೆಕ್ ವಿಭಾಗಗಳನ್ನು ಹೊಂದಿದ್ದು, ಪ್ರತಿಯೊಂದರ ತೂಕ 85 ಟನ್ ಆಗಿದೆ. ಸೇತುವೆಯ ಎರಡೂ ಕಡೆಯಲ್ಲೂ ಬೃಹತ್‌ ಗಾತ್ರದ ಉಕ್ಕಿನ ಕಮಾನುಗಳ ಮೂಲಕ ಇದನ್ನು ಏಕಕಾಲಕ್ಕೆ ಅಳವಡಿಕೆ ಮಾಡಲಾಗಿದೆ. ಇದರ ಮುಖ್ಯ ಕಮಾನಿನ ಉದ್ದ 467 ಮೀಟರ್ ಆಗಿದ್ದು, ಇದು ಅತಿ ಉದ್ದದ ಕಮಾನು ಎನ್ನುವ ಹೆಗ್ಗಳಿಗೆ ಪಾತ್ರವಾಗಿದೆ.

ಚೆನಾಬ್ ಸೇತುವೆ ಯೋಜನೆಗಳನ್ನು ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ಅಂದಾಜು 1,486 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಮತ್ತು 266 ಕಿಲೋ ಮೀಟರ್‌ ಗಾಳಿಯ ವೇಗವನ್ನು ತಡೆದುಕೊಳ್ಳಲು ಸ್ಫೋಟ ನಿರೋಧಕವನ್ನು ನಿರ್ಮಾಣ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+